ಕನ್ನಡ ಪತ್ರಿಕಾ ಲೋಕ (ಭಾಗ ೯೭) - ಮಲೆನಾಡು ಐಸಿರಿ
ವ್ಯಕ್ತಿತ್ವ ವಿಕಸನಕ್ಕಾಗಿರುವ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ - ಮಲೆನಾಡು ಐಸಿರಿ. ಕಲ್ಯಾಣ್ ಕುಮಾರ್ ಕನಾಯಕನಹಳ್ಳಿ ಪ್ರಧಾನ ಸಂಪಾದಕರಾಗಿಯೂ, ರೋಹನ್ ಭಾರ್ಗವಪುರಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಹಲವೆಡೆ ಪ್ರಸಾರವಾಗುತ್ತಿರುವ ಪತ್ರಿಕೆಯ ಮುಖ್ಯ ಕಚೇರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ದಾವಣಗೆರೆ, ಚಿತ್ರದುರ್ಗ, ಮಂಗಳೂರು, ಹಾಸನ, ಉಡುಪಿ ಮೊದಲಾದ ಕಡೆಗಳಲ್ಲಿ ವಲಯ ಕಚೇರಿಗಳಿವೆ. ಪತ್ರಿಕೆಯು ದಾವಣಗೆರೆಯ ಜಯಂತ್ ಆಫ್ ಸೆಟ್ ಪ್ರಿಂಟರ್ಸ್ ಇಲ್ಲಿ ಮುದ್ರಣವಾಗುತ್ತಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೨೬, ೨೦೨೨ (ಸಂಪುಟ:೭, ಸಂಚಿಕೆ: ೩೨) ಆಗಿದೆ. ಈ ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೬ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣರಂಜಿತವಾಗಿಯೂ, ಉಳಿದ ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲಿ ಮುದ್ರಿತವಾಗಿವೆ. ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳ ಸುದ್ದಿಗಳು, ಪ್ರಾದೇಶಿಕ ಸುದ್ದಿಗಳು ಇವೆ. ದೀಪಾವಳಿ ಸಮಯದ ಸಂಚಿಕೆಯಾದುದರಿಂದ ದೀಪಾವಳಿ ಹಬ್ಬದ ಬಗ್ಗೆ ಎರಡು ಲೇಖನಗಳಿವೆ. ಪತ್ರಿಕೆಯಲ್ಲಿ ಸಂಪಾದಕೀಯ ಇಲ್ಲ. ಒಂದಿಷ್ಟು ಜಾಹೀರಾತುಗಳಿವೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ.೩.೦೦ ಆಗಿದ್ದು, ಚಂದಾ ವಿವರಗಳು ಕಂಡುಬರುತ್ತಿಲ್ಲ. ಪತ್ರಿಕೆಯು ಸಕಾಲದಲ್ಲಿ ಮುದ್ರಿತವಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಮಾಹಿತಿ ದೊರೆತಿದೆ.