ಕನ್ನಡ ಪತ್ರಿಕಾ ಲೋಕ (ಭಾಗ ೨೦೭) - ಶಿವೋಹಂ

ಕನ್ನಡ ಪತ್ರಿಕಾ ಲೋಕ (ಭಾಗ ೨೦೭) - ಶಿವೋಹಂ

ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯದ "ಶಿವೋಹಂ"

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯ (ರಿ) ದ ಶ್ರೀ ಬಸವಾ ಎಂಟರ್ ಪ್ರೈಸಸ್ ನ ಶಿವೋಹಂ ಪ್ರಕಾಶನ ವಿಭಾಗದಿಂದ ಪ್ರಕಟಗೊಳ್ಳುತ್ತಿದ್ದ ಮಾಸಪತ್ರಿಕೆಯಾಗಿದೆ "ಶಿವೋಹಂ". ಹುಬ್ಬಳ್ಳಿ ಕೊಪ್ಪಿಕರ ರಸ್ತೆಯ ಮನಿಯಾರ ಕಾಂಪ್ಲೆಕ್ಸ್ ನ ಆಯುರ್ವೇದ ಔಷಧಗಳ ವಿತರಣಾ ಸಂಸ್ಥೆಯಾದ ಧನ್ವಂತರಿ ಆಲಯದಲ್ಲಿತ್ತು ಶಿವೋಹಂ ಮಾಸಪತ್ರಿಕೆಯ ಕಾರ್ಯಾಲಯ.

ಸುಮಾರು 14 ವರ್ಷಗಳ ಕಾಲ ಪ್ರಕಟಗೊಂಡ "ಶಿವೋಹಂ", ಕೊನೆಗೆ ಸಂಪಾದಕರು, ಪ್ರಕಾಶಕರು ಮತ್ತು ಮಾಲಕರಾಗಿದ್ದ ನಾರಾಯಣ ಲ. ಬಸವಾ ಅವರ ನಿಧನದ ನಂತರ 2020ರಲ್ಲಿ ಸ್ಥಗಿತಗೊಂಡಿತು. ಅಧ್ಯಾತ್ಮ, ಯೋಗ ಮತ್ತು ಆಯುರ್ವೇದ ವಿಷಯಗಳನ್ನು ಮುಂದಿಟ್ಟುಕೊಂಡು ವೈವಿಧ್ಯಮಯ, ಮೌಲಿಕ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.

ಎಂಟು ಪುಟಗಳ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳಾಗಿತ್ತು. ವಾರ್ಷಿಕ ಚಂದಾ ಮೊತ್ತ 40 ರೂಪಾಯಿಗಳಾಗಿತ್ತು. ವಿಷ್ಣು ಎಚ್ ಬಕಳೆ ಮುದ್ರಕರಾಗಿದ್ದರು. ಹುಬ್ಬಳ್ಳಿ ವೀರಪುರ ರಸ್ತೆಯ ಅಗಸರ್ ಗಲ್ಲಿಯಲ್ಲಿನ ಶ್ರೀ ಭವಾನಿ ಆಫ್ ಸೆಟ್ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು.

~ ಶ್ರೀರಾಮ ದಿವಾಣ