ಕನ್ನಡ ಪತ್ರಿಕಾ ಲೋಕ (ಭಾಗ ೬೨) - ಕಲ್ಯಾಣ ಕಿರಣ

ಕನ್ನಡ ಪತ್ರಿಕಾ ಲೋಕ (ಭಾಗ ೬೨) - ಕಲ್ಯಾಣ ಕಿರಣ

ಪೂಜ್ಯ ಮಾತೆ ಕಸ್ತೂರಿದೇವಿ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಮಾಸಿಕ ‘ಕಲ್ಯಾಣ ಕಿರಣ'. ವಿಶ್ವ ಗುರು ಬಸವಣ್ಣರ ತತ್ವಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೊರಬರುತ್ತಿದ್ದ ಪತ್ರಿಕೆ ಇದು. ಬೆಂಗಳೂರು ರಾಜಾಜಿನಗರದಲ್ಲಿರುವ ಬಸವ ಮಂಟಪದಲ್ಲಿ ಪ್ರಕಾಶಿತಗೊಂಡು, ಪದ್ಮಶ್ರೀ ಪ್ರಿಂಟರ್ಸ್ ನಲ್ಲಿ ಮುದ್ರಿತಗೊಂಡು ಹೊರಬರುತ್ತಿದ್ದ ಮಾಸಪತ್ರಿಕೆ. ಪೂಜ್ಯ ಅಲ್ಲಮ ಪ್ರಭು ಸ್ವಾಮೀಜಿ ಅವರು ಈ ಪತ್ರಿಕೆಯ ಪ್ರಕಾಶಕರಾಗಿದ್ದರು. 

ತುಷಾರ-ಮಯೂರ ಆಕಾರದ ಈ ಪತ್ರಿಕೆಯ ರಕ್ಷಾಪುಟಗಳು ವರ್ಣರಂಜಿತವಾಗಿದ್ದು, ಒಳಪುಟಗಳು ಕಪ್ಪು ಬಿಳುಪು ಆಗಿದ್ದವು. ೫೨ ಪುಟಗಳ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಹಲವಾರು ವಿಷಯಗಳು ಪ್ರಕಟವಾಗುತ್ತಿದ್ದುವು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಆಗಸ್ಟ್ ೨೦೦೫ರ ಸಂಚಿಕೆ. ಇದನ್ನು ಗಮನಿಸಿದರೆ ಪತ್ರಿಕೆಯು ೧೯೭೦ರ ಆಸುಪಾಸಿನಲ್ಲಿ ಪ್ರಾರಂಭವಾಗಿರಬಹುದು ಎಂದು ಅಂದಾಜಿಸಬಹುದಾಗಿದೆ. ಇದು ಬಸವ ಪಂಚಮಿಯ ವಿಶೇಷ ಸಂಚಿಕೆ ಎಂದು ಮುದ್ರಿತವಾಗಿದೆ. ಬಿಡಿ ಪ್ರತಿಯ ಬೆಲೆ ೫ ರೂ ಆಗಿದ್ದು, ವಾರ್ಷಿಕ ಚಂದಾ ೫೦.೦೦ ರೂಪಾಯಿಗಳಾಗಿದೆ.

ಈ ಪತ್ರಿಕೆಯಲ್ಲಿ ಪಿ.ಸಿ.ಆಂತೋಣಿ ಸ್ವಾಮಿ, ಶ್ರೀ ಸಿದ್ಧರಾಮ ಸ್ವಾಮೀಜಿ, ನಾಗನೂರು, ಭರತ್ ದೇಸಾಯಿ, ಸರೋಜಮ್ಮ ನಾಗರಾಜು ಮೊದಲಾದವರ ಬರಹಗಳಿವೆ. ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿಗಳು ದೊರಕುತ್ತಿಲ್ಲ.

Comments

Submitted by Aravind M.S Mon, 06/06/2022 - 12:18

Good