ಕನ್ನಡ ಪತ್ರಿಕಾ ಲೋಕ (ಭಾಗ ೨೦೬) - ದೇವರ ಸ್ವರ

ಕನ್ನಡ ಪತ್ರಿಕಾ ಲೋಕ (ಭಾಗ ೨೦೬) - ದೇವರ ಸ್ವರ

ಪಾಸ್ಟರ್ ಸುನಿಲ್ ಜಾನ್ ಡಿ'ಸೋಜರ "ದೇವರ ಸ್ಚರ"

ಉಡುಪಿ ಸಮೀಪದ ಶಂಕರಪುರದ ಬೇತೇಲ್ ಚರ್ಚ್ ಮತ್ತು "ವಿಶ್ವಾಸದ ಮನೆ" ಯ ಪಾಸ್ಟರ್ ಆಗಿರುವ ಸುನಿಲ್ ಜಾನ್ ಡಿ'ಸೋಜರು ನಡೆಸುತ್ತಿರುವ ಕ್ರೈಸ್ತ ಧಾರ್ಮೀಕ ಮಾಸಪತ್ರಿಕೆಯಾಗಿದೆ "ದೇವರ ಸ್ವರ". 2006ರಲ್ಲಿ ಆರಂಭವಾದ "ದೇವರ ಸ್ವರ"ವನ್ನು ಬೇತೇಲ್ ಚರ್ಚ್ ಟ್ರಸ್ಟ್ ನ ಡಿವೈನ್ ಜನರೇಷನ್ ಮಿನಿಸ್ಟ್ರೀಸ್ ವತಿಯಿಂದ ಪ್ರಕಾಶನಗೊಳಿಸಲಾಗುತ್ತಿದೆ.

ಮಂಗಳೂರು ಬೈಕಂಪಾಡಿಯ ಪ್ರಕಾಶ್ ಆಫ್ ಸೆಟ್ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿರುವ ಪತ್ರಿಕೆ, 24 ಪುಟದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿ. ವಾರ್ಷಿಕ ಚಂದಾ 120 ರೂಪಾಯಿಗಳು. ಆರೋಗ್ಯ ಸಂಬಂಧಿ ಮಾಹಿತಿಗಳು, ಕಥೆ, ಕವನ, ನಗೆಹನಿ, ಪದಬಂಧ ಮತ್ತು ಕ್ರೈಸ್ತ ಧಾರ್ಮಿಕ ಲೇಖನಗಳು  ದೇವರ ಸ್ವರದಲ್ಲಿ ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ