ಕನ್ನಡ ಪತ್ರಿಕಾ ಲೋಕ (ಭಾಗ ೯೧) - ನವ್ಯ ವಾಣಿ
ಪಾರ್ಶ್ವನಾಥ ಇವರ ಸಂಪಾದಕತ್ವದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಹೊರಬರುತ್ತಿರುವ ವಾರ ಪತ್ರಿಕೆ ನವ್ಯ ವಾಣಿ. ಪತ್ರಿಕೆಯು ವಾರ್ತಾ ಪತ್ರಿಕೆಯ (ಉದಯವಾಣಿ/ಪ್ರಜಾವಾಣಿ) ಆಕಾರದಲ್ಲಿದ್ದು, ನಾಲ್ಕು ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ, ಮತ್ತೆರಡು ಪುಟಗಳು ಕಪ್ಪು ಬಿಳುಪು ಮುದ್ರಣವಾಗುತ್ತಿದೆ. ಪತ್ರಿಕೆಯಲ್ಲಿ ಬಹುತೇಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಲಾಗಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಡಿಸೆಂಬರ್ ೧೬, ೨೦೨೨ರ (ಸಂಪುಟ ೧೩, ಸಂಚಿಕೆ ೩೦) ಸಂಚಿಕೆಯಾಗಿದೆ. ಒಳಪುಟದಲ್ಲಿ ಒಂದು ಕಥೆ ಇದೆ. ಉಳಿದಂತೆ ಸ್ವಲ್ಪ ಜಾಹೀರಾತುಗಳೂ ಇವೆ. ಪತ್ರಿಕೆಯ ಕಚೇರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿದ್ದು, ಮಂಗಳೂರಿನ ಯೆಯ್ಯಾಡಿಯಲ್ಲಿರುವ ದಿಗಂತ ಮುದ್ರಣದಲ್ಲಿ ಪ್ರಕಟವಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ.೩.೦೦. ಚಂದಾ ವಿವರಗಳ ಮಾಹಿತಿಯನ್ನು ನೀಡಲಾಗಿಲ್ಲ. ಪತ್ರಿಕೆಯು ಸಕಾಲದಲ್ಲಿ ಮುದ್ರಿತವಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.