ಕನ್ನಡ ಪತ್ರಿಕಾ ಲೋಕ (೩೫) - ಸಾರಸ್ವತ ಜಾಗೃತಿ
ಸಮಗ್ರ ಜಿ ಎಸ್ ಬಿ ಸಮನ್ವಯ ಸಭಾ ಟ್ರಸ್ಟ್ ನ "ಸಾರಸ್ವತ ಜಾಗೃತಿ"
೨೦೦೪ರಲ್ಲಿ ಆರಂಭವಾದ ಕನ್ನಡ ಮತ್ತು ಇಂಗ್ಲೀಷ್ ಪಾಕ್ಷಿಕ ಪತ್ರಿಕೆ "ಸಾರಸ್ವತ ಜಾಗೃತಿ". ಉಡುಪಿಯ 'ಸಮಗ್ರ ಜಿ ಎಸ್ ಬಿ ಸಮನ್ವಯ ಸಭಾ ಟ್ರಸ್ಟ್' ಈ ಪತ್ರಿಕೆಯನ್ನು ಪ್ರಕಾಶಿಸುತ್ತಿದ್ದ ಸಂಸ್ಥೆ. ಮಣಿಪಾಲ್ ಪ್ರೆಸ್ ನಲ್ಲಿ ಮುದ್ರಿಸಲಾಗುತ್ತಿತ್ತು. ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಬಿ. ನರಸಿಂಗ ರಾವ್.
ಸಾರಸ್ವತರ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆ ಹಾಗೂ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಉದ್ಧೇಶದೊಂದಿಗೆ ಆರಂಭಿಸಿದ "ಸಾರಸ್ವತ ಜಾಗೃತಿ" ಪಾಕ್ಷಿಕ ಪತ್ರಿಕೆ ನಾಲ್ಕು ಪುಟಗಳಿಂದ ಕೂಡಿದ್ದು, ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಬರಹಗಳನ್ನು ಪ್ರಕಟಿಸುತ್ತಿತ್ತು.
ದ್ವೈ ವಾರ್ಷಿಕ ಚಂದಾ ನೂರು ರೂಪಾಯಿ ಆಗಿತ್ತು. ಐದು ವರ್ಷದ ಚಂದಾ ೨೫೦ ರೂಪಾಯಿ ನಿಗದಿಗೊಳಿಸಲಾಗಿತ್ತು. ಸಮಾಜಕ್ಕೆ ಸಂಬಂಧಿಸಿದ ಗಂಭೀರ ಲೇಖನಗಳ ಜೊತೆಗೆ ಸಾರ್ವಜನಿಕ ವಿಷಯಗಳ ಲೇಖನಗಳೂ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.
- ಶ್ರೀರಾಮ ದಿವಾಣ