ಕನ್ನಡ ಪತ್ರಿಕಾ ಲೋಕ (೩೬) - ದಲಿತ ಜಾಗೃತಿ

ಕನ್ನಡ ಪತ್ರಿಕಾ ಲೋಕ (೩೬) - ದಲಿತ ಜಾಗೃತಿ

ನಾರಾಯಣ ಮಣೂರು ಅವರ "ದಲಿತ ಜಾಗೃತಿ"

"ದಲಿತ ಜಾಗೃತಿ" ಶಿಕ್ಷಕ, ಚಿಂತಕ ನಾರಾಯಣ ಮಣೂರು ಅವರು ಪ್ರಕಟಿಸುತ್ತಿದ್ದ ತ್ರೈಮಾಸಿಕ ಪತ್ರಿಕೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಣೂರಿನವರಾದ ನಾರಾಯಣ ಮಣೂರು ಅವರು ಸಂಪಾದಕ ಮತ್ತು ಪ್ರಕಾಶಕರಾಗಿದ್ದ "ದಲಿತ ಜಾಗೃತಿ", ತ್ರೈಮಾಸಿಕ ಪತ್ರಿಕೆಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ ಸಮುದಾಯದ ಮೊತ್ತಮೊದಲ ಮುಖವಾಣಿ ಪತ್ರಿಕೆಯೂ ಹೌದು.

೧೯೯೫ರ ಎಪ್ರಿಲ್ ನಲ್ಲಿ ಆರಂಭವಾದ "ದಲಿತ ಜಾಗೃತಿ" ಗೆ ಉಡುಪಿಯ ದಲಿತ ಸಂಘರ್ಷ ಸಮಿತಿಯ ಬೆಂಬಲವಿತ್ತಾದರೂ, ಆರ್ಥಿಕ ಸಮಸ್ಯೆಯಿಂದಾಗಿ ಹೆಚ್ಚು ಕಾಲ ಮುಂದುವರಿಯದೆ ಸ್ಥಗಿತಗೊಂಡಿತು.

ಎಂಟು ಪುಟಗಳ, ಟ್ಯಾಬ್ಲಾಯ್ಡ್ ಮಾದರಿಯ "ದಲಿತ ಜಾಗೃತಿ" ಯ ಬರಹಗಳನ್ನು ಮಂಗಳೂರು ಸ್ಟೇಟ್ ಬ್ಯಾಂಕ್ ಪರಿಸರದ ಹನ ಪಬ್ಲಿಷರ್ಸ್ ನಲ್ಲಿ ಡಿಟಿಪಿ ಮಾಡಿಸಲಾಗುತ್ತಿತ್ತು. ಯೆಯ್ಯಾಡಿಯ ದಿಗಂತ ಮುದ್ರಣ ಪ್ರೆಸ್ ನಲ್ಲಿ ಮುದ್ರಿಸಲಾಗುತ್ತಿತ್ತು. 

ಎ. ಕೆ. ಧರ್ಮಪ್ಪ ಪುತ್ತೂರು, ಶಂಕರ್ ಮಾವಳ್ಳಿ, ನಾಮದೇವ ಕೆ. ಹಟ್ಟಿ ಇನ್ನಂಜೆ, ಮುಗುಳವಳ್ಳಿ ಕೇಶವ ಧರಣಿ, ಪ್ರಗತಿಪ್ರಿಯ, ವೇಮಾ ನಾರಾಯಣ್, ರೋಹಿತಾಕ್ಷ ಕೆ., ಕೆ. ಶುಭಾಕರ್ ಪಡುಬಿದ್ರಿ, ಪಾರ್ವತಿ ಬನ್ನಂಜೆ, ರಾಚಪ್ಪ, ಉಷಾ ತೊಟ್ಟಂ, 'ನಿರ್ಗತಿಕ' , ಕೋಟೆ ಮಲ್ಲಿಕಾರ್ಜುನ, ಕೆ. ಎಸ್. ಮೋಹನ್ ಸುವರ್ಣ ಜೋಕಟ್ಟೆ ಮುಂತಾದವರು "ದಲಿತ ಜಾಗೃತಿ" ಗೆ ಬರೆಯುತ್ತಿದ್ದರು.

~ ಶ್ರೀರಾಮ ದಿವಾಣ