ಕನ್ನಡ ಪತ್ರಿಕಾ ಲೋಕ (ಭಾಗ ೮೫) - ಬೇಟೆ

ಕನ್ನಡ ಪತ್ರಿಕಾ ಲೋಕ (ಭಾಗ ೮೫) - ಬೇಟೆ

ಗಂಗೇನಹಳ್ಳಿ ಕೃಷ್ಣಮೂರ್ತಿ ಇವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ ‘ಬೇಟೆ'. ಪತ್ರಿಕೆಯು ಮೈಸೂರಿನ ಹುಣಸೂರು ತಾಲೂಕಿನ ಗಂಗೇನಹಳ್ಳಿಯಿಂದ ಪ್ರಕಟವಾಗುತ್ತಿದೆ. ಮೈಸೂರಿನ ಉದಯಗಿರಿಯಲ್ಲಿರುವ ಜಿ.ಕೆ.ಪ್ರಿಂಟರ್ಸ್ ಇಲ್ಲಿ ಮುದ್ರಿತವಾಗುತ್ತಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲೈ ೨೦೨೨ (ಸಂಪುಟ ೧೫, ಸಂಚಿಕೆ ೧೩) ತಿಂಗಳ ಸಂಚಿಕೆ.

ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣ. ಪತ್ರಿಕೆಯಲ್ಲಿ ‘ಸುಪ್ರೀಂ ಕೋರ್ಟ್ ನ ಪರ್ಮೀಷನ್ ನಿಂದ ಮಂಚದ ಹೂಗಳಿಗೆ ಪ್ರಮೋಷನ್, ಹೋಟೇಲ್ ಉದ್ಯಮಿ ಶೃಂಗಾರ್ ಎಂ ಸಂಜೀವ ಶೆಟ್ಟಿ ಹಾಗೂ ಬಡವರ ಅಭಿವೃದ್ಧಿಗಾಗಿ ಸಮೃದ್ಧಿ ಸಂಸ್ಥೆ ಕಟ್ಟಿದ ವಿಜಯ ಕುಮಾರ್’ ಬಗ್ಗೆ ಮಾಹಿತಿ ನೀಡುವ ಮುಖಪುಟ ಲೇಖನಗಳಿವೆ. ಸಂಪಾದಕರಾದ ಗಂಗೇನಹಳ್ಳಿ ಕೃಷ್ಣಮೂರ್ತಿ ಇವರು G.K. ಎಂಬ ಹೆಸರಿನಲ್ಲಿ ‘ಹಸಿದ ಮಾತು' ಎಂಬ ಸಂಪಾದಕೀಯವನ್ನು ಬರೆಯುತ್ತಾರೆ. ಮಂಜೇಗೌಡ ಕೆ. ಇವರು ‘ಬಿಚ್ಚು ಜಗತ್ತು’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ.

ಪತ್ರಿಕೆಯ ಅಫಿದಾವಿತ್ ನಲ್ಲಿ ಪ್ರಾರಂಭಿಕ ಸಂಚಿಕೆ ಪ್ರಕಟವಾದ ದಿನ ಆಗಸ್ಟ್ ೨೦೦೭ ಎಂದಿದೆ. ಪತ್ರಿಕೆಯ ಬಿಡಿಪ್ರತಿಯ ಬೆಲೆ ರೂ.೫.೦೦. ಚಂದಾ ಹಣದ ಬಗ್ಗೆ ಯಾವುದೇ ಮಾಹಿತಿಗಳು ಪತ್ರಿಕೆಯಲ್ಲಿ ಇಲ್ಲ. ಪತ್ರಿಕೆಯು ಈಗಲೂ ಪ್ರತೀ ತಿಂಗಳು ಮುದ್ರಣವಾಗುತ್ತಿದೆ ಎಂದು ಮಾಹಿತಿ ದೊರೆತಿದೆ.