ಕನ್ನಡ ಪ್ರೇಮ ಉಕ್ಕಿಸದ ಸಂಭ್ರಮಾಚರಣೆಗಳು...
ನಾನು ಓದಿದ್ದು 'ಜವಾಹರ್ ನವೋದಯ ವಿದ್ಯಾಲಯ' ಎಂಬ ಎಂದೂ ಮರೆಯಲಾಗದ, ಹೆತ್ತವರಿಗಿಂತಲೂ ಹೆಚ್ಚು ಪ್ರೀತಿಯಿಂದ ನನ್ನಂತಹ ಸಾವಿರಾರು ಮಕ್ಕಳನ್ನು ಸಲಹಿ ಪೋಷಿಸಿದ ಕೇಂದ್ರಿಯ ವಿದ್ಯಾಲಯವೊಂದರಲ್ಲಿ. ಕೇಂದ್ರೀಯ ಪಠ್ಯವೆಂದರೆ ಅಲ್ಲಿ ಕನ್ನಡ ಕಲಿಕೆಗಿಂತ ಆಂಗ್ಲ ಮತ್ತು ಹಿಂದಿ ಕಲಿಕೆಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಹಾಗಂತ ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಎಂಬರ್ಥವಲ್ಲ. ಈ ಎಲ್ಲಾ ಪಠ್ಯ ವಿಷಯಗಳೊಂದಿಗೆ ಕನ್ನಡ ವಿಷಯವೂ ಇತ್ತು. ಕನ್ನಡ ಕಲಿಸುವ ಗುರುಗಳಿದ್ದರು. ಅವರನ್ನು ನಾವು ‘ಗುರೂಜಿ’ ಎಂದೇ ಸಂಬೋಧಿಸುತ್ತಿದ್ದೆವು. ಹಿಂದಿ ಕಲಿಸುವ ಶಿಕ್ಷಕರನ್ನು ‘ಶ್ರೀಮಹಾನ್ ಜೀ’ ಎಂದು ಕರೆಯುವ ವಾಡಿಕೆಯಿತ್ತು. ಇಂತಹ ಕೇಂದ್ರಿಯ ವಿದ್ಯಾಲಯದೊಳಗೆ ಇಂಗ್ಲೀಷ್ ಮತ್ತು ಹಿಂದಿಗೆ ಎಷ್ಟು ಮಹತ್ವವಿತ್ತೋ ಕನ್ನಡ ಭಾಷೆಗೂ ಅಷ್ಟೇ ಸ್ವಚ್ಛಂದವಾದ ಮಹತ್ವವಿತ್ತು. ಶಾಲೆ ನಡೆಯುತ್ತಿದ್ದ ವಾರದ ಆರು ದಿನಗಳಲ್ಲಿ ಬುಧವಾರ ಮತ್ತು ಶನಿವಾರ ಮುಂಜಾನೆಯ ಪ್ರಾರ್ಥನೆ ಕಸ್ತೂರಿ ಕನ್ನಡದಲ್ಲಿಯೇ ಸಾಂಗವಾಗಿ ಸಾಗುತ್ತಿತ್ತು. ತನ್ನದೇ ಘನತೆ ಹೊಂದಿದ್ದ ‘ಜವಾಹರ್ ನವೋದಯ ವಿದ್ಯಾಲಯ’ ಶಾಲೆಗಳ ಪ್ರಾರ್ಥನೆಗಳಲ್ಲಿ ಕನ್ನಡ ಪ್ರೇಮ ಮೊಳಗುತ್ತಿತ್ತು. ‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ...’ ಹಾಡನ್ನು ಸಾಮೂಹಿಕವಾಗಿ ಹಾಡುವಾಗ ಮೈ ರೋಮಗಳು ನೆಟ್ಟಗಾಗುತ್ತಿದ್ದವು.
Comments
ಚೆಂದದ ಲೇಖನ ಮೋಹನವ್ರೆ
ಜೀ... ಧನ್ಯವಾದಗಳು... :)
ಒಳ್ಳೆಯ ಬರಹ !
In reply to ಒಳ್ಳೆಯ ಬರಹ ! by Shreekar
ಧನ್ಯವಾದಗಳು ಜೀ...