ಕನ್ನಡ ಪತ್ರಿಕಾ ಲೋಕ (ಭಾಗ ೨೨೩) - ನಿಮ್ಮ ಅಂತರಂಗ

ಕನ್ನಡ ಪತ್ರಿಕಾ ಲೋಕ (ಭಾಗ ೨೨೩) - ನಿಮ್ಮ ಅಂತರಂಗ

ಟಿ. ಕೆ. ರಮೇಶ್ ಶೆಟ್ಟಿಯವರ "ನಿಮ್ಮ ಅಂತರಂಗ"

ಹಿರಿಯ ಪತ್ರಕರ್ತರೂ, ಉದ್ಯಮಿಗಳೂ ಆದ ತೀರ್ಥಹಳ್ಳಿಯ ಟಿ. ಕೆ. ರಮೇಶ್ ಶೆಟ್ಟಿ ಅವರು ಕಳೆದ ೨೪ಕ್ಕೂ ಅಧಿಕ ವರ್ಷಗಳಿಂದ ಮುನ್ನಡೆಸುತ್ತಿರುವ ವಾರಪತ್ರಿಕೆಯಾಗಿದೆ "ನಿಮ್ಮ ಅಂತರಂಗ". ಎಂಟು ಪುಟಗಳ, ಟ್ಯಾಬ್ಲಾಯ್ಡ್ ಮಾದರಿಯ ಸದಭಿರುಚಿಯ ವಾರಪತ್ರಿಕೆಯಾದ ನಿಮ್ಮ ಅಂತರಂಗ ತೀರ್ಥಹಳ್ಳಿ ತಾಲೂಕಿನ ಜನಪ್ರಿಯ ಮತ್ತು ಪ್ರಭಾವೀ ಪತ್ರಿಕೆಯಾಗಿದೆ.

ಸುದ್ಧಿಗಳು, ಅಂಕಣ ಬರಹಗಳ ಸಹಿತ ವೈವಿಧ್ಯಮಯ ಲೇಖನಗಳು, ಸಾಹಿತ್ಯಿಕ, ಸಾಮಾಜಿಕ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ. ಸಂಪಾದಕರು, ಪ್ರಕಾಶಕರು, ಮುದ್ರಕರು ಆಗಿರುವ ಟಿ. ಕೆ. ರಮೇಶ್ ಶೆಟ್ಟಿ ಅವರು "ನಿಮ್ಮ ಅಂತರಂಗ" ಆರಂಭಿಸುವ ಮೊದಲು "ಮುಂಗಾರು" ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದವರು.

~ ಶ್ರೀರಾಮ ದಿವಾಣ