ಕನ್ನಡ ಪತ್ರಿಕಾ ಲೋಕ (೨೨) - ಸೇವಾಮೃತ

ಕನ್ನಡ ಪತ್ರಿಕಾ ಲೋಕ (೨೨) - ಸೇವಾಮೃತ

ಲೋಕ ಸೇವಾ ವೃಂದದ  "ಸೇವಾಮೃತ"

"ಸೇವಾಮೃತ" , ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಸಮೀಪದ ಅಳಿಕೆಯ ಲೋಕ ಸೇವಾ ವೃಂದ (ರಿ) ಪ್ರಕಟಿಸುತ್ತಿದ್ದ ಮಾಸಪತ್ರಿಕೆ. ಎಂ. ನಾರಾಯಣ ಭಟ್ ಅವರು ಲೋಕ ಸೇವಾ ವೃಂದದ ಅಧ್ಯಕ್ಷರಾಗಿದ್ದರು. ಇದೇ ಸಂಸ್ಥೆಯ ಮುದ್ರಣಾಲಯವಾಗಿದ್ದ ಶ್ರೀ ಸತ್ಯ ಸಾಯಿ ಪ್ರೆಸ್ ನಲ್ಲಿ "ಸೇವಾಮೃತ" ಮುದ್ರಣವಾಗುತ್ತಿತ್ತು. ಕೆ. ನಟರಾಜ್ ಎಂಬವರು ಪ್ರೆಸ್ ನ ವ್ಯವಸ್ಥಾಪಕರಾಗಿದ್ದರು. ಕೆ. ಎ. ಪ್ರಭು ಅವರು "ಸೇವಾಮೃತ"ದ  ಪ್ರಸರಣಾ ವಿಭಾಗದ ವ್ಯವಸ್ಥಾಪಕರಾಗಿದ್ದರು.

ಮಡಿಯಾಲ ನಾರಾಯಣ ಭಟ್ ಪ್ರಧಾನ ಸಂಪಾದಕರು, ಬಿ. ಎನ್. ನರಸಿಂಹಮೂರ್ತಿ ಸಹ ಸಂಪಾದಕರು, ಯು. ಗಂಗಾಧರ ಭಟ್, ವೆಂಕಪ್ಪಯ್ಯ ಪಾರೆ, ಶಿರೋಮಣಿ, ವಿದ್ವಾನ್ ಯಸ್. ತಿರುಮಲೇಶ್ವರ ಭಟ್, ವಿದ್ವಾನ್ ಅಮ್ಮೆಂಬಳ ಶಂಕರನಾರಾಯಣ ನಾವಡ ಹಾಗೂ ಕೆ. ವಸಂತರಾಜ್ ಇವರು ಉಪ ಸಂಪಾದಕರುಗಳಾಗಿದ್ದರು.

೧೯೬೨ರಲ್ಲಿ ಆರಂಭವಾದ " ಸೇವಾಮೃತ" ಮಾಸಿಕದ ಬಿಡಿ ಸಂಚಿಕೆಯ ಬೆಲೆ ೧. ೧೦. ಆಗಿತ್ತು. ವಾರ್ಷಿಕ ಚಂದಾ ೧೨ ರೂಪಾಯಿ, ವಾರ್ಷಿಕ ಪೋಷಕತನ ೧೫ ರೂಪಾಯಿ, ಆಜೀವ ಪೋಷಕತನ ೧೫೦ ರೂಪಾಯಿ ಮತ್ತು ವಿಶೇಷ ಆಜೀವ ಪೋಷಕತನ ೨೫೦ ರೂಪಾಯಿ ಆಗಿತ್ತು.

೧೨೪ ಪುಟಗಳ "ಸೇವಾಮೃತ" ಪುಸ್ತಕರೂಪದಲ್ಲಿತ್ತು. ಲೋಕ ಸೇವಾ ವೃಂದದ ಮುಖ ಪತ್ರಿಕೆಯಾಗಿದ್ದ ಇದರಲ್ಲಿ ಕತೆ, ಕವನ, ವ್ಯಕ್ತಿ ಚಿತ್ರ, ವಿಚಾರಾತ್ಮಕ ಲೇಖನ, ಸ್ವಾರಸ್ಯಕರ ಘಟನೆಗಳ ವಿವರಗಳಿರುವ ಲೇಖನಗಳ ಸಹಿತ ವೈವಿಧ್ಯಮಯ ಬರಹಗಳು ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ, ಉಡುಪಿ.