ಕನ್ನಡ ವಿಕಿಪೀಡಿಯ ಕೂಟ
ಕನ್ನಡ ವಿಕಿಪೀಡಿಯ ಕೂಟ ಈ ಬಾರಿ ಬೆಂಗಳೂರಿನಲ್ಲಿ!
ಪತ್ರಿಕಾ ಸಂಪರ್ಕ
ಸ್ತಳ : ನಯನ ಸಭಾಂಗಣ, ಕನ್ನಡ ಭವನ (ರವೀಂದ್ರ ಕಲಾಕ್ಷೇತ್ರದ ಪಕ್ಕ)
ದಿನ : ಏಪ್ರಿಲ್ ೨ನೆ ತಾರೀಖು, ಭಾನುವಾರ.
ಕಾಲ : ಸಂಜೆ ೬ ರಿಂದ ೮ ರ ವರೆಗೆ.
ಪ್ರವೇಶ : ಉಚಿತ.
ಆದರೆ ಮೊದಲೇ ನಿಮ್ಮ ಹೆಸರನ್ನು ನೊಂದಾಯಿಸಿ, ಮತ್ತು ನಿಮಗೆ ಸೌಕರ್ಯಗಳನ್ನು
ಕಲ್ಪಿಸುವಲ್ಲಿ ನಮಗೆ ನೆರವಾಗಿ.
ವಿಕಿಪೀಡಿಯ ಅವರು ನಿಯೋಜಿಸುತ್ತಿರುವ ಪತ್ರಿಕಾ ಸಂಪರ್ಕ ಕೂಟಕ್ಕೆ ನಿಮಗೆಲ್ಲಾ ಸ್ವಾಗತ.
ಮುಂದಿನ ತಿಂಗಳು ೨ ನೇ ತಾರೀಖು, ಭಾನುವಾರ ಬೆಂಗಳೂರಿನಲ್ಲಿ ಆಯೋಜಿಸಿರುವ
ಇ-ಕೂಟ, ಇ-ಸಂಪರ್ಕ ಕ್ಷೇತ್ರದಲ್ಲೇ ಒಂದು ಮೈಲಿಗಲ್ಲಾಗಿದೆಯೆಂದರೆ ಆಶ್ಚರ್ಯವಿಲ್ಲ! ಕಾರ್ಯಕ್ರಮ ವನ್ನು
ಹಿರಿಯ ಜ್ಞಾನಪೀಠ ವಿಜೇತರಾದ ಶ್ರೀ ಯು.ಆರ್.ಅನಂತಮೂರ್ತಿಯವರು ಆಶಯ ಭಾಷಣವನ್ನು
ಮಾಡುವುದರ ಮೂಲಕ ಉದ್ಘಾಟಿಸುತ್ತಾರೆ.
ವಿಕಿಪೀಡಿಯ ಅಂತರ್ಜಾಲ ವಿಶ್ವಕೋಶದ ಬಗ್ಗೆ ಆಸಕ್ತರು, ವಿಕಿಪೀಡಿಯ ಸದಸ್ಯರುಗಳು ತಮ್ಮ ಅಭಿಪ್ರಾಯ/ಅನುಭವಗಳನ್ನು ಹಂಚಿಕೊಳ್ಳುವಲ್ಲಿ, ಚರ್ಚಿಸುವಲ್ಲಿ ಮತ್ತು ಸಾರ್ವಜನಿಕರಲ್ಲಿ ವಿಕಿ ತಂತ್ರಜ್ಞಾನದ ಬಗ್ಗೆ
ತಿಳುವಳಿಕೆ ಮೂಡಿಸುವಲ್ಲಿ ಕಾರ್ಯಕ್ರಮದ ಯಶಸ್ಸನ್ನು ಗುರುತಿಸಲಾಗಿದೆ.
ಕಾರ್ಯಕ್ರಮದ ಬಗ್ಗೆ ಈಗಾಗಲೆ ಸಿಧ್ಹಪಡಿಸಿರುವ ವೇಳಾಪಟ್ಟಿಯನ್ನು [:http://kn.wikipedia.org/wiki/WP:PM]
ನೊಂದಿಗೆ ಸಂಪರ್ಕಿಸಿ ಪಡೆಯಬಹುದು.
ಆದರೂ, ಕಾರ್ಯಕ್ರಮದ ಕಿರು ಪರಿಚಯವನ್ನು ಮಾಡಲು ಇಚ್ಛಿಸುತ್ತೇವೆ.
ತಾತ್ಕಾಲಿಕ ಕಾರ್ಯವಾಹಿ
೧ ನೇ ಅವಧಿ:
ಪತ್ರಿಕಾಗೊಷ್ಟಿ - ಕನ್ನಡ ವಿಕಿಪೀಡಿಯ ವಿಶ್ವಕೋಶ, ಹಾಗೂ ವಿಕಿಮೀಡಿಯ ಸಂಸ್ಥೆಯ
ವಿಕಿ ತಂತ್ರಾಂಶದ ಸಾಧನೆಗಳ ಬಗ್ಗೆ.
೨ ನೇ ಅವಧಿ ಯಲ್ಲಿ ಶ್ರೀ ಅನಂತಮೂರ್ತಿ ಯವರ ಭಾಷಣ.
ಯೂನಿಕೋಡಿನಬಗ್ಗೆ ಮಾಹಿತಿ
೩ ನೇ ಅವಧಿ : ನಿಮ್ಮ ಗಣಕದಲ್ಲಿ ಇಂಡಿ/ಯೂನಿಕೋಡನ್ನು ಅಳವಡಿಸುವುದು ಹೇಗೆ ಎನ್ನುವ ವರದಿ.
ಸಹಕಾರ ಯೋಜನೆಗಳ ಬಗ್ಗೆ ವಿವರ.
ಬಳಕೆದಾರರ ಅನುಭವ ಕಥನ.
೪ ನೇ ಅವಧಿ :
ಅನೌಪಚಾರಿಕ ಚರ್ಚೆ :
ಮುಂದಿನ ಗುರಿ. ಹೆಚ್ಚು ಹೆಚ್ಚು ಜನಪ್ರಿಯತೆಯನ್ನು ಸಾಧಿಸುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು.
ಕಾರ್ಯ ನಿರ್ವಹಣಾ ಶೈಲಿಯಲ್ಲಿ ಪ್ರಗತಿ ಇತ್ಯಾದಿ.
ಮೇಲಿನ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನೀವು ಮಾಡಬೇಕಾದದ್ದು ಇಷ್ಟೆ.
ದಯಮಾಡಿ, ನಿಮ್ಮ ನಿಮ್ಮ ಹೆಸರನ್ನು ನೊಂದಾಯಿಸಿ.
ವಿಕಿಪೀಡಿಯ ಸದಸ್ಯತ್ವವನ್ನು, ನಿಯಮಿತ ಕಾಗದದಲ್ಲಿ ವಿವರಗಳನ್ನು ಭರ್ತಿಮಾಡುವುದರ ಮೂಲಕ ಪಡೆದುಕೊಳ್ಳಿ.