ಕನ್ನಡ ಪತ್ರಿಕಾ ಲೋಕ (೩೪) - ಲಲಿತ

ಕನ್ನಡ ಪತ್ರಿಕಾ ಲೋಕ (೩೪) - ಲಲಿತ

ಕಾರ್ಯಹಳ್ಳಿ - ಸಾರಂಗರ ಮಾಸಿಕ "ಲಲಿತ"

ಟಿ. ಎಸ್. ಕಾರ್ಯಹಳ್ಳಿ (ಸಂಪಾದಕರು) ಹಾಗೂ ಕೆ. ಆರ್. ಸಾರಂಗ (ಸಂಚಾಲಕ ಸಂಪಾದಕರು) ಸಂಪಾದಿಸಿ ಕಾಸರಗೋಡಿನಿಂದ ಪ್ರಕಾಶಿಸುತ್ತಿದ್ದ ಮಾಸಿಕವೇ "ಲಲಿತ".

೧೯೬೬ರ ಆಗಸ್ಟ್ -ಸೆಪ್ಟೆಂಬರ್ ನಲ್ಲಿ ಆರಂಭವಾದ "ಲಲಿತ" ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ೪೦ ಪೈಸೆಯಾಗಿತ್ತು. ವಾರ್ಷಿಕ ಚಂದಾ ಮೊತ್ತ ೪ ರೂಪಾಯಿಗಳಾಗಿತ್ತು. ಗಡಿನಾಡು ಕಾಸರಗೋಡು ನಗರದ ಕೆ. ಪಿ. ಆರ್. ರಾವ್ ರಸ್ತೆಯ ಕಟ್ಟಡವೊಂದರಲ್ಲಿ ಕಚೇರಿ ಹೊಂದಿದ್ದ "ಲಲಿತ" ಮಾಸಿಕ, ಪ್ರಕಾಶ್ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿತ್ತು.

"ಲಲಿತ" ದಲ್ಲಿ ಕಥೆ, ಕವನ, ಲಲಿತ ಪ್ರಬಂಧ, ಹಾಸ್ಯ ಬರಹ, ವಿಡಂಬನೆ, ಸಾಹಿತ್ಯ ವಿಮರ್ಶೆ ಸಹಿತ ವೈವಿಧ್ಯಮ ವಿಚಾರಪೂರಿತ ಬರಹಗಳು ಪ್ರಕಟವಾಗುತ್ತಿತ್ತು. ನಾಡಿನುದ್ದಗಲದ ಅನೇಕ ಮಂದಿ ಹಿರಿಯ - ಕಿರಿಯ ಬರಹಗಾರರು "ಲಲಿತ"ಕ್ಕೆ ಬರೆಯುತ್ತಿದ್ದರು.

~ ಶ್ರೀರಾಮ ದಿವಾಣ