ಕನ್ನಡ ಪತ್ರಿಕಾ ಲೋಕ (೩೭) - ಹೊಟೇಲ್ ಮಾಣಿ

ಉದಯ ಕುಮಾರ್ ಪೈ ಅವರ "ಹೊಟೇಲ್ ಮಾಣಿ"
ಉದಯವಾಣಿ ಪತ್ರಕರ್ತರಾಗಿದ್ದ ಉದಯ ಕುಮಾರ್ ಪೈ ಅವರು ಮೂಲತಹ ಉತ್ತರ ಕನ್ನಡದವರಾಗಿದ್ದರೂ, ಮಣಿಪಾಲದ ತ್ರಿಶಂಕುನಗರ ನಿವಾಸಿಯಾಗಿದ್ದರು. ಇವರು ಎರಡು ವರ್ಷಗಳ ಕಾಲ ನಡೆಸಿದ ಮಾಸಪತ್ರಿಕೆಯೇ "ಹೊಟೇಲ್ ಮಾಣಿ".
೨೦೧೪ರ ಜನವರಿಯಲ್ಲಿ ಆರಂಭಿಸಿದ "ಹೊಟೇಲ್ ಮಾಣಿ"ಯನ್ನು ೨೦೧೬ರ ಅಂತ್ಯದ ವರೆಗೆ ನಡೆಸಿ ಬಳಿಕ ಸ್ಥಗಿತಗೊಳಿಸಿದರು. ಎಂಟು ಪುಟಗಳ "ಹೊಟೇಲ್ ಮಾಣಿ"ಯ ಪುಟಗಳನ್ನು ಜೇಮ್ಸ್ ವಾಜ್, ಸಂದೀಪ್ ಪೆರ್ಡೂರು ಹಾಗೂ ಶ್ರೀಮತಿ ಜಯಲಕ್ಷ್ಮಿ ಅವರು ವಿನ್ಯಾಸಗೊಳಿಸುತ್ತಿದ್ದರು. ಮಣಿಪಾಲದ ತುಳಸಿ ಎಂಟರ್ ಪ್ರೈಸಸ್ ನವರು ಮುದ್ರಿಸುತ್ತಿದ್ದರು.
ಡಾ| ನಾರಾಯಣ ಶೆಣೈ, ಪ್ರಕಾಶ್ ಭಟ್, ಶ್ರೀನಿವಾಸ ಪ್ರಭು, ಜಯರಾಮ ಕಾರಂತ ಹಾಗೂ ರಮಾನಾಥ ಶಾನಭಾಗ ಸಲಹೆಗಾರರಾಗಿದ್ದರು. ಈ ಮಾಸಪತ್ರಿಕೆಯಲ್ಲಿ ಹೆಚ್ಚಿನೆಲ್ಲಾ ಬರಹಗಳು ರಾಜಕೀಯ ವಿಶ್ಲೇಷಣೆಗಳಿಗೆ ಮತ್ತು ರಾಜಕೀಯ ಹಾಸ್ಯ ಬರಹಗಳಿಗೆ ಸೀಮಿತವಾಗಿತ್ತು.
~ ಶ್ರೀರಾಮ ದಿವಾಣ, ಉಡುಪಿ