ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯ ಮಕ್ಕಳಿಗೆ ತಂತ್ರಙ್ಞಾನದ ಬಳಕೆಯಿಂದ ಉಚಿತ ಉತ್ತಮ ಶಿಕ್ಷಣ ಒದಗಿಸುವ ಪ್ರಯತ್ನ

ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯ ಮಕ್ಕಳಿಗೆ ತಂತ್ರಙ್ಞಾನದ ಬಳಕೆಯಿಂದ ಉಚಿತ ಉತ್ತಮ ಶಿಕ್ಷಣ ಒದಗಿಸುವ ಪ್ರಯತ್ನ

ನಿಮಗಿದು ಗೊತ್ತೇ? ಭಾರತದಲ್ಲಿ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ೧೮ ಕೋಟಿಯನ್ನು ಮೀರಿದೆ. ಆದರೆ ಇವರಲ್ಲಿ ಶೇ.೫೦ ಮಕ್ಕಳಿಗೆ ಸರಿಯಾಗಿ ಓದಲೂ ಬರುವುದಿಲ್ಲ. ಓದಲು ಬರುವ ಮಕ್ಕಳಲ್ಲಿ ಸುಮಾರು ಅರ್ಧಪಾಲು ಮಕ್ಕಳಿಗೆ ಗಣಿತದಲ್ಲಿನ ಸರಳ ಲೆಕ್ಕಗಳಾದ ಕೂಡಲು, ಕಳೆಯಲು ಬರುವುದಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಪೀಳಿಗೆಯ ಯುವಜನರಲ್ಲಿ ಬಹುಪಾಲು ಜನರು ನವಯುಗದ ಯಾವುದೇ ಉದ್ಯೋಗಕ್ಕೆ / ಹುದ್ದೆಗೆ ಯೋಗ್ಯರಾಗಿರುವುದಿಲ್ಲ. ಇದರಿಂದಾಗಿ ಭಾರತ ಬಡದೇಶವಾಗಿಯೇ ಉಳಿದು,  ದುಷ್ಕರ್ಮಗಳು ಹೆಚ್ಚಿ ಪರಿಸ್ಥಿತಿ ಭೀಕರವಾಗುವುದರಲ್ಲಿ ಸಂದೇಹವೇ ಇಲ್ಲ. ಭಾರತ ಒಂದು ಮುಂದುವರೆದ ದೇಶವಾಗಿ, ವಿಶ್ವದಲ್ಲಿ ಒಂದು ಪ್ರಮುಖ ಶಕ್ತಿಯಾಗುವುದಂತೂ ಕನಸಾಗೇ ಉಳಿಯುತ್ತದೆ. ಈ ಮಾಹಿತಿಯನ್ನು ಓದಿ ನಾನಾ ರೀತಿಯ ಉದ್ಗಾರಗಳನ್ನು ಮಾಡಿ, ಮತ್ತೆ ನಮ್ಮ ಎಂದಿನ ದಿನಚರಿಗೆ ಮರಳಬಹುದು ಅಥವಾ ಈ ಪರಿಸ್ಥಿತಿಯನ್ನು ಬದಲಾಯಿಸುವ ಪ್ರಯತ್ನದಲ್ಲಿ ಭಾಗಿಯಾಗಬಹುದು. ಅಲ್ಲವೇ?

ಈ ಪರಿಸ್ಥಿತಿಯನ್ನು ಬದಲಾಯಿಸುವ ದಿಶೆಯಲ್ಲಿ ಇಟ್ಟ ಒಂದು ದಿಟ್ಟ ಹೆಜ್ಜೆಯೇ edZilla ಎಂಬ ಸಂಸ್ಠೆ. ಸರ್ಕಾರಿ ಶಾಲೆಯ ಮಕ್ಕಳಿಗೆ ತಂತ್ರಙ್ಞಾನದ ಬಳಕೆಯಿಂದ ಉಚಿತವಾಗಿ ಉತ್ತಮ ಶಿಕ್ಷಣ ಒದಗಿಸುವ ಸದುದ್ದೇಶದಿಂದ ನವೆಂಬರ್ ೨೦೧೧ರಲ್ಲಿ ಮೂವರು ಐ.ಐ.ಟಿಯನ್ನರು ಬೆಂಗಳೂರಿನಲ್ಲಿ edZilla ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯ ಮತ್ತು ಸಂಸ್ಥಾಪಕರ ಬಗ್ಗೆ ತಿಳಿಯಲು http://www.educatezilla.com ಗೆ ಭೇಟಿಕೊಡಿ. edZillaದ ಅಂತರ್ಜಾಲ ತಂತ್ರಾಂಶಗಳನ್ನು ಉಪಯೋಗಿಸಿ, ಅಗತ್ಯ ಪರಿಣತಿ ಹೊಂದಿರುವ ಯಾರು ಬೇಕಾದರೂ ಪಠ್ಯ ಪುಸ್ತಕದ ಪಾಠಗಳನ್ನು ಅಳವಡಿಸಿಕೊಡಬಹುದು. ಈ ತಂತ್ರಾಂಶಗಳನ್ನು ಉಪಯೋಗಿಸಿ ಕೆಲವೊಂದು ಮಾದರಿ ಪಾಠಗಳನ್ನು ಸಹಾ ಸಿದ್ಧಮಾಡಲಾಗಿದೆ. ಈ ರೀತಿ ಅಳವಡಿಸಿದ ಪಠ್ಯಗಳನ್ನು ಕಡಿಮೆ ಬೆಲೆಯ android tablet ಮೇಲೆ ತೋರಿಸಲು edZilla ತಂತ್ರಾಂಶವನ್ನು ಸಿದ್ಧಪಡಿಸಿದೆ (http://www.educatezilla.com/product.html) . ಅದಲ್ಲದೆ ಕಡಿಮೆ ಬೆಲೆಯ android tablet ಗಳ ಖರ್ಚಿನ ಹೊಣೆಗೆ ಪ್ರಾಯೋಜಕರ ಮತ್ತು NGO ಗಳ ಸಹಭಾಗತ್ವ ಪಡೆಯುವ ಪ್ರಯತ್ನಗಳು ನಡೆದಿವೆ. ಈ ತಂತ್ರಾಶಗಳನ್ನು ಭಾರತದಾದ್ಯಂತ ಯಾವುದೇ ಭಾಷೆಯ ಪಠ್ಯಕ್ಕೆ ಉಪಯೋಗಿಸಬಹುದಾದರೂ, ಪ್ರಾರಂಭದಲ್ಲಿ ಕರ್ನಾಟಕ ರಾಜ್ಯದ ಕನ್ನಡ ಮಾಧ್ಯಮದ ಪಠ್ಯವನ್ನು ಅಳವಡಿಸಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಒದಗಿಸುವ ಪ್ರಯತ್ನ ನಡೆದಿದೆ.

ಈಗ ಈ ಸಂಸ್ಥೆಗೆ ಇತರ ಕನ್ನಡಾಭಿಮಾನಿಗಳಿಂದ ಒಂದು ಅತಿ ಮುಖ್ಯವಾದ ಸಹಾಯ ಬೇಕಾಗಿದೆ. ಪಠ್ಯ ಪುಸ್ತಕದಲ್ಲಿರುವ ಎಲ್ಲಾ ಪಾಠಗಳನ್ನೂ ಅಳವಡಿಸಲು ಸ್ವಯಂಸೇವಕರು ಬೇಕಾಗಿದ್ದಾರೆ.  ನಿಮ್ಮ ಮನೆಯಲ್ಲೇ ಕುಳಿತು ಮಕ್ಕಳ ಜೀವನದಲ್ಲಿ ಉತ್ತಮ ಬದಲಾವಣೆ ತರಲು ಪ್ರಯತ್ನಿಸಲು ಇದು ಸುವರ್ಣಾವಕಾಶ. ಈಗಾಗಲೇ ಹಲವರು ಈ ರೀತಿ ಸಹಾಯ ಮಾಡುತ್ತಿದ್ದಾರೆ. ಆದರೆ ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿದೆ. ಆಸಕ್ತ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಯತ್ನದಲ್ಲಿ ಭಾಗಿಯಾದರೆ ಇದು ಯಶಸ್ವಿಯಾಗಿ, ದೇಶಕ್ಕೆ ಹೆಚ್ಹಿನ ರೀತಿಯಲ್ಲಿ ಒಳಿತಾಗುವುದರಲ್ಲಿ ಸಂದೇಹವೇ ಇಲ್ಲ. ಆಸಕ್ತರು http://www.educatezilla.com/volunteers.html ಗೆ ಭೇಟಿನೀಡಿ, ಈ ಪ್ರಯತ್ನದಲ್ಲಿ ಭಾಗಿಯಾಗಬಹುದು.

ಜೈ ಹಿಂದ್
ಜೈ ಕರ್ನಾಟಕ ಮಾತೆ

Comments

Submitted by nageshamysore Tue, 10/08/2013 - 09:01

ಉತ್ತಮ ಪ್ರಯತ್ನ. ಇದು ಯಶಸ್ವಿಯಾದಲ್ಲಿ ಬರಿ ಭಾರತೀಯ ಮಕ್ಕಳಿಗೆ ಮಾತ್ರವಲ್ಲದೆ, ಹೊರನಾಡಿನಲ್ಲಿ ಕಲಿಯುವ ಅನುಕೂಲಗಳಿಲ್ಲದ ಮಕ್ಜಳಿಗೂ ಕಲಿಸಲು ಬಳಸುವ ಸಾಧ್ಯತೆಯನ್ನು ಪರಿಗಣಿಸಬಹುದು.
Submitted by PrabhaMS Thu, 10/10/2013 - 10:06

ಪ್ರಿಯ ಸಂಪದ ಓದುಗರೇ, ನನ್ನ ಲೇಖನದ ಶೀರ್ಷಿಕೆಯಲ್ಲಿ ಮತ್ತು ಲೇಖನದೊಳಗೆ ತಂತ್ರಜ್ಞಾನ ಎಂಬ ಪದವನ್ನು ತಪ್ಪಾಗಿ ಬರೆದಿರುವುದಕ್ಕಾಗಿ ತಮ್ಮ ಕ್ಷಮೆ ಕೋರುವೆ. ಲೇಖನವನ್ನು ಪ್ರಕಟಿಸಿದ ನಂತರ ನನ್ನ ತಪ್ಪು ನನಗೆ ಅರಿವಾಯಿತು. ಆದರೆ ಲೇಖನವನ್ನು ತಿದ್ದಲು ಅಥವಾ ಹಿಂತೆಗೆದುಕೊಳ್ಳಲು ಯಾವುದೇ ಮಾರ್ಗವೂ ಗೋಚರವಾಗಲಿಲ್ಲ. ಅದಕ್ಕಾಗಿ ಮತ್ತೊಮ್ಮೆ ಕ್ಷಮೆ ಕೋರುವೆ.