ಕನ್ನಡ ಪತ್ರಿಕಾ ಲೋಕ (ಭಾಗ ೫೨) - ಕನ್ನಡ ಡಿಂಡಿಮ

ಕನ್ನಡ ಪತ್ರಿಕಾ ಲೋಕ (ಭಾಗ ೫೨) - ಕನ್ನಡ ಡಿಂಡಿಮ

‘ಕನ್ನಡ ಡಿಂಡಿಮ’ ಎಂಬ ಪಾಕ್ಷಿಕ ಪತ್ರಿಕೆ ಉಡುಪಿಯಿಂದ ಪ್ರಕಟವಾಗುತ್ತಿತ್ತು. ಹನ್ನೆರಡು ಪುಟಗಳ ಟ್ಯಾಬಲಾಯ್ಡ್ ಆಕಾರದ ಈ ಪತ್ರಿಕೆಯಲ್ಲಿ ಅಪರಾಧಿ ಜಗತ್ತಿನ ವರದಿಗಳು, ರಾಜಕೀಯ ಸುದ್ದಿಗಳು, ಚಲನಚಿತ್ರ ರಂಗದ ಸುದ್ದಿಗಳು ಪ್ರಕಟವಾಗುತ್ತಿದ್ದವು. ಪತ್ರಿಕೆಯ ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣ ಹೊಂದಿದ್ದವು.

ನಮ್ಮಲ್ಲಿ ಲಭ್ಯ ಇರುವ ಪತ್ರಿಕೆಯಲ್ಲಿ ಎಲ್ಲೂ ಯಾವ ತಿಂಗಳ, ವರ್ಷದ ಪತ್ರಿಕೆ ಎಂದು ನಮೂದಾಗಿಲ್ಲ. ಈ ಕಾರಣದಿಂದ ಪತ್ರಿಕೆಯು ಸೂಕ್ತ ಸಮಯಕ್ಕೆ ಸರಿಯಾಗಿ ಮುದ್ರಣವಾಗಿ ಹೊರ ಬರುತ್ತಿರಲಿಲ್ಲ ಎನ್ನಬಹುದು. ಸಂಪುಟ ಎರಡು ಎಂದು ನಮೂದಾಗಿರುವುದರಿಂದ ಪತ್ರಿಕೆ ಪ್ರಾರಂಭವಾಗಿ ಎರಡು ವರ್ಷಗಳು ಕಳೆದಿವೆ ಎನ್ನಬಹುದು. ೨೦೦೦-೦೨ರ ವರ್ಷದ ಸಮಯದಲ್ಲಿ ಈ ಪತ್ರಿಕೆ ಮಾರುಕಟ್ಟೆಯಲ್ಲಿತ್ತು ಎಂದು ಅಂದಾಜು ಮಾಡಬಹುದು. 

ಪತ್ರಿಕೆಯನ್ನು ದಿನಕರ ಎಸ್ ಬೆಂಗ್ರೆ ಅವರು ಸಂಪಾದಕ, ಮುದ್ರಕ ಹಾಗೂ ಪ್ರಕಾಶಕರಾಗಿ ಮುನ್ನಡೆಸುತ್ತಿದ್ದರು. ಸುದ್ದಿ ಸಂಪಾದಕರಾಗಿ ಸುರೇಶ್ ಹೆಬ್ರಿ ಅವರು ಇದ್ದರು. ಪತ್ರಿಕೆಯು ಡಿಂಡಿಮ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಕಲ್ಸಂಕ, ಉಡುಪಿ ಇಲ್ಲಿ ಮುದ್ರಣವಾಗುತ್ತಿತ್ತು. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ.೫.೦೦ ಆಗಿತ್ತು. ಕಾಲ ಕ್ರಮೇಣ ಪತ್ರಿಕೆಯು ತನ್ನ ಮುದ್ರಣವನ್ನು ಸ್ಥಗಿತಗೊಳಿಸಿತು. 

-ಶ್ರೀರಾಮ ದಿವಾಣ, ಉಡುಪಿ