ಕನ್ನಡ ಪತ್ರಿಕಾ ಲೋಕ (೧೮) - ನಿರ್ಮಲಾ

ಕನ್ನಡ ಪತ್ರಿಕಾ ಲೋಕ (೧೮) - ನಿರ್ಮಲಾ

"ನಿರ್ಮಲಾ" , ಮೈಸೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ

"ನಿರ್ಮಲಾ" , ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ನೂರು ಪುಟಗಳ, ಪುಸ್ತಕ ರೂಪದಲ್ಲಿ ಬರುತ್ತಿದ್ದ "ನಿರ್ಮಲಾ" ಮಾಸಪತ್ರಿಕೆಯ ಬೆಲೆ, ೧೯೬೦ರ ದಶಕದಲ್ಲಿ ಅರುವತ್ತು ಪೈಸೆ. ಪ್ರತೀ ಸಂಚಿಕೆಯ ಮುಖಪುಟವೂ ಆಕರ್ಷಕ ಚಿತ್ರದೊಂದಿಗೆ ವರ್ಣಗಳಲ್ಲಿ ಬರುತ್ತಿತ್ತು. ಆರೇಳು ಕಥೆಗಳು ಮತ್ತು ವೈವಿಧ್ಯಮಯ ಲೇಖನಗಳು ಪ್ರಕಟವಾಗುತ್ತಿದ್ದುವು.

ಕೆ. ಆರ್. ಸ್ವಾಮಿ, ಶ್ರೀಕಾಂತ ನಾಡಿಗ್, ಟಿ. ಈ. ಶ್ಯಾಮ್, ಆರ್. ಎಸ್. ಮೋಹನ್, ಅಜ್ಞಾಸ ಮೊದಲಾದವರ ವ್ಯಂಗ್ಯಚಿತ್ರಗಳು "ನಿರ್ಮಲಾ" ದಲ್ಲಿ ಪ್ರಕಟವಾಗುತ್ತಿದ್ದುವು. ಎಸ್. ವಿ. ಪರಮೇಶ್ವರ ಭಟ್ಟ, ಶ್ರೀಕೃಷ್ಣ ಆಲನಹಳ್ಳಿ, ಎಂ. ಎಸ್. ರಾಮರಾವ್, ಎಸ್. ವಿಶ್ವನಾಥ್, ಎಸ್. ಸತ್ಯನಾರಾಯಣ, 'ವಿಜಯೇಂದ್ರ', ಶ್ರೀಮತಿ ಎಚ್. ಕೆ. , ಎಂ. ಗೋಪಾಲ್, ವಿ. ವಿ. ಗೂಳೂರು, ಎಂ. ಈಶ್ವರಪ್ಪ, ಸುದರ್ಶನ, ಕೆ. ಶಿವರಾಮ ಐತಾಳ, ಕೃಷ್ಣಮೂರ್ತಿ ಪುರಾಣಿಕ, ಮಾರ್ವಿ ಸಿರಿದತ್ತ, ಶಾರದಾ ರಾಮಸ್ವಾಮಿ, ಎಸ್. ಮಂಗಳಾ ಸತ್ಯನ್, ಕುಮುದಾ ರಾ. ವೆಂ. ಶ್ರೀ, ಕೆ. ಲಕ್ಷ್ಮೀ ನರಸಮ್ಮ, 'ಕೌಶಿಕ' , ಶ್ರೀಧರ, 'ಸಿಂಹ' , ನರಸಿಂಗ ರಾವ್, ಪ್ರಾಣೇಶ್, ಎಂ. ಜಿ. ನಂಜುಂಡಾರಾಧ್ಯ, ಟಿ. ವಿ. ವೆಂಕಟರಮಣಯ್ಯ, ದಿಲೀಪ್ ಕುಮಾರ್, ಎಸ್. ನಾರಾಯಣ ರೆಡ್ಡಿ, ಅಪ್ಪಯ್ಯ, ಎನ್. ಕೆ. ಮುಳುಕುಂಟೆ, ತಾ. ಶ್ರೀ ನಾಗರಾಜರಾಯ, 'ಕೋವೆಂ' , ಈಶ್ವರಯ್ಯ, ಗೋಪಾಲಕೃಷ್ಣ ವೆಂ. ಶೆಟ್ಟಿಗಾರ, ದೇ. ನಾ. ಶ್ರೀ. , ಕಾ. ನಾ. ಭ. , ಜಿ. ಪಿ. ಸುಬ್ಬರಾಯ, ಕ್ಯಾತನಹಳ್ಳಿ ರಾಮಣ್ಣ, ಪಿ. ಮೈಥಿಲಿ, ಬಿ. ಉಮಾ, ಕೆ. ರಾಮಕೃಷ್ಣ ಭಟ್ಟ, ಬಿ. ಪಿ. ಕೃಷ್ಣಪ್ಪ ರೆಡ್ಡಿ ಮುಂತಾದ ಇನ್ನೂ ಹಲವಾರು ಮಂದಿ ಬರಹಗಾರರು "ನಿರ್ಮಲಾ" ಮಾಸಪತ್ರಿಕೆಗೆ ಬರೆಯುತ್ತಿದ್ದರು.

~ *ಶ್ರೀರಾಮ ದಿವಾಣ*