ಕನ್ನಡ ಪತ್ರಿಕಾ ಲೋಕ (ಭಾಗ ೯೦) - ಕನ್ನಡ ನಾಡಿನ ಇಂಡಿಯನ್ ನ್ಯೂಸ್

ಕನ್ನಡ ಪತ್ರಿಕಾ ಲೋಕ (ಭಾಗ ೯೦) - ಕನ್ನಡ ನಾಡಿನ ಇಂಡಿಯನ್ ನ್ಯೂಸ್

ಅಂದುಕಾ ಎ.ಎಸ್. ಇವರ ಸಂಪಾದಕತ್ವದಲ್ಲಿ ಕಳೆದ ಆರು ವರ್ಷಗಳಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕನ್ನಡ ನಾಡಿನ ಇಂಡಿಯನ್ ನ್ಯೂಸ್' ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಡಿಸೆಂಬರ್ ೧೨, ೨೦೨೨ (ಸಂಪುಟ-೦೬, ಸಂಚಿಕೆ-೧೨೨). ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು ೮ ಪುಟಗಳು ಕಪ್ಪು ಬಿಳುಪು ವರ್ಣದ ಮುದ್ರಣ ಹೊಂದಿದೆ. 

ಪತ್ರಿಕೆಯಲ್ಲಿ ‘ನಮ್ಮೂರಿನ ರಾಜಕಾರಣಿಗಳೂ.. ಅನಾಥವಾಗಿ ಹೋದ ಗಾಂಧಿ ಮೈದಾನವೂ..' (ಸಂಪಾದಕೀಯ) ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವ, ಬೆಂಗಳೂರಿನ ಪುಡಿ ರೌಡಿಗಳು ಅಂದರ್' ಮೊದಲಾದ ರಾಜಕೀಯ, ಕ್ರೈಂ ಹಾಗೂ ಸಾಂಸ್ಕೃತಿಕ ಬರಹಗಳಿವೆ. ‘ಕಾಫಿ ಹುಟ್ಟಿನ ಕಥೆ’ ಎಂಬ ಮಾಹಿತಿ ಪೂರ್ಣ ಲೇಖನವಿದೆ. ಕಾಶ್ಮೀರದಿಂದ ಪಾದಯಾತ್ರೆ ಮಾಡಿ ಶಬರಿಮಲೆಗೆ ತೆರಳುತ್ತಿರುವ ಮಂಗಳೂರಿನ ಪ್ರಭಾತ್ ಎಂಬ ಯುವಕನ ಕಥೆಯಿದೆ. ಪತ್ರಿಕೆಯಲ್ಲಿ ಕೆಲವು ಪ್ರಚಲಿತ ವಿದ್ಯಮಾನಗಳ ಸುದ್ದಿಗಳಿವೆ. ಜಾಹೀರಾತುಗಳೂ ಇವೆ.

ಪತ್ರಿಕೆಯು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಬಂಕೇಶ್ವರದಲ್ಲಿ ಕಚೇರಿಯನ್ನು ಹೊಂದಿದ್ದು ಹುಮಾಯೂನ್ ಎಂಬವರು ಪ್ರಕಾಶಕರಾಗಿದ್ದಾರೆ. ಪತ್ರಿಕೆ ದಿಗಂತ ಮುದ್ರಣ, ಮಂಗಳೂರು ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ ೪.೦೦. ಚಂದಾ ಅವಧಿಗಳ ಬಗ್ಗೆ ಯಾವುದೇ ಮಾಹಿತಿಗಳು ಪತ್ರಿಕೆಯಲ್ಲಿ ನೀಡಲಾಗಿಲ್ಲ. ಪತ್ರಿಕೆಯು ಈಗಲೂ ಸಕಾಲಕ್ಕೆ ಮುದ್ರಣವಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.