ಕನ್ನಡ ಪತ್ರಿಕಾ ಲೋಕ (ಭಾಗ ೨೨೨) - ಹಲೋ ಮಂಗಳೂರ್

ಕನ್ನಡ ಪತ್ರಿಕಾ ಲೋಕ (ಭಾಗ ೨೨೨) - ಹಲೋ ಮಂಗಳೂರ್

ರೋಹಿತ್ ರಾಜ್ ಅವರ "ಹಲೋ ಮಂಗಳೂರ್"

ಮಂಗಳೂರು ಮಹಾನಗರದಲ್ಲಿ ಕೇಬಲ್ ಟಿವಿ ನ್ಯೂಸ್ ಛಾನೆಲ್ ಒಂದನ್ನು ನಡೆಸುತ್ತಿದ್ದ ರೋಹಿತ್ ರಾಜ್ ಜೆ. ಅವರು ಒಂದೆರಡು ವರ್ಷಗಳ ಕಾಲ ಪ್ರಕಾಶಕರು, ಮಾಲಕರು ಆಗಿ ಮುನ್ನಡೆಸಿದ ಸಂಜೆ ದಿನಪತ್ರಿಕೆಯಾಗಿದೆ "ಹಲೋ ಮಂಗಳೂರ್". ಮಂಗಳೂರು ಡಾನ್ ಬಾಸ್ಕೋ ಅಡ್ಡ ರಸ್ತೆಯ ಕಾರಿಕ್ಕಲ್ ಕಾಂಪ್ಲೆಕ್ಸ್ ನಲ್ಲಿ ಪತ್ರಿಕಾ ಕಾರ್ಯಲಯ ಕಾರ್ಯವೆಸಗುತ್ತಿತ್ತು. ಬಿ. ಶೇಖರ್ ಅವರ ಬೋಳಾರದ ಲಕ್ಷ್ಮಿ ಅಫ್ ಸೆಟ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು.

ರಹೀಂ ಉಚ್ಚಿಲ್ ಅವರು ಸಂಪಾದಕರಾಗಿದ್ದರು. ಶ್ರೀರಾಮ ದಿವಾಣ ಸುದ್ಧಿ ಸಂಪಾದಕರಾಗಿದ್ದರು. ರವಿಶಂಕರ ಬೆಟ್ಟಂಪಾಡಿ ಉಪ ಸಂಪಾದಕರಾಗಿದ್ದರು. ಎರಡು ಪುಟಗಳ ಪತ್ರಿಕೆಗೆ ಒಂದು ರೂಪಾಯಿ ಬೆಲೆ ಇತ್ತು. ದ. ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸುದ್ಧಿಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುವು. ೨೦೦೩ರ ನವೆಂಬರ್ ಒಂದರಂದು ಆರಂಭಗೊಂಡ ಪತ್ರಿಕೆ ಎರಡು ವರ್ಷಗಳ ಕಾಲ ನಡೆದು ನಂತರ ಸ್ಥಗಿತಗೊಂಡಿತು. ೨೦೦೩ರ ಅಕ್ಟೋಬರ್ ೩೦ ಮತ್ತು ೩೧ರಂದು ಪ್ರಾಯೋಗಿಕ ಸಂಚಿಕೆಯನ್ನು ಹೊರತರಲಾಗಿತ್ತು.

~ ಶ್ರೀರಾಮ ದಿವಾಣ