ಕನ್ನಡ ಪತ್ರಿಕಾ ಲೋಕ (೩೯) - ನೇತ್ರಾವತಿ ವಾರ್ತೆ

ಕನ್ನಡ ಪತ್ರಿಕಾ ಲೋಕ (೩೯) - ನೇತ್ರಾವತಿ ವಾರ್ತೆ

ಕೆ. ಬಾಲಕೃಷ್ಣ ಗಟ್ಟಿಯವರ "ನೇತ್ರಾವತಿ ವಾರ್ತೆ"

ಪತ್ರಕರ್ತರಾಗಿ ಹೆಸರು ಮಾಡಿದ್ದ ಕೆ. ಬಾಲಕೃಷ್ಣ ಗಟ್ಟಿಯವರು ದಕ್ಷಿಣ ಕನ್ನಡ ಜಿಲ್ಲೆಯ ಬಿ. ಸಿ. ರೋಡ್ ನಿಂದ ಹೊರತರುತ್ತಿದ್ದ ದಿನಪತ್ರಿಕೆಯಾಗಿತ್ತು " ನೇತ್ರಾವತಿ ವಾರ್ತೆ". ೧೯೯೦ರ ದಶಕದಲ್ಲಿ ಪ್ರಕಟಣೆ ಆರಂಭಿಸಿ, ಇದೇ ದಶಕದಲ್ಲಿ ಪ್ರಕಟಣೆ ಸ್ಥಗಿತಗೊಳಿಸಿದ ಪತ್ರಿಕೆಯಿದು.

ಕೆ. ಬಾಲಕೃಷ್ಣ ಗಟ್ಟಿಯವರು ಮೊದಲಿಗೆ ಬಿ. ಸಿ. ರೋಡ್ ನಿಂದ "ನೇತ್ರಾವತಿ ವಾರ್ತೆ"ಯನ್ನು ಆರಂಭಿಸಿದರಾದರೂ, ಕೆಲವು ವರ್ಷಗಳ ಬಳಿಕ, ಪತ್ರಿಕೆ ಮಂಗಳೂರಿಗೆ ಸ್ಣತಳಾಂತರಗೊಂಡಿತು. ನಾಲ್ಕು ಪುಟಗಳ " ನೇತ್ರಾವತಿ ವಾರ್ತೆ"ಯ ೧ , ೩ ಮತ್ತು ೪ನೇ ಪುಟಗಳಲ್ಲಿ ಸ್ಥಳೀಯ ಮತ್ತು ರಾಜ್ಯ ಮಟ್ಟದ  ಕ್ರೈಮ್ ಮತ್ತು ರಾಜಕೀಯ ಸುದ್ಧಿಗಳು ಪ್ರಕಟವಾಗುತ್ತಿತ್ತು. ಎರಡನೇ ಪುಟದಲ್ಲಿ ಸಾಮಾಜಿಕ ಕಾಳಜಿಯ ಗಂಭೀರ ಸಂಪಾದಕೀಯ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಲೇಖನಗಳು ಪ್ರಕಟವಾಗುತ್ತಿತ್ತು.  ನೀರ್ಪಾಜೆ ಭೀಮ ಭಟ್ (ವಾಗ್ಭಟ), ಪ್ರೊ. ಬಿ. ಎಂ. ಇಚ್ಲಂಗೋಡು, ಗಣಪತಿ ದಿವಾಣ ಸಹಿತ ನಾಡಿನ ಅನೇಕ ಮಂದಿ ಹಿರಿಯ ಬರಹಗಾರರ ಬರಹಗಳು ಇದರಲ್ಲಿ ನಿರಂತರವಾಗಿ ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ, ಉಡುಪಿ