ಕನ್ನಡ ಪತ್ರಿಕಾ ಲೋಕ (ಭಾಗ ೫೯) - ಸುದ್ದಿಮನೆ

ಕನ್ನಡ ಪತ್ರಿಕಾ ಲೋಕ (ಭಾಗ ೫೯) - ಸುದ್ದಿಮನೆ

ಸಂತೋಷ್ ಕೋಣಿ ಇವರ ಸಂಪಾದಕತ್ವದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಹೊರ ಬರುತ್ತಿದ್ದ ವಾರ ಪತ್ರಿಕೆ ‘ಸುದ್ದಿಮನೆ'. ೨೦೧೪ರ ಆಸುಪಾಸಿನಲ್ಲಿ ಪ್ರಾರಂಭವಾದ ಪತ್ರಿಕೆಯು ತಾಲೂಕಿನ ಸಭೆ ಸಮಾರಂಭಗಳು ಹಾಗೂ ಬಿಡಿ ಸುದ್ದಿಗಳಿಗೆ ಮೀಸಲಾಗಿತ್ತು. ಪ್ರತೀ ವಾರ ತಾಲೂಕಿನ ಸಮಗ್ರ ಸುದ್ದಿಯನ್ನು ಹೊತ್ತು ತರುತ್ತಿದ್ದ ಪತ್ರಿಕೆ ಇದು. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಗಣೇಶ ಹಬ್ಬದ ಸಮಯದ ವಿಶೇಷಾಂಕ. ಇದರಲ್ಲಿ ಗಣೇಶೋತ್ಸವದ ಬಗ್ಗೆ ಕೋಟೇಶ್ವರದ ವೈ ಎನ್ ವೆಂಕಟೇಶಮೂರ್ತಿ ಭಟ್ಟ ಹಾಗೂ ಗಂಗೊಳ್ಳಿಯ ಜಿ ಕೇಶವ ಪೈ ಇವರು ವಿಶೇಷ ಅಂಕಣ ಬರಹಗಳನ್ನು ಬರೆದಿದ್ದಾರೆ. 

ಟ್ಯಾಬಲಾಯ್ಡ್ ಆಕಾರದಲ್ಲಿ ೧೨ ಪುಟಗಳನ್ನು ಹೊಂದಿರುವ ಪತ್ರಿಕೆಯ ನಾಲ್ಕು ಪುಟಗಳು ವರ್ಣಮಯವಾಗಿ ಹಾಗೂ ಉಳಿದ ಪುಟಗಳು ಕಪ್ಪು ಬಿಳುಪು ಆಗಿ ಮುದ್ರಣಗೊಂಡಿವೆ. ಪತ್ರಿಕೆಯು ಸುದ್ದಿಮನೆ ಪ್ರಿಂಟರ್ಸ್, ಕುಂದಾಪುರ ಇಲ್ಲಿ ಮುದ್ರಣಗೊಂಡು ಮಾರುಕಟ್ಟೆಗೆ ಬರುತ್ತಿತ್ತು. ಬಿಡಿಪ್ರತಿಯೊಂದರ ಬೆಲೆ ರೂ.೬.೦೦ ಆಗಿದ್ದು, ವಾರ್ಷಿಕ ಚಂದಾ ೩೬೦.೦೦ ರೂ. ಗಳಾಗಿದ್ದವು. ಪತ್ರಿಕೆ ಈಗಲೂ ಮುದ್ರಣವಾಗುತ್ತಿದೆಯೇ ಎನ್ನುವ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ.