ಕನ್ನಡ ಪತ್ರಿಕಾ ಲೋಕ (ಭಾಗ ೯೩) - ಹೃದಯ ವಾಹಿನಿ
ಜನಮನ ಸ್ಪಂದನದ ಮಾಸ ಪತ್ರಿಕೆಯಾದ “ಹೃದಯ ವಾಹಿನಿ” ಕಳೆದ ಹದಿಮೂರು ವರ್ಷಗಳಿಂದ ಮಂಗಳೂರಿನಿಂದ ಪ್ರಕಟವಾಗುತ್ತಿದೆ. ಟ್ಯಾಬಲಾಯ್ಡ್ ಆಕಾರದ ೮ ಪುಟಗಳನ್ನು ಹೊಂದಿರುವ ಪತ್ರಿಕೆಯ ನಾಲ್ಕು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗುತ್ತಿವೆ. ಕೆ ಪಿ ಮಂಜುನಾಥ್ ಇವರು ಪತ್ರಿಕೆಯ ಮಾಲಕರು, ಪ್ರಕಾಶಕರು ಮತ್ತು ಸಂಪಾದಕರು ಆಗಿರುತ್ತಾರೆ.
“ಹೃದಯ ವಾಹಿನಿ” ಪತ್ರಿಕೆಯ ಕಚೇರಿಯು ಮಂಗಳೂರಿನ ಉರ್ವಾ ಸ್ಟೋರಿನಲ್ಲಿದ್ದು, ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೨೦೨೨ ರ ಸಂಚಿಕೆ (ಸಂಪುಟ ೧೩, ಸಂಚಿಕೆ ೬)ಯಾಗಿದೆ. ಆ ತಿಂಗಳ ಪತ್ರಿಕೆಯಲ್ಲಿ ಮಂಗಳೂರಿನಲ್ಲಿ ಜರುಗಿದ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ವರದಿಯನ್ನು ಮುಖಪುಟ ಲೇಖನವಾಗಿ ಬಳಸಿಕೊಳ್ಳಲಾಗಿದೆ. ಮಂಜುನಾಥ್ ಅವರು 'ಸೂರ್ಯಕಿರಣ' ಎಂಬ ಹೆಸರಿನ ಸಂಪಾದಕೀಯವನ್ನು ಬರೆಯುತ್ತಾರೆ. ಉಳಿದಂತೆ ಹಾಂಕಾಂಗ್ ನ ಆಘಾತಕಾರಿ ಸಂಗತಿಗಳು, ನಿವೃತ್ತಿಯ ಸಮಯದಲ್ಲಿ ನೆನಪಿಡಬೇಕಾದ ಬಹುಮುಖ್ಯ ವಿಷಯಗಳು, ಅನಿಯಂತ್ರಿತ ಉರಿ ಮೂತ್ರ ಮೊದಲಾದ ಲೇಖನಗಳಿವೆ.
ಪತ್ರಿಕೆಯಲ್ಲಿ ಹಲವಾರು ಜಾಹೀರಾತುಗಳಿವೆ. ಪತ್ರಿಕೆಯ ಮುಖ ಬೆಲೆ ರೂ.೧೦.೦೦ ಆಗಿದ್ದು ಚಂದಾ ವಿವರಗಳನ್ನು ನೀಡಲಾಗಿಲ್ಲ. ಪತ್ರಿಕೆಯು ಈಗಲೂ ಸಕಾಲದಲ್ಲಿ ಮುದ್ರಿತವಾಗಿ ಮಾರುಕಟ್ಟೆಯನ್ನು ತಲುಪುತ್ತಿದೆ ಎಂದು ತಿಳಿದು ಬಂದಿದೆ.