ಕನ್ನಡ ಪತ್ರಿಕಾ ಲೋಕ (೧೪) - ಪ್ರದೀಪ

ಟಿ.ಪಿ.ಕೋದಂಡರಾಮ ಪಿಳ್ಳೈ ಅವರ "ಪ್ರದೀಪ"
"ಪ್ರದೀಪ" ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿದ್ದ "ಪ್ರದೀಪ ಪ್ರಿಂಟರಿ" ಯಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆ.
೧೯೬೦ರಲ್ಲಿ ಆರಂಭವಾದ "ಪ್ರದೀಪ" ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಟಿ. ಪಿ. ಕೋದಂಡರಾಮ ಪಿಳ್ಳೈ. ಮುದ್ರಕರಾಗಿದ್ದವರು ಟಿ. ಕೆ. ರಾಮಾನುಜಮ್.
ಎಂಟು ಪುಟಗಳ ಈ ಪತ್ರಿಕೆಯಲ್ಲಿ ಶ್ರೀ ವಿನೋಬಾ, ಎಸ್. ಎನ್. ಗುರುರಾಜಾಚಾರ್ಯ ಮೊದಲಾದವರ ಬರಹಗಳು ಪ್ರಕಟವಾಗುತ್ತಿದ್ದುವು.
ವೈವಿಧ್ಯಮ ಲೇಖನಗಳು, ಧಾರಾವಾಹಿ, ವಿವಿಧ ಜಿಲ್ಲೆಗಳ ಆಯ್ದ ಸುದ್ದಿಗಳು, ಜಾಹೀರಾತುಗಳು "ಪ್ರದೀಪ" ದಲ್ಲಿತ್ತು.
~ ಶ್ರೀರಾಮ ದಿವಾಣ