ಕನ್ನಡ ಪತ್ರಿಕಾ ಲೋಕ (ಭಾಗ ೬೭) - ಗ್ರೀನ್ ಪವರ್

ಮೈಸೂರಿನಿಂದ ಪ್ರಕಟವಾಗುತ್ತಿರುವ ನಿರ್ಭಯ, ನಿರಂತರ ಪರಿಸರ ಪ್ರಿಯರ ತಿಂಗಳ ಪತ್ರಿಕೆ 'ಗ್ರೀನ್ ಪವರ್'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣರಂಜಿತವಾಗಿದ್ದು ಉಳಿದ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಸೆಪ್ಟೆಂಬರ್ ೧೦, ೨೦೧೯ರ ಸಂಚಿಕೆ. ಇದು ಪತ್ರಿಕೆಯ ಮೊದಲನೇ ವರ್ಷದ ಮೂರನೇ ಸಂಚಿಕೆ.
ರಾಜು ಬಿ.ಕನ್ನಲೆ ಇವರು ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಈ ಪತ್ರಿಕೆಯ ಸಲಹಾ ಮಂಡಳಿಯಲ್ಲಿ ಬಿ ಎಸ್ ಸೋಮಶೇಖರ್, ಪ್ರಕಾಶ್ ಬಾಬು, ಡಾ. ತುಕಾರಾಮ್ ಎಸ್, ಡಾ. ಎಲ್ ಪ್ರಸನ್ನಕುಮಾರ್ ಮೊದಲಾದವರಿದ್ದಾರೆ. ರಾಮು ಜಿ ಕೊಪ್ಪಲು ಅವರು ಪತ್ರಿಕೆಯ ವಿನ್ಯಾಸ ಮಾಡಿದ್ದಾರೆ. ಮೈಸೂರಿನ ಅಮೃತ ವಿದ್ಯಾಪೀಠ ರಸ್ತೆಯಲ್ಲಿರುವ ಗ್ರಾಮೀಣ ಪ್ರಕಾಶನ ಸಂಸ್ಥೆಯಿಂದ ಪ್ರಕಾಶಿತಗೊಂಡು ಮಾರುಕಟ್ಟೆಗೆ ಬರುತ್ತಿರುವ ಪತ್ರಿಕೆಯು ಮೈಸೂರಿನ ಗುಪ್ತ ಆಫ್ ಸೆಟ್ ಪ್ರಿಂಟರ್ಸ್ ಇಲ್ಲಿ ಮುದ್ರಣಗೊಳ್ಳುತ್ತಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯಲ್ಲಿ ಮರೆಯಾದ ಗಾಂಧೀ ಮಾರ್ಗದ ಹೋರಾಟಗಾರ ಜಿ.ಡಿ.ಅಗರ್ ವಾಲ್ ಬಗ್ಗೆ ಮುಖ್ಯ ಲೇಖನವಿದೆ. ಇದರ ಜೊತೆಗೆ ಹುಲಿವಾನ ಕುರಿಗಾಯಿ ಚಿಕ್ಕಣ್ಣನ ಸ್ವಾವಲಂಬನೆಯ ಹಾದಿ, ಪಕ್ಷಿಗಳ ಸುರಕ್ಷತೆಗಾಗಿ ಮೌನ ಮುರಿಯೋಣ, ಅಂತರ್ಜಲ ಹೆಚ್ಚಿಸಲು ನೂರೆಂಟು ದಾರಿಗಳು ಹಾಗೂ ಗೂಬೆ ಪಕ್ಷಿಗಳ ಬಗ್ಗೆ ಲೇಖನಗಳಿವೆ. ಇದರ ಜೊತೆಗೆ ಪುಟ್ಟ ಪುಟ್ಟ ಸ್ವಾರಸ್ಯಕರ ಸಂಗತಿಗಳು ಪ್ರಕಟವಾಗಿವೆ. ಹೊಸ ಪುಸ್ತಕ ಪ್ರಕಟಣೆಯ ಬಗ್ಗೆಯೂ ಮಾಹಿತಿ ಇದೆ.
ಗ್ರೀನ್ ಪವರ್ ಪತ್ರಿಕೆಯ ಬಿಡಿ ಪ್ರತಿ ೧೦.೦೦ ರೂ ಆಗಿದ್ದು ವಾರ್ಷಿಕ ಚಂದಾ ರೂ ೧೧೦.೦೦ ರೂ ಆಗಿದೆ. ಪತ್ರಿಕೆಯು ಪ್ರಸ್ತುತ ಪ್ರಕಟವಾಗುತ್ತಿದೆಯೇ ಎಂನ್ನುವುದರ ಬಗ್ಗೆ ಯಾವುದೇ ಮಾಹಿತಿಗಳು ಸಿಗುತ್ತಿಲ್ಲ.