ಕನ್ನಡ ಪತ್ರಿಕಾ ಲೋಕ (೩೩) - ನಮ್ಮ ದನಿ

ಕನ್ನಡ ಪತ್ರಿಕಾ ಲೋಕ (೩೩) - ನಮ್ಮ ದನಿ

ಮತ್ತಡಿ ಕಾಯರ್ ಪಳಿಕೆಯವರ "ನಮ್ಮ ದನಿ"

ಕೊರಗ ಸಂಘಟನೆಗಳ ಅಭಿವೃದ್ಧಿ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಗಳೂರಿನ ಮತ್ತಡಿ ಕಾಯರ್ ಪಳಿಕೆಯವರು ನಡೆಸಿದ ಮಾಸಿಕವಾಗಿತ್ತು "ನಮ್ಮ ದನಿ". ಮೋಹನ್ ಅಡ್ವೆ, ಬಾಬು ಪಾಂಗಾಳ, ಉಷಾ ಕೋಡಿಕಲ್, ಸುಶೀಲ ಕೆಂಜೂರು, ತುಂಗಾ ಬಿಜೈ ಹಾಗೂ ರಮೇಶ ಗುಂಡಾವು ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು.

ಟ್ಯಾಬ್ಲಾಯ್ಡ್ ಮಾದರಿಯ, ನಾಲ್ಕು ಪುಟಗಳ ಪತ್ರಿಕೆಯಾಗಿದ್ದ "ನಮ್ಮ ದನಿ" ಯನ್ನು ಮಂಗಳೂರು ಬಿಜೈನ ಮನೋರಮಾ ಪ್ರಿಂಟರ್ಸ್ ನಲ್ಲಿ ಮುದ್ರಿಸಲಾಗುತ್ತಿತ್ತು.

ಪಳ್ಳಿ ಗೋಕುಲ್ ದಾಸ್, ಮೋಹನ್ ಅಡ್ವೆ, ಸಚ್ಚು ಉಡುಪಿ, ಮಹೇಶ, ಬಮ ಕಾಯರ್ ಪಲ್ಕೆ, ಬಿ. ಕೆ. ಪಾಂಗಾಳ, ಸಹನಾ ಪಕ್ಷಿಕೆರೆ, ಮೋಹನ್, ಅಶೋಕ ಕುಮಾರ ತೊಯಿಪಕಲ್, ದಿನೇಶ್ ಕೆಂಜೂರು, ಸಬಿತಾ ಗುಂಡ್ಮಿ, ರಾಜ್ ಕೋಡಿಕಲ್, ರಾಮು ಕೋಡಿಕಲ್, ದಿನಕರ, ಜಿ. ತನಿಯಪ್ಪ, ಬಾಲಕೃಷ್ಣ ವಿ. ಪೆರಡಾಲ, ಸತೀಶ್, ವೀರಮಣಿ ಕೋಡಿಕಲ್, ರೂಪ ಕೊಡಿಯಾಲ್ ಬೈಲ್ ಮುಂತಾದವರು "ನಮ್ಮ ದನಿ" ಗೆ ಬರೆಯುತ್ತಿದ್ದರು.

"ಶೋಷಿತ ನೊಂದು ಬೆಂದು ಕರಗಿಹೋದ ಜನಾಂಗದ ಆಸೆ ಅಭಿವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವುದರೊಂದಿಗೆ ಮರೆಯಾದ ಇತಿಹಾಸವನ್ನು ತೆರೆಯುವುದು ‘ನಮ್ಮ ದನಿ’ಯ ಮೂಲ ಉದ್ಧೇಶವಾಗಿದೆ" , "ಯುವ ಜನಾಂಗದಲ್ಲಿ ಬರೆಯುವ, ಓದುವ ಕೌಶಲ್ಯ ಬೆಳೆಯಬೇಕು. ವಾಸ್ತವಿಕ ಸ್ಥಿತಿಗಳನ್ನು ಅಭಿವ್ಯಕ್ತಿಪಡಿಸುವ ಅವಕಾಶಕ್ಕಾಗಿ ಅವಕಾಶಕ್ಕಾಗಿ ಈ ಪತ್ರಿಕೆಯನ್ನು ಆರಂಭಿಸುತ್ತಿದ್ದೇವೆ" ಎಂದು ಮೊದಲ ಸಂಚಿಕೆಗೆ ಬರೆದ ಸಂಪಾದಕೀಯದಲ್ಲಿ ಸಂಪಾದಕರು ಹೇಳಿಕೊಂಡಿದ್ದಾರೆ.

ಖಾಸಗಿ ಪ್ರಸಾರ ಮಾತ್ರ ಹೊಂದಿದ್ದ "ನಮ್ಮ ದನಿ" ೨೦೦೪ರ ಜನವರಿಯಲ್ಲಿ ಆರಂಭವಾಗಿ ಕೆಲ ಕಾಲ ನಡೆದು ಬಳಿಕ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು.

~ ಶ್ರೀರಾಮ ದಿವಾಣ