ಕನ್ನಡ ಪತ್ರಿಕಾ ಲೋಕ (೩೨) - ಗೋಕುಲ

ಕನ್ನಡ ಪತ್ರಿಕಾ ಲೋಕ (೩೨) - ಗೋಕುಲ

೧೯೬೨ರಲ್ಲಿ ಆರಂಭವಾದ ‘ಗೋಕುಲ’ ಸಾಪ್ತಾಹಿಕದ ಸಂಪಾದಕರಾಗಿದ್ದವರು ಎನ್. ಎಸ್. ಸೀತಾರಾಮ ಶಾಸ್ತ್ರಿಯವರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಗೋಕುಲ’ದ ಪ್ರಕಾಶಕರು ಎಸ್. ನಾಗರಾಜ ರಾವ್. ಮುದ್ರಕರು ಟಿ. ಸಿ. ಬಿ. ಬಸವರಾಜ್. 

೪೬ ಪುಟಗಳಲ್ಲಿ ಪ್ರಜಾಮತ ಮಾದರಿಯಲ್ಲಿ ಬರುತ್ತಿದ್ದ ‘ಗೋಕುಲ’ದ ಬಿಡಿ ಸಂಚಿಕೆಯ ಬೆಲೆ ೪೦ ಪೈಸೆಯಾಗಿತ್ತು. ದೇಶ - ವಿದೇಶದ ಸುದ್ದಿಗಳು, ಸಿನಿಮಾ, ಕ್ರೀಡಾ, ಪ್ರವಾಸ, ಆಹಾರ, ಆರೋಗ್ಯ ಸಂಬಂಧಿ ಸಹಿತ ವೈವಿಧ್ಯಮಯ ಲೇಖನಗಳು, ರಾಜಕೀಯ ವಿಶ್ಲೇಷಣೆಗಳು, ಕತೆ, ಕವನಗಳು ‘ಗೋಕುಲ’ದಲ್ಲಿ ಪ್ರಕಟವಾಗುತ್ತಿತ್ತು. ನಾಡಿನ ಅನೇಕ ಮಂದಿ ಹಿರಿಯ - ಕಿರಿಯ, ಪ್ರಸಿದ್ಧ ಬರಹಗಾರರು ‘ಗೋಕುಲ’ಕ್ಕೆ ಬರೆಯುತ್ತಿದ್ದರು.

-ಶ್ರೀರಾಮ ದಿವಾಣ