ಕನ್ನಡ ಪತ್ರಿಕಾ ಲೋಕ (೨೩) - ಆಯುರ್ವೇದ
ನಿಖಿಲ ಕರ್ಣಾಟಕದ ಆಯುರ್ವೇದ ಮಂಡಳದ ಮುಖ ಪತ್ರಿಕೆಯಾಗಿತ್ತು, "ಆಯುರ್ವೇದ" ಮಾಸಪತ್ರಿಕೆ. ಉಡುಪಿ ಜಿಲ್ಲೆಯ ಹಿರಿಯಡ್ಕದಿಂದ ೧೯೪೮ರಲ್ಲಿ ಆರಂಭವಾದ "ಆಯುರ್ವೇದ" ಮಾಸಿಕದ ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಕಾ. ರಾ. ಪುರಾಣಿಕ ಅವರು.
ಕಾರ್ಕಳದ ಶ್ರೀರಾಮ ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಣವಾಗುತ್ತಿದ್ದ ಈ ಮಾಸಿಕದ ಸಂಪಾದಕೀಯ ಮಂಡಳಿಯಲ್ಲಿ ವೈದ್ಯ ರಾ. ಕೃ. ಕುಲಕರ್ಣಿ ಜಿನರಾಳ್ ಕರ್ ಬೆಳಗಾಂವ್, ಡಾ. ಎ. ವಿ. ಗದಗ ಬೆಳಗಾಂವ್, ವೈದ್ಯ ರಾಜ ಪಾಂಗಳ ಲಕ್ಷ್ಮೀನಾರಾಯಣ ನಾಯಕ್ ಕಟಪಾಡಿ, ವೈದ್ಯಗುರು ಡಾ. ಎಂ. ಆರ್. ಭಟ್ ಮೊದಲಾದವರು ಸದಸ್ಯರಾಗಿದ್ದರು.
೩೪ ಪುಟಗಳಲ್ಲಿ, ಪುಸ್ತಕ ರೂಪದಲ್ಲಿ ಬರುತ್ತಿದ್ದ "ಆಯುರ್ವೇದ" ಮಾಸ ಪತ್ರಿಕೆಗೆ ಆಗ ಇದ್ದ ಬೆಲೆ ನಾಲ್ಕು ಆಣೆ. ವಾರ್ಷಿಕ ಚಂದಾ ಮೂರು ರೂಪಾಯಿ.
~ ಶ್ರೀರಾಮ ದಿವಾಣ