ಕನ್ನಡ ಪತ್ರಿಕಾ ಲೋಕ (೨೩) - ವಿನೋದ

ಕನ್ನಡ ಪತ್ರಿಕಾ ಲೋಕ (೨೩) - ವಿನೋದ

ದೇಶಹಳ್ಳಿ ಜಿ. ನಾರಾಯಣ ಅವರ "ವಿನೋದ"

ದೇಶಹಳ್ಳಿ ಜಿ. ನಾರಾಯಣ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದ " ವಿನೋದ" ವು ಹಾಸ್ಯ ಪ್ರಧಾನ ಮಾಸಪತ್ರಿಕೆಯಾಗಿ ಹೆಸರುವಾಸಿಯಾಗಿತ್ತು. ೧೯೫೧ರಲ್ಲಿ ಆರಂಭವಾದ ಈ ಮಾಸಪತ್ರಿಕೆಗೆ ಅ. ರಾ. ಮಿತ್ರ ಅವರು ಸಹ ಸಂಪಾದಕರಾಗಿದ್ದರು. ಬೆಂಗಳೂರು ಚಾಮರಾಜಪೇಟೆ ಪಂಪ ಮಹಾಕವಿ ರಸ್ತೆಯ ಬಿ.ಸಿ.ಸಿ.ಬಿ ಬಿಲ್ಡಿಂಗ್ ನಲ್ಲಿದ್ದ 'ಸ್ವತಂತ್ರ ಮುದ್ರಣಾಲಯ’ದಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು.

"ವಿನೋದ" ದ ಮುಖಪುಟದಲ್ಲಿ ವ್ಯಂಗ್ಯಚಿತ್ರವನ್ನು ಪ್ರಕಟಿಸಲಾಗುತ್ತಿತ್ತು. ೩೬ ಪುಟಗಳ ಪುಸ್ತಕ ರೂಪದ "ವಿನೋದ" ದಲ್ಲಿ ನಾಡಿನ ಅನೇಕ ಮಂದಿ ಪ್ರಸಿದ್ಧ ಬರಹಗಾರರು ಬರೆದ ಬರಹಗಳು ಪ್ರಕಟವಾಗುತ್ತಿದ್ದುವು.

೧೯೭೦ರ ದಶಕದಲ್ಲಿ "ವಿನೋದ" ದ ಬಿಡಿ ಸಂಚಿಕೆಯ ಬೆಲೆ ೩೦ ಪೈಸೆ ಆಗಿತ್ತು. ಸ್ವಾತಂತ್ರ್ಯೋತ್ಸವ ವಿಶೇಷ ಸಂಚಿಕೆಯ ಸಹಿತ ವಾರ್ಷಿಕ ಚಂದಾ ಮೊತ್ತ ಐದು ರೂಪಾಯಿಗಳಾಗಿತ್ತು.

~ ಶ್ರೀರಾಮ ದಿವಾಣ, ಉಡುಪಿ