ಕನ್ನಡ ಪತ್ರಿಕಾ ಲೋಕ (ಭಾಗ ೮೧) - MPMLA’s ನ್ಯೂಸ್
ಅಶೋಕ್ ಶೆಟ್ಟಿ ಬಿ ಎನ್ ಸಾರಥ್ಯದಲ್ಲಿ ಕಳೆದ ೧೬ ವರ್ಷಗಳಿಂದ ಹೊರಬರುತ್ತಿರುವ ಕನ್ನಡ-ಇಂಗ್ಲಿಷ್ ದ್ವಿಭಾಷಾ ಮಾಸಿಕವೇ ‘MPMLA’s ನ್ಯೂಸ್’. ಟ್ಯಾಬಲಾಯ್ಡ್ ಆಕೃತಿಯ ೮ ಪುಟಗಳು. ಎಲ್ಲಾ ಪುಟಗಳು ವರ್ಣಮಯ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜನವರಿ ೨೦೨೨ರ ಸಂಚಿಕೆ (ಸಂ:೧೬, ಸಂ:೧). ಈ ಸಂಚಿಕೆಯಲ್ಲಿ ಹೇರಂಬಾ ಇಂಡಸ್ಟ್ರೀಸ್ ಇದರ ಚೇರ್ ಮೆನ್ ಸದಾಶಿವ ಕೆ ಶೆಟ್ಟಿ ಹಾಗೂ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ ಬಗ್ಗೆ ಮುಖಪುಟ ಲೇಖನಗಳಿವೆ. ಇದರ ಜೊತೆಗೆ ಜನ ಮೆಚ್ಚಿದ ಶಾಸಕ ‘ವೇದವ್ಯಾಸ ಕಾಮತ್' ಬಗ್ಗೆಯೂ ಲೇಖನವಿದೆ. ಸಂಪಾದಕೀಯದಲ್ಲಿ ಅಶೋಕ್ ಶೆಟ್ಟಿ ಇವರು ‘ಮೇಕೆದಾಟು ಪಾದಯಾತ್ರೆ ಎಷ್ಟು ಸರಿ?’ ಎಂಬ ಬಗ್ಗೆ ಬರೆದಿದ್ದಾರೆ.
ಪತ್ರಿಕೆಯಲ್ಲಿ ರಾಜಕೀಯ, ಕ್ರೈಂ, ಸಾಧನಾಶೀಲ ವ್ಯಕ್ತಿ ಪರಿಚಯ ಮೊದಲಾದ ಲೇಖನಗಳು ಮೂಡಿ ಬರುತ್ತಿವೆ. ಪತ್ರಿಕೆಯ ಕಚೇರಿ ಜನಾರ್ಧನ ನಗರ, ಜೆಪ್ಪು ಕುಡ್ಪಾಡಿಯಲ್ಲಿದೆ. ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ. ಪತ್ರಿಕೆಯ ಮುಖಬೆಲೆ ರೂ.೬.೦೦ ಆಗಿದೆ. ಚಂದಾ ವಿವರದ ಬಗ್ಗೆ ಯಾವುದೇ ಮಾಹಿತಿ ಪತ್ರಿಕೆಯಲ್ಲಿ ಕಂಡು ಬರುವುದಿಲ್ಲ. ಪತ್ರಿಕೆಯು ಈಗಲೂ ಮುದ್ರಣವಾಗಿ ಮಾರುಕಟ್ಟೆಗೆ ಬರುತ್ತಿದೆ ಎಂಬ ಮಾಹಿತಿ ಇದೆ.