ಕನ್ನಡ ಪತ್ರಿಕಾ ಲೋಕ (ಭಾಗ ೮೮) - ಕುಂದಾಪುರ ಮಿತ್ರ
ಟಿ.ಪಿ.ಮಂಜುನಾಥ ಇವರ ಸಾರಥ್ಯದಲ್ಲಿ ಕಳೆದ ೧೩ ವರ್ಷಗಳಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಕುಂದಾಪುರ ಮಿತ್ರ’. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು, ಎಲ್ಲವೂ ಕಪ್ಪು-ಬಿಳುಪು ಮುದ್ರಣ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೧೬-೩೧, ೨೦೨೨ (ಸಂಪುಟ-೧೩, ಸಂಚಿಕೆ-೨೩). ಇದು ದೀಪಾವಳಿ ಸಂಚಿಕೆಯಾದುದರಿಂದ ಬಹಳಷ್ಟು ಜಾಹೀರಾತುಗಳು ಪತ್ರಿಕೆಯಲ್ಲಿವೆ.
ಈ ಸಂಚಿಕೆಯ ಮುಖಪುಟ ಲೇಖನವಾಗಿ ‘ಯುವ ಮೆರಿಡಿಯನ್ ಗ್ರೂಪ್ಸ್ ಗೆ ಬೆಸ್ಟ್ ಇನೋವೇಟಿವ್ ಎಂಟರ್ ಪ್ರೈಸಸ್ ಅವಾರ್ಡ್, ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಜನರೇಟರ್ ಕೊಡುಗೆ ಮುಂತಾದ ಲೇಖನಗಳಿವೆ. ಪತ್ರಿಕೆಯಲ್ಲಿ ಸುಮಿತ್ರಾ ಐತಾಳ್, ಕುಂದಾಪುರ, ವಿದ್ಯಾ ಉಡುಪಿ, ಚೈತ್ರ ರಾಜೇಶ್ ಕೋಟ, ವಿವೇಕಾನಂದ ಹೆಚ್ ಕೆ ಮುಂತಾದವರ ಅಂಕಣ ಬರಹಗಳಿವೆ.
ಪತ್ರಿಕೆಯ ಸಂಪಾದಕ, ಮುದ್ರಕ, ಮಾಲೀಕರಾಗಿ ಟಿ.ಪಿ.ಮಂಜುನಾಥ್ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯ ಕಚೇರಿಯು ಕುಂದಾಪುರದಲ್ಲಿದ್ದು, ಮುದ್ರಣವನ್ನು ಮಂಗಳೂರಿನ ಯೆಯ್ಯಾಡಿಯಲ್ಲಿರುವ ದಿಗಂತ ಮುದ್ರಣದಲ್ಲಿ ಮಾಡಿಸುತ್ತಿದ್ದಾರೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ.೭.೦೦ ಆಗಿದ್ದು, ವಾರ್ಷಿಕ ಚಂದಾ ಬಗ್ಗೆ ಮಾಹಿತಿ ಇಲ್ಲ.