ಕನ್ನಡ ಪತ್ರಿಕಾ ಲೋಕ (೪೪) - ಶೋಧನೆ

ಕನ್ನಡ ಪತ್ರಿಕಾ ಲೋಕ (೪೪) - ಶೋಧನೆ

ಸರಕಾರೇತರ ಸ್ವಯಂಸೇವಾ ಸಂಸ್ಥೆ 'ಸಂವಾದ'ದ "ಶೋಧನೆ"

ಬೆಂಗಳೂರಿನ ಸರಕಾರೇತರ ಸ್ವಯಂಸೇವಾ ಸಂಸ್ಥೆ 'ಸಂವಾದ' ಬಳಗದ ಸದಸ್ಯರು ರೂಪಿಸಿ ಹೊರತರುತ್ತಿದ್ದ ಮಾಸಿಕ " ಶೋಧನೆ". ಬೆಂಗಳೂರಿನ ಶೇಷಾದ್ರಿಪುರಂ ನೆಹರೂ ನಗರ ಮುಖ್ಯ ರಸ್ತೆಯಲ್ಲಿ ಕಚೇರಿ ಹೊಂದಿರುವ 'ಸಂವಾದ' ರಾಜ್ಯ ವ್ಯಾಪಕವಾಗಿ ಕೆಲಸ ಮಾಡುವ ಸಂಸ್ಥೆ.

ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯ ಬರಹಗಳೊಂದಿಗೆ ಬರುತ್ತಿದ್ದ "ಶೋಧನೆ"ಗೆ ಮುರಳಿ ಮೋಹನ್ ಕಾಟಿ ಸಂಪಾದಕರಾಗಿದ್ದರು. ಮಂಜುನಾಥ್, ಮಂಜುಳ, ಅರುಳ್ ದಾಸ್ ವಿಜಯ್ ಹಾಗೂ ರಾಮಕ್ಕ ಸಂಪಾದಕೀಯ ಬಳಗದ ಸದಸ್ಯರಾಗಿದ್ದರು. ಆನೇಕಲ್ ನಾರಾಯಣ ಪತ್ರಿಕೆಯ ವಿನ್ಯಾಸಕರಾಗಿದ್ದರು. ನೇತ್ರಾವತಿ ಕೆ. ವಿ., ಅರುಳ್ ಹಾಗೂ ಶಿವಕುಮಾರ್ ಇವರ ರೇಖಾಚಿತ್ರಗಳು ಪ್ರತೀ ಪುಟಗಳ ವಿನ್ಯಾಸದಲ್ಲೂ ಅಲಂಕರಿಸುತ್ತಿತ್ತು.

೩೨ ಪುಟಗಳ ಪುಸ್ತಕ ರೂಪದಲ್ಲಿ ಬರುತ್ತಿದ್ದ "ಶೋಧನೆ"ಯ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿ ಆಗಿತ್ತು. "ಶೋಧನೆ", ಪ್ರಕಟವಾಗುತ್ತಿದ್ದುದು ೨೦೦೯ರಲ್ಲಿ.

-ಶ್ರೀರಾಮ ದಿವಾಣ, ಉಡುಪಿ