ಕನ್ನಡ ಪತ್ರಿಕಾ ಲೋಕ (೨೧) - ಪಂಚಾಮೃತ
ಪಿ. ಕೆ. ಆಚಾರ್ಯ ಗಲಗಲಿ ಅವರ "ಪಂಚಾಮೃತ"
" ಪಂಚಾಮೃತ" , ಗದಗ ಜಿಲ್ಲಾ ಕೇಂದ್ರವಾದ ಗದಗ ನಗರದ ಮಾಳಿಕೊಪ್ಪದಿಂದ ಪ್ರಕಟವಾಗುತ್ತಿದ್ದ, ಪಿ. ಕೆ. ಆಚಾರ್ಯ ಗಲಗಲಿ ಅವರು ಸಂಪಾದಕರಾಗಿದ್ದ ಕನ್ನಡ ಡೈಜೆಸ್ಟ್.
೧೯೬೦ರಲ್ಲಿ ಆರಂಭವಾದ "ಪಂಚಾಮೃತ" ಡೈಜೆಸ್ಟ್ , ಗದಗದ ನ್ಯೂ ಗದಗ ಪ್ರಿಂಟರಿಯಲ್ಲಿ ಪ್ರಕಟವಾಗುತ್ತಿತ್ತು. ಪಂಡರಿನಾಥಾಚಾರ್ಯ ಅವರು ಪ್ರಕಾಶಕರಾಗಿದ್ದರು.
ಬಿಡಿ ಸಂಚಿಕೆಯ ಬೆಲೆ ೭೫ ಪೈಸೆಯಾಗಿತ್ತು. ೪ ರೂಪಾಯಿ ಅರ್ಧ ವಾರ್ಷಿಕ ಚಂದಾ ಮತ್ತು ಎಂಟು ರೂಪಾಯಿ ವಾರ್ಷಿಕ ಚಂದಾ ಆಗಿತ್ತು. ಪ್ರತೀ ತಿಂಗಳ ಒಂದನೇ ತಾರೀಕಿನಂದು "ಪಂಚಾಮೃತ" ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿತ್ತು. ೧೧೪ ಪುಟಗಳ ಪುಸ್ತಕದ ರೂಪದಲ್ಲಿ ಬರುತ್ತಿದ್ದ "ಪಂಚಾಮೃತ" ದಲ್ಲಿ ವೈವಿಧ್ಯಮಯ ಲೇಖನಗಳು ಪ್ರಕಟವಾಗುತ್ತಿದ್ದುವು.
~ ಶ್ರೀರಾಮ ದಿವಾಣ