ಕನ್ನಡ ಪತ್ರಿಕಾ ಲೋಕ (ಭಾಗ ೯೪) - ಕಲ್ಲಿನ ಕೋಟೆ
ಎಂ. ಹನೀಫ್ ಆಲಿಯಾಸ್ ಮೊಹಮ್ಮದ್ ಹನೀಫ್ ಇವರ ಸಾರಥ್ಯದಲ್ಲಿ ಚಿತ್ರದುರ್ಗದಿಂದ ಹೊರಬರುತ್ತಿರುವ ದಿನಪತ್ರಿಕೆ - ಕಲ್ಲಿನ ಕೋಟೆ. ಪತ್ರಿಕೆಯು ಚಿಕ್ಕಮಗಳೂರು, ಮಂಗಳೂರು, ಉಡುಪಿ, ವಿಜಯಪುರ, ಮಂಡ್ಯ, ರಾಮನಗರ, ಹಾಸನ, ಬೆಂಗಳೂರು ನಗರಗಳಲ್ಲಿ ಪ್ರಸಾರವಿದೆ. ಪತ್ರಿಕೆಯು ವಾರ್ತಾಪತ್ರಿಕೆಯ ಆಕಾರದಲ್ಲಿದ್ದು ೬ ಕಪ್ಪು ಬಿಳುಪು ಬಣ್ಣದ ಪುಟಗಳನ್ನು ಹೊಂದಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ೨೬, ಅಕ್ಟೋಬರ್ ೨೦೨೨ (ಸಂಪುಟ:೩, ಸಂಚಿಕೆ: ೨೭೪) ರದ್ದು. ಪತ್ರಿಕೆಯಲ್ಲಿ ಕಂಡ ವಿಶೇಷತೆ ಎಂದರೆ ಯಾವ ಪುಟಗಳಲ್ಲೂ ಜಾಹೀರಾತುಗಳಿಲ್ಲ. ಪತ್ರಿಕೆಯಲ್ಲಿ ದೈನಂದಿನ ಸುದ್ದಿ ಸಂಗತಿಗಳಿವೆ. ಪತ್ರಿಕೆಯಲ್ಲಿ ಸಂಪಾದಕೀಯವಾಗಲಿ, ಅಂಕಣ ಬರಹಗಳಾಗಲಿ ಇಲ್ಲ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಬಗ್ಗೆ ಒಂದು ಲೇಖನವಿದೆ.
ಪತ್ರಿಕೆಯು ಚಿತ್ರದುರ್ಗ ಜಿಲ್ಲೆಯ ರಾಮದಾಸ ಕಂಪೌಂಡ್ ಇಲ್ಲಿ ಕಚೇರಿಯನ್ನು ಹೊಂದಿದ್ದು, ಚಿತ್ರದುರ್ಗದ ಬಿಂದು ಪ್ರಿಂಟರ್ಸ್ ಇಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ.೨.೦೦ ಆಗಿದೆ. ಚಂದಾ ಹಣ ಮತ್ತು ಅವಧಿಯ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಲಾಗಿಲ್ಲ. ‘ಕಲ್ಲಿನ ಕೋಟೆ' ಪತ್ರಿಕೆಯು ಈಗಲೂ ಕ್ಲಪ್ತ ಸಮಯಕ್ಕೆ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ ಎಂದು ಮಾಹಿತಿ ಇದೆ.