ಕನ್ನಡ ಸಂಘಟನೆಗಳನ್ನು ನಿಷೇದಿಸಿ

ಕನ್ನಡ ಸಂಘಟನೆಗಳನ್ನು ನಿಷೇದಿಸಿ

ಬರಹ

ಅಂತು ಇಂತು ಚರ್ಚ್ ಗಲಾಟೆಯ ಚರ್ಚೆ ಕಾವೇರುವ ಮುನ್ನವೆ....
ನಮ್ಮ ಸರ್’ಖಾರ ಸ್ವಲ್ಪ ಖಾರವಾಗಿ ತಹಬಂದಿಗೆ ತಂದಿದೆ. ಆದ್ರೂ ನನಗೆ ಆ ಘಾಟು ಇನ್ನು ನೆತ್ತಿಯಿಂದ ಇಳಿದೇ ಇಲ್ಲ ... ಅದಕ್ಕೆ.... ಭಜರಂಗಿಗಳೊ ಯಡ್ಡಿಯೊ ಅಲ್ಲ.... ಇವರಿಬ್ಬರಿಗಿಂತ ಅಪಾಯಕಾರಿಗಳಾಗಿ ತಮ್ಮ ಅಪಾರ ಜಾಣತನವನ್ನು ತಮ್ಮ ವಿವೇಕಯು(ವಿವಾದಿ)ತ ಹೇಳಿಕೆಗಳನ್ನು ನೀಡುವ ಅನ್ಂತಮೂರ್ತಿ ರವರ ಮಾತುಗಳು ಕೇಳಿ.

ಆ ಘ್ಹಾಟು ಏನಪ್ಪಾ ಅಂದ್ರೆ ಚರ್ಚ್ ಘಲಾಟೆ ಸಮಯದಲ್ಲಿ ಇವರು ಹೇಳಿದ್ದು ಹಿಂದು ಧರ್ಮ ಉಳಿದು ಬಂದಿರುವುದು ಸಾದು ಸಂತರಿಂದ ಬ್ರಾಹ್ಮಣ ವೈದಿಕರಿಂದಾನೆ ಹೊರತು, ಹಿಂದು ಪರಿಷತ್,ಭಜರಂಗಿ, ಸಂಘ ಪರಿವಾರದಿಂದ ಅಲ್ಲ.ಆದ್ದರಿಂದ ಅವುಗಳನ್ನು ನಿಷೇದಿಸಿ ಅಂತ. ಹಾಗೆ ಮಾಡುವುದು ನಮ್ಮ ಕೇಂದ್ರ ಸರ್ಕಾರವಿವೇ(ಕ)ಚನೆಗೆ ಬಿಟ್ಟಿದ್ದು.
"ಹಾಗಾದರೆ ಇಲ್ಲಿಯವರೆಗು ಕನ್ನಡ ಉಳಿದು ಬಂದಿರುವುದು ಸಾಹಿತಿಗಳು ದಾಸರು ಕವಿಗಳು ಹಾಗು ಜನಪದದಿಂದಾನೆ ಹೊರತು ಈಗಿನ ಯಾವುದೇ ಕನ್ನಡ ಸಂಘಟನೆಗಳಿಂದ ಅಲ್ಲಾ ತಾನೆ....?
ಅವರು ದೊಂಬಿ ಗಲಾಟೆ ಮಾಡ್ತಾರೆ, .ಇವರು ಚಳುವಳಿ? ಮಾಡ್ತಾರೆ. ಅವರು ಪ್ರತಿಭಟನೆ ಮಾಡ್ತಾರೆ.ಅವ್ರು ಚರ್ಚ್ ಮಸೀದಿ ಹೊಡೀತಾರೆ, ಇವರು ಮಸಿ ಬಳೆದು ಬಸ್ಸು ಕಾರು ಹೊಡೀತಾರೆ. ಇವರು ಕನ್ನಡದ ಜೊತೆಗೆ ಇತ್ತೀಚೆಗೆ ಸಂಸ್ಕ್ರುತಿ ರಕ್ಷಕರೂ.....? ಆಗಿ ಕೈಗೆ ಸಿಕ್ಕ ಹೆಣ್ಣುಮಕ್ಕಳ ಮರ್ಯಾದೆಯನ್ನು ಟಿ.ವಿ.ಗಳ ಮುಂದೆ ತೋರಿಸಿ (ಅ)ಸಭ್ಯವಾಗಿ ನಡೆದು ಕೊಳ್ಳುತ್ತಾರೆ....

ಆ ಸಂಘಟನೆಗಳನ್ನು ನಿಷೇದಿಸುವುದಾದರೆ ಈ ಕನ್ನಡ ಸಂಘಟನೆಗಳನ್ನು ನಿಷೇದಿಸುವಂತೆ ಹೇಳಿಕೆ ನೀಡುವ ತಾಕತ್ತು ಅನಂತಮೂರ್ತಿಯವರಗಿದೆಯೇ...?