ಕನ್ನಡ ಪತ್ರಿಕಾ ಲೋಕ (ಭಾಗ ೭೭) - ನವಲೋಕ ಮೀಡಿಯ ನ್ಯೂಸ್
ಸಂತೋಷ್ ಕುಮಾರ್ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಮಾಸ ಪತ್ರಿಕೆ 'ನವಲೋಕ ಮೀಡಿಯ ನ್ಯೂಸ್'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ೪ ಪುಟ ವರ್ಣರಂಜಿತವೂ, ಉಳಿದ ೪ ಪುಟಗಳು ಕಪ್ಪು ಬಿಳುಪಾಗಿಯೂ ಮುದ್ರಿತವಾಗುತ್ತಿತ್ತು. ಪತ್ರಿಕೆಯು ಮಂಗಳೂರಿನ ಕಾರ್ ಸ್ಟ್ರೀಟ್ ನ ಫ್ಲವರ್ ಮಾರ್ಕೆಟ್ ಕಾಂಪ್ಲೆಕ್ಸ್ ನಲ್ಲಿ ಕಚೇರಿಯನ್ನು ಹೊಂದಿತ್ತು.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೨೫, ೨೦೨೧ರ ಸಂಚಿಕೆಯಾಗಿದ್ದು, ಈ ಸಮಯ ಪತ್ರಿಕೆಗೆ ೨ ವರ್ಷ ಹತ್ತು ತಿಂಗಳು ಆಗಿತ್ತು. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ.೮.೦೦. ಪತ್ರಿಕೆಯು ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿತ್ತು. ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳ ಜೊತೆ ಸಿನೆಮಾ ರಂಗದ ಸುದ್ದಿಗಳು ಇರುತ್ತಿದ್ದವು. ಪತ್ರಿಕೆಯ ತುಂಬೆಲ್ಲಾ ಜಾಹೀರಾತು ತುಂಬಿಕೊಂಡಿದೆ. ಪತ್ರಿಕೆಯು ಈಗಲೂ ಮುದ್ರಿತವಾಗುತ್ತಿದೆಯೋ ಎಂಬ ಬಗ್ಗೆ ಯಾವುದೇ ಮಾಹಿತಿಗಳು ದೊರಕುತ್ತಿಲ್ಲ.