ಕನ್ನಡ ಪತ್ರಿಕಾ ಲೋಕ (ಭಾಗ ೭೮) - ಕರಾವಳಿ ಕ್ರೈಂ ಎಕ್ಸ್ ಪ್ರೆಸ್

ಕನ್ನಡ ಪತ್ರಿಕಾ ಲೋಕ (ಭಾಗ ೭೮) - ಕರಾವಳಿ ಕ್ರೈಂ ಎಕ್ಸ್ ಪ್ರೆಸ್

ಜೆ.ಬಿ.ಜಾನ್ಸನ್ (ಜೋನ್ ಬಾಪ್ಟಿಶ್) ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಕರಾವಳಿ ಕ್ರೈಂ ಎಕ್ಸ್ ಪ್ರೆಸ್'. ಪತ್ರಿಕೆಯು ಕಳೆದ ಹತ್ತು ವರ್ಷಗಳಿಂದ ‘ಅವ್ಯವಸ್ಥೆ ವಿರುದ್ಧ ನಮ್ಮ ಹೋರಾಟ' ಎಂಬ ಫೋಷ ವಾಕ್ಯದೊಂದಿಗೆ ಪ್ರಕಟವಾಗುತ್ತಿದೆ. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು. 

ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ಕ್ರೈಂ ಸುದ್ದಿಗಳು, ರಾಜಕೀಯ ಸುದ್ದಿಗಳು ಮತ್ತು ಸಿನೆಮಾ ಸುದ್ದಿಗಳು ಪ್ರಕಟವಾಗುತ್ತವೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಫೆಬ್ರವರಿ ೧೫, ೨೦೨೨ರ ಸಂಚಿಕೆ. ಈ ಸಂಚಿಕೆಯಲ್ಲಿ ಹಿಜಾಬ್ ಪ್ರಕರಣ ಮತ್ತು ಮಾಜಿ ಶಾಸಕ ಬಿ ಎಂ ಇದಿನಬ್ಬ ಅವರ ಕುಟುಂಬದ ಐ ಸಿ ಎಸ್ ನಂಟಿನ ಕಥೆ ಪ್ರಮುಖ ವಿಷಯಗಳಾಗಿವೆ. ಪತ್ರಿಕೆಯ ಕಚೇರಿ ಮಂಗಳೂರು ತಾಲೂಕಿನ ಗುರುಪುರದಲ್ಲಿದ್ದು, ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿತವಾಗಿ ಹೊರಬರುತ್ತದೆ. ಪತ್ರಿಕೆಯ ಬಿಡಿಪ್ರತಿಯ ಬೆಲೆ ರೂ ೫.೦೦ ಆಗಿದೆ.