ಕನ್ನಡ ಪತ್ರಿಕಾ ಲೋಕ (೧೯) - ಉಷಾ

ಕನ್ನಡ ಪತ್ರಿಕಾ ಲೋಕ (೧೯) - ಉಷಾ

*ಪಿ. ಮೋಹನ್ ಅವರ "ಉಷಾ"*

"ಉಷಾ", ೧೯೪೦ರಲ್ಲಿ ಆರಂಭವಾದ ಒಂದು ಪ್ರಗತಿಶೀಲ ಮಾಸಪತ್ರಿಕೆ. ಸಂಪಾದಕರು ಮತ್ತು ಸಂಚಾಲಕರಾಗಿ "ಉಷಾ" ಳನ್ನು ಮುನ್ನಡೆಸಿದವರು ಪಿ. ಮೋಹನ್ ಅವರು.

ಬೆಂಗಳೂರು ಕಾಟನ್ ಪೇಟೆಯ ಭಾಷ್ಯಂ ರಸ್ತೆಯ ಅರಳೇಪೇಟೆಯ ಕೆಂಗೇರಿ ಗೇಟ್ ಪೊಲೀಸ್ ಠಾಣೆಯ ಎದುರುಗಡೆ ಇದ್ದ "ಶ್ರೀ ಗಜಲಕ್ಷ್ಮೀ ಪ್ರೆಸ್" ನಲ್ಲಿ ,"ಉಷಾ" ಮುದ್ರಣಗೊಳ್ಳುತ್ತಿತ್ತು. ಈ ಪ್ರೆಸ್ ನ್ನು ೧೯೩೪ರಲ್ಲಿ ಸ್ಥಾಪಿಸಲಾಗಿತ್ತು. ಪತ್ರಿಕಾಲಯವೂ ಇದುವೇ ಆಗಿತ್ತು.

ಉಡುಪಿಯ ಅ. ಗಣಪಯ್ಯ ಅಲ್ಸೆ ಅವರು "ಉಷಾ"ದ ಸಹ ಸಂಪಾದಕರಾಗಿದ್ದರು. ಉಡುಪಿಯಲ್ಲಿ "ಪ್ರಕಾಶ" ಮಾಸ ಪತ್ರಿಕೆಯನ್ನು ನಡೆಸುತ್ತಿದ್ದ ಅ. ಜನಾರ್ದನ ಅಲ್ಸೆಯವರ ಸಹೋದರರಾಗಿದ್ದರು ಅ. ಗಣಪಯ್ಯ ಅಲ್ಸೆ. ಗಣಪಯ್ಯ ಅಲ್ಸೆಯವರು ಲೇಖಕರಾಗಿಯೂ ಖ್ಯಾತರಾಗಿದ್ದರು.

ಪ್ರತೀ ತಿಂಗಳ ಮೊದಲ ವಾರ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದ್ದ "ಉಷಾ"ಕ್ಕೆ ೧೯೬೦ರ ದಶಕದಲ್ಲಿ ಬಿಡಿ ಸಂಚಿಕೆಯ ಬೆಲೆ ೨೦ ಪೈಸೆ ಆಗಿತ್ತು. ವಾರ್ಷಿಕ ಚಂದಾ ದರ: ೨. ೫೦ ಇತ್ತು.

ಕಥೆ, ಕವನ, ಜೀವನ ಚಿತ್ರಣ, ವೈವಿಧ್ಯಮಯ ವಿಚಾರ ಪ್ರಚೋದಕ ಲೇಖನಗಳು "ಉಷಾ" ದಲ್ಲಿ ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ, ಉಡುಪಿ