ಕನ್ನಡ ಸಾಮ್ರಾಜ್ಯಕ್ಕೆ ಮರು ಪಯಣ .........

ಕನ್ನಡ ಸಾಮ್ರಾಜ್ಯಕ್ಕೆ ಮರು ಪಯಣ .........

ನಾನು ಅಲೆಮಾರಿ. ನನಗೆ ಊರೂರು ಸುತ್ತುವುದು ಹೊಸ ಸ್ಥಳಗಳನ್ನು ಭೇಟಿ ಮಾಡುವುದು ಎಂದರೆ ಅಚ್ಚುಮೆಚ್ಚು   ಯಾರಾದರೂ ನನ್ನ ಸ್ನೇಹಿತೆಯರು ಕರೆದರೆ ಸಾಕು  ಹೆಗಲಿಗೊಂದು ಚೀಲ ಹಾಕಿ ಕೊಂಡು  ಹೊರಟು ಬಿಡುತ್ತೇನೆ.  ತುತ್ತಿನ ಚೀಲದ  ಚಿಂತೆ  ಇಲ್ಲದಿದ್ದರೆ ಯಾವತ್ತೂ ತಿರುಗುತ್ತಲೇ ಇರುತ್ತಿದ್ದೆನೇನೋ! ಏನು ಮಾಡೋದು, ಆಗೋದಿಲ್ಲವೇ!
 
ಹಂಪೆಗೆ ಹೇಗೆ ಹೋಗುವುದು ? 

* ಬಿಜಾಪುರ, ಬೆಂಗಳೂರು, ಹುಬ್ಬಳ್ಳಿ, ಗುಂತಕಲ್ ಮುಂತಾದ ಸ್ಥಳಗಳಿಂದ ಹೋಸಪೇಟೆಗೆ  ನೇರ ರೈಲು ಸಂಪರ್ಕವಿದೆ. ಹೊಸಪೇಟೆಯಿಂದ ಹಂಪಿಗೆ 13 ಕಿ.ಮೀ ಮತ್ತು ಗಂಗಾವತಿಗೆ 12 ಕಿ.ಮೀ ದೂರವಿದೆ. ಬೆಂಗಳೂರಿಗೆ 335 ಕಿ.ಮೀ ದೂರದಲ್ಲಿದೆ.

* ಹೊಸಪೇಟೆ ಹಾಗೂ ಗಂಗಾವತಿಗೆ ಬಿಜಾಪುರ, ಬೆಂಗಳೂರು, ಹುಬ್ಬಳ್ಳಿ, ಗುಂತಕಲ್, ಕೊಪ್ಪಳ ಮುಂತಾದೆಡೆಗಳಿಂದ ಬಸ್ ಸಂಪರ್ಕವಿದೆ. ಈ ಎಲ್ಲಾ ಸ್ಥಳಗಳಿಂದ ಹಂಪಿಗೆ ಸುಲಭವಾಗಿ ತಲುಪಬಹುದು 

* ಇದಲ್ಲದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬಸ್ ಗಳನ್ನು ಪಡೆದುಕೊಳ್ಳಬಹುದು.
 

ನಿಮ್ಮ ಲೆಕ್ಕಕ್ಕೆ: 

* ಬಸ್ (ಬೆಂಗಳೂರಿನಿಂದ ಹಂಪಿಗೆ) ೫೦೦-೬೦೦ ರೂ.

* ಕೊಠಡಿ  ಬಾಡಿಗೆ ೫೦೦ -೨೦೦೦ ರೂ 

* ಬೋಟ್ ರೈಡ್ ೨೦೦-೩೦೦ರೂ. 

* ಸೈಕಲ್ ೧೦೦-೧೫೦ ರೂ

* ಸ್ಕೂಟರ್ ೩೦೦-೪೦೦ ರೂ 

* ಊಟ/ತಿಂಡಿ ೩೦೦-೫೦೦ ರೂ. (ದಿನಕ್ಕೆ)

* ಸ್ಮಾರಕಗಳ ದರ್ಶನಕ್ಕೆ ೨೦೦-೩೦೦ ರೂ

* ಪ್ರವಾಸಕ್ಕೆ ಪೂರಕವಲ್ಲದ ತಿಂಗಳು ಜುಲೈ-ಆಗಸ್ಟ್
 
ಉಳಿದು ಕೊಳ್ಳುವುದು ಎಲ್ಲಿ?(ಲ್ಯಾಂಡ್ ಲೈನ್ ಕೋಡ್ 08394) 

ಹೊಸಪೇಟೆಯಲ್ಲಿ ಉಳಿದುಕೊಳ್ಳಬಹುದು ಅಲ್ಲಿ ಉತ್ತಮ ದರ್ಜೆಯ ಹೋಟೆಲುಗಳು ಇವೆ.  ಮಲ್ಲಿಗೆ ಹೋಟೆಲ್ ,ಕೃಷ್ಣ ಪ್ಯಾಲೇಸ್  ಹಂಪಿ ಇಂಟರ್ ನ್ಯಾಷನಲ್  ರಾಯಲ್ ಆರ್ಕಿಡ್ : ಹೋಟೆಲ್ ರಾಕ್ ರೆಜೆನ್ಸಿ,ವಿಜಯಶ್ರೀ ಹೆರಿಟೇಜ್. 
 

ನಮ್ಮ ಪ್ರವಾಸ:

ಡಿಸಂಬರ್ ನಲ್ಲಿ ನಾನು ನನ್ನ ಗೆಳತಿ ಹಂಪೆಗೆ ಹೋಗಲು ನಿರ್ಧರಿಸಿ ಸೋಮವಾರ ೧೦ನೇ ತಾರೀಖು ೨೦೧೮  ರಾತ್ರಿ ೯ ಗಂಟೆಗೆ ಬೆಂಗಳೂರಿನಿಂದ  ಹೊರಡುವ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಹೂರೆಟೆವು. ಬಸ್ಸು ಚಿತ್ರದುರ್ಗದ ಮೂಲಕ ಮಂಗಳವಾರ ಮುಂಜಾನೆ ೫.೩೦ಕ್ಕೆ ಹೊಸಪೇಟೆ ತಲುಪಿತ್ತು. 
 

ಹೊಸಪೇಟೆ:

ಅಲ್ಲಿನ ಹೋಟೆಲಿನಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದು ನಿತ್ಯಕರ್ಮಗಳನ್ನು ಮುಗಿಸಿ.... ಕಾಲಿದ್ದರೆ ಹಂಪಿ ಸುತ್ತು ಕಣ್ಣಿದ್ದರೆ ಕನ್ಯಗಿರಿ ನೋಡು ಎಂಬ ಗಾದೆಯನ್ನು ನೆನಪಿಸಿಕೊಂಡು ಹಂಪಿಯ ಕಡೆ ಪಯಣ......  ಅಲ್ಲಿನ ಹೋಟೆಲು ಮಾಲೀಕರು ಇಲ್ಲಿನ  ಆಟೋರಿಕ್ಷಾದವರು ತುಂಬಾ ಮೋಸ ಮಾಡುತ್ತಾರೆ. ನಿಮಗೆ ಏನಾದರೂ ಮಾಹಿತಿ ಬೇಕಾದರೆ ಸ್ಥಳಿಯರನ್ನು ವಿಚಾರಿಸಿ ಎಂದು ಎಚ್ಚರಿಸಿದರು...
 
ಹಂಪೆಯ ಕಂಡು ಕಣ್ಣೀರು ಹಾಕದ ಕಣ್ಣಿರುವುದೇ ?

ಹೊಸಪೇಟೆಯಿಂದ ವಿಜಯರಥವನ್ನು (ಬಿ ಎಂ ಟಿ ಸಿ ಬಸ್ಸಿನ ಹೆಸರು  ) ಏರಿ ವಿಜಯನಗರ ಸಾಮ್ರಾಜ್ಯ ದ ಸಿರಿವಂತ ರಾಜಧಾನಿಯಾಗಿದ್ದ ಹಂಪೆಯ  ಕಡೆ ಹೊರೆಟೆವು...  ಬೆಳ್ಳಿಗೆ ೧೦ಕ್ಕೆ ಹಂಪೆ ತಲುಪಿದೆವು... ತುಂಬಾ ದಿನಗಳಿಂದ ಅಂದು ಕೊಂಡ ಹಾಗೆ ಹಂಪೆಗೆ ಕಾಲಿಟ್ಟ ತಕ್ಷಣ   ಹಂಪೆಗೂ- ನನಗೂ! ಜನ್ಮ ಜನ್ಮಾಂತರದ ಅನುಬಂಧ ಇರುವ ಹಾಗೆ  ಅನಿಸಿತ್ತು,  ಅಲ್ಲಿನ ಕಲ್ಲು ಬಂಡೆಗಳ ಮಧ್ಯೆ, ಪಾಳು ಗುಡಿಗಳ ನಡುವೆ ಓಡಾಡುವಾಗ ಭಗ್ನಗೊಂಡ ಮೂರ್ತಿ ಗಳನ್ನು ಕಂಡು..... ನಾವು ಶಾಲೆಯಲ್ಲಿ ಶಿಕ್ಷಕರ ಮಾತುಗಳಿಂದ ಮತ್ತು ಪುಸ್ತಕಗಳಲ್ಲಿ ಓದಿದ್ದ ಹಂಪೆಯ ವ್ಯಭವದ ಕಥೆಗೂ ಇಂದಿನ ಸ್ಥಿತಿಗೂ...... ಇರುವ ವ್ಯತ್ಯಾಸವನ್ನು ಕಂಡು ಕಣ್ಣಲ್ಲಿ ಹನಿ ತುಂಬಿದ್ದು ಸುಳ್ಳಲ್ಲ..... 
 

ಹಂಪೆ 

ಹಂಪಿ ಜಗತ್ತಿನ ಪುರಾತನ ಶ್ರೇಷ್ಠ ನಗರಗಳಲ್ಲಿ ಒಂದು ಮತ್ತು  ವಿಶ್ವ ಪಾರಂಪರಿಕ ತಾಣ ಎಂದು ಯುನಿಸ್ಕೋಗೆ ಗೊತ್ತು ಆದರೆ ಅದು ನಮಗೆ ಗೊತ್ತಿಲ್ಲ. ಎಂತಹ ವಿಪರ್ಯಾಸ ಅಲ್ಲವೇ....  ವಿಶ್ವಪರಂಪರೆಗೆ ಸೇರಿದ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಹಂಪಿ,ವಿಜಯನಗರ ಸಾಮ್ರಾಜ್ಯದ ರಾಜಧಾನಿ ,ತುಂಗಭದ್ರ ನದಿಯ ತೀರದಲ್ಲಿದೆ. ಜಗತ್ತಿನ ಅತ್ಯಂತ ವಿಶಾಲ ಜೀವಂತ ಬಯಲು ವಸ್ತು ಸಂಗ್ರಹಾಲಯ ಎಂದು ಪ್ರಸಿದ್ಧವಾಗಿದೆ. " ಇಡೀ ಭೂ ಮಂಡಲದಲ್ಲೇ ಇದನ್ನು ಹೋಲುವಂಥ ಸ್ಥಳವನ್ನು ಕಣ್ಣುಗಳು ನೋಡಿಲ್ಲ; ಕಿವಿಗಳು ಕೇಳಿಲ್ಲ" ಎಂದು ಪರ್ಷಿಯಾದ ರಾಯಭಾರಿ ಅಬ್ದುಲ್ ರಜಾಕ್ ಹೇಳಿರುವ ಮಾತುಗಳು ಇಲ್ಲಿ ನೆನಪಾದವು .
 

 


 
 
Want to add a caption to this image? Click the Settings icon.

 

 

 

ಹಂಪೆಯ ವಿರೂಪಾಕ್ಷನ ಗುಡಿ

ಮೊದಲಿಗೆ ಹಂಪೆಯ ವಿರೂಪಾಕ್ಷನ ಗುಡಿಯ ಮುಂದೆ ನಿಂತಾಗ ಮಾತುಗಳು ಮೌನವಾದವು ಕಣ್ಣುಗಳು ಮಾತನಾಡಲು ಪ್ರಾಂಭಿಸಿದವು ..... ಕಾಲುಗಳು ಕುಣಿದಾಡಿದವು ..... ಆದರೂ ಮನಸ್ಸು ಭಾರವಾಯಿತು...ಶಿವ ಹಾಗು ಪಂಪಾ ದೇವತೆಯ ತಾಣ.ತೀರ್ಥಯಾತ್ರೆಯ ಮುಖ್ಯ ಕೇಂದ್ರ  ಪ೦ಪಾಪತಿ ದೇವಸ್ಥಾನ ಎ೦ದೂ ಕರೆಯುತ್ತಾರೆ .

ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಆಡಳಿತಗಾರ ದೇವರಾಯ ೨ ನೇ ಅಧಿಪತಿಯಾದ ಲಕಣ್ಣ ದಂಡೇಶರು ನಿರ್ಮಿಸಿದರು.ದೇವಾಲಯವು 50 ಮೀ. ಎತ್ತರದ ಗೋಪುರ ಮತ್ತು  ದ್ರಾವಿಡಿಯನ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿದೆ. ೧೩ನೇ ಶತಮಾನದಿ೦ದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಿ ಬೆಳೆಸಲಾಯಿತ್ತಂತೆ. 

ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ರಾಜರಲ್ಲಿ ಒಬ್ಬರಾದ ಕೃಷ್ಣದೇವರಾಯ ಈ ದೇವಾಲಯದ ಮುಖ್ಯ ಪೋಷಕರಾಗಿದ್ದರಂತೆ.

ವಿರೂಪಾಕ್ಷನ ದೇವಾಲಯವು  ಸುತ್ತಮುತ್ತಲಿನ ಅವಶೇಷಗಳ ನಡುವೆ  ಎದ್ದು ನಿಂತಿರುವ ಕಲಾಸೌಧ .   ಒಂಭತ್ತು ಅಂತಸ್ತುಗಳ ಬೃಹತ್ ಪ್ರವೇಶದ್ವಾರವನ್ನು ದಾಟಿ ಸಾಗಿದರೆ ವಿರೂಪಾಕ್ಷ ದೇಗುಲದ ಅಂಗಳ. ಛಾಯ ಚಿತ್ರಗಳನ್ನು ತೆಗೆಯೋ ಕ್ಯಾಮೆರಾಕ್ಕೆ ೫೦ ಮತ್ತು ವಿಡೀಯೋ ಕ್ಯಾಮೆರಾಕ್ಕೆ ೫೦೦ ರೂ ಪ್ರವೇಶ ಶುಲ್ಕ. ಪಕ್ಕದಲ್ಲೇ ಇರೋ ಚಪ್ಪಲಿ ಸ್ಟಾಂಡಲ್ಲಿ ಚಪ್ಪಲಿಯಿಟ್ಟು ಒಳನಡೆದರೆ ಅಲ್ಲಿ ಆನೆಯನ್ನು ನೋಡಬಹುದು .. ೧೦ರೂ ಕೊಟ್ಟರೆ ಮಾತ್ರ ಆ ಆನೆ ಆಶೀರ್ವಾದ ಮಾಡುವುದನ್ನು ನೋಡಿ ಪ್ರಾಣಿಗಳಿಗೂ ಹಣದ ಹಸಿವೇ?...ಎನಿಸಿತು. 

ನೋಡಲು ಎರಡು ಕಣ್ಣುಗಳು ಸಾಲದೇನೋ?.ಕಂಬದಲ್ಲಿರುವ ಕೆತ್ತನೆಗಳ ಜೊತೆಗೆ ತಲೆಯೆತ್ತಿ ನೋಡಿದರೆ ನವಗ್ರಹಗಳ ಮತ್ತು ರಾಜಸಭೆಯ ಮನಮೋಹಕ ಚಿತ್ರಕಲೆ  ಕಾಣಬಹುದು...  ಮುಂದೆ ಸಾಗಿದರೆ ಹಂಪೆಯ ಆರಾಧ್ಯ ದೈವ ವಿರೂಪಾಕ್ಷನ ಸನ್ನಿಧಿ. ಅಲ್ಲಿಯೇ ಪಕ್ಕದಲ್ಲಿ ಕರುನಾಡ ಕುಲದೇವತೆ ತಾಯಿ ಭುವನೇಶ್ವರಿಯ ಮಂದಿರ ಜೊತೆಗೆ  ಶ್ರೀ ಲಕ್ಷ್ಮೀದೇವಿ, ಶಾರದಾ ದೇವಿ, ಮಹಿಷಾಸುರ ಮರ್ಧಿನಿ, ವಿದ್ಯಾರಣ್ಯ ಸ್ವಾಮಿ, ಪಂಪಾ ದೇವಿ, ಚಂಡಿಕೇಶ್ವರ ದೇಗುಲಗಳನ್ನು ಕಾಣಬಹುದು.ವಿರದೇಗುಲದ ಪ್ರಾಂಗಣ ಪ್ರವೇಶಿಸುತ್ತಿದ್ದಂತೆಯೇ ಬಸವಣ್ಣನ ಮಂಟಪ ನಂತರ ಮತ್ತೊಂದು ಮಂಟಪ.... ಆ  ಕಂಬಗಳ ಮಂಟಪಗಳ ರಚನೆಯನ್ನು ೂಪಾಕ್ಷ ದೇಗುಲದ ಸುತ್ತಣ ಪ್ರಾಂಗಣದಲ್ಲಿ ರಾಮಾಯಣ,ಮಹಾಭಾರತ ಮತ್ತಿತರ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ಕೆತ್ತನೆಗಳನ್ನು ನೋಡಬಹುದು.   ದೇಗುಲದಲ್ಲೇ   ಅಲ್ಲೇ ಮೇಲೆ ಸಾಗಿದರೆ ಕತ್ತಲ ಆವರಣದಲ್ಲಿ ಗುಡಿಯ ಗೋಪುರದ ಪ್ರತಿ ಛಾಯೆಯನ್ನು ನೋಡಬಹುದು ! pin hole camera technology ಅನ್ನು ಅಂದೇ ಅಳವಡಿಸಿರುವ  ನಮ್ಮ ಪೂರ್ವಜರ ಜ್ಞಾನವನ್ನು ಅಲ್ಲಗಳೆಯಲು ಸಾಧ್ಯವೇ?... .    ಹಾಗೇ ಮೆಟ್ಟಿಲುಗಳನ್ನು ಏರಿ ಹೋದರೆ  ಹಕ್ಕಬುಕ್ಕರ ಗುರುಗಳಾದ ವಿದ್ಯಾರಣ್ಯರು ತಪಸ್ಸಿಗೆ ಕುಳಿತ ಜಾಗ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಮಠವನ್ನು  ಕಾಣಬಹುದು.... ಮುಂದಿನ ಸ್ಥಳಗಳ ಕಡೆ ಪಯಣ 
 
ನಿಮ್ಮ ಗಮನಕ್ಕೆ

 ಇಲ್ಲಿನ ಆಟೋದವರು ಅಲ್ಲಿ ಇಲ್ಲಿ  ಕರೆದುಕೊಂಡು ಹೋಗುತ್ತೇವೆ, ನಡೆದುಕೊಂಡು ಹೋಗೋದು ಕಷ್ಟ   ಸ್ಥಳಗಳನ್ನೆಲ್ಲಾ ನೋಡೋಕೆ ೨೫ ಕಿ.ಮೀ ಗಿಂತಲೂ ಹೆಚ್ಚಾಗುತ್ತೆ,  ಆಟೋದಲ್ಲಿ ಬರೀ ಒಂಭೈನೂರು ಮಾತ್ರ ಅಂತ ಹೇಳುತ್ತಾರೆ ಇದೆಲ್ಲ ಸುಳ್ಳು  ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ಲಿನಲ್ಲಿ ಎರಡು ಅಥವಾ ಮೂರು ದಿನಗಳಲ್ಲಿ ನೋಡಿ ಮುಗಿಸಬಹುದು.ಹೆಚ್ಚಿನ ಸ್ಥಳಗಳಿಗೆಲ್ಲಾ ನಡೆದೇ ಹೋಗಬಹುದಾದಂತಹ ಸಮೀಪದ ದಾರಿಗಳಿವೆ ಸ್ಥಳೀಯರನ್ನು ವಿಚಾರಿಸಿ ಹೋಗಬಹುದು  ಸೈಕಲ್ ಸ್ಕೂಟರ್ ಗೊತ್ತಿದವರು ಬಾಡಿಗೆಗೆ ಪಡೆದು ಸುತ್ತಬಹುದು.  ದಾಖಲೆಗೆ ವೋಟರ್ ಐಡಿ ಪಾನ್ ಕಾರ್ಡ್ ಆಧಾರ್ ಕಾರ್ಡ್ ಜೆರಾಕ್ಸ್ ಕೇಳುತ್ತಾರೆ ,ಪಂಕ್ಚರ್ರಾದರೆ ಫೋನ್ ಮಾಡಿದರೆ  ಬಂದು ಸರಿ ಮಾಡಿ ಕೊಡುತ್ತೇವೆ ಅನ್ನೋ ಇವರ ನಂಬರ್ ತೆಗೆದುಕೊಳ್ಳಿ. ... 
 

 
 


 
 
Want to add a caption to this image? Click the Settings icon.

 

 

 

ಹೇಮಕೂಟ ಬೆಟ್ಟ

ನಡೆದೇ ದೇವಸ್ಥಾನದ ಹಿಂಭಾಗಕ್ಕೆ ಹೋದರೆ ಹೇಮಕೂಟ ಬೆಟ್ಟ ನೋಡಬಹುದು. ಸಂಸ್ಕೃತದ  ಹೇಮ ಎಂದರೆ ಕನ್ನಡದಲ್ಲಿ ಸ್ವರ್ಣ ಅಥವಾ ಬಂಗಾರ. ಈ ಬೆಟ್ಟದ  ಬಗೆ ಒಂದು ಸುಂದರವಾದ ಕಥೆಯಿದೆ ಹಿಂದೆ ಶಿವನು ಇಲ್ಲಿ  ತಪಸ್ಸು ಮಾಡುವಾಗ ಪಂಪಾ ಎಂಬ ಕನ್ಯೆಯು ಭಕ್ತಿ ಯಿಂದ  ಮಾಡಿದ  ಸೇವೆಯಿಂದ ಪ್ರಸನ್ನನಾದ ಶಿವನೂ  ಪಂಪಾಳನ್ನು ವರಿಸುತ್ತಿದಂತೆ ಎಲ್ಲಾ ಕಡೆಯು ಚಿನ್ನದ  ಮಳೆಯಾಗಿ ಹೇಮಕೂಟ ಪರ್ವತ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಬೆಟ್ಟವು ಅನೇಕ ಶಿಲಾ ರಚನೆಗಳು ದೇವಾಲಯದಿಂದ ಕೂಡಿದ್ದು .ಈ ಬೆಟ್ಟವು ಹತ್ತಲು ಕೇವಲ 20 ನಿಮಿಷಗಳು  ಸಾಕು.  ಬೆಟ್ಟದ ಮೇಲಿಂದ  ಸುಂದರವಾದ ಸೂರ್ಯೋದಯ ಹಾಗು ಸೂರ್ಯಾಸ್ತಗಳನ್ನು ನೋಡಬಹುದು. ಆದರೆ ನಾವು ಮಧ್ಯಾಹ್ನ ಹೋಗಿದ್ದರಿಂದ ನೋಡಲಾಗಲಿಲ್ಲ.ಮುಂದಕ್ಕೆ  ಕಡ್ಲೆಕಾಳು ಗಣಪನ ಕಡೆ ಸಾಗಿದೆವು 

 

 


 
 
Want to add a caption to this image? Click the Settings icon.

 

ಕಡ್ಲೆಕಾಳು ಗಣಪ   ಸ್ವಲ್ಪ  ದೂರದಲ್ಲೇ ಕಡ್ಲೆಕಾಳು ಗಣಪನ ದೇವಾಲಯ ಇದೆ. ಕಡ್ಲೆಕಾಳು ಮಾರುತ್ತಿದ್ದ ವರ್ತಕ ಈ ಗಣಪನನ್ನು ಇಲ್ಲಿ ಪ್ರತಿಷ್ಠಾಪಿಸಿದನಂತೆ ಆದ್ದರಿಂದ ಕಡ್ಲೆಕಾಳು ಗಣೇಶ ಎಂದು ಕರೆಯುತ್ತಾರೆ. ಗರ್ಭಗೃಹದಲ್ಲಿ  ಬೃಹದಾಕಾರದವಾದ    ೧೮ ಅಡಿ ಎತ್ತರದ  ಏಕಶಿಲೆಯಿಂದ ನಿರ್ಮಿಸಲಾದ ಗಣೇಶನ ಮೂರ್ತಿಯನ್ನು  ಕಾಣಬಹುದು . ಗರ್ಭಗೃಹದ ಮುಂಭಾಗ  ಕಂಬಗಳನ್ನು ಒಳಗೊಂಡ ವಿಶಾಲ ರಂಗಮಂಟಪವಿದೆ. ಇಲ್ಲಿ  ಛಾಯಾಚಿತ್ರ ತೆಗೆಸಿಕೊಂಡು ಸಾಸುವೆಕಾಳು ಗಣೇಶನ ಕಡೆಗೆ.... 

 

 

 

 

 

 

 

 

 

 

 

 

 


 
 
Want to add a caption to this image? Click the Settings icon.

 

 

 

 
 
 
 
 
ಸಾಸುವೆಕಾಳು ಗಣೇಶ

ಮರೆಯದೆ ನೋಡಬೇಕಾದ ಸ್ಥಳವೆ ಸಾಸುವೆಕಾಳು ಗಣೇಶ. ಕ್ರಿ.ಶ. ೧೫೦೬ರಲ್ಲಿ ಸಾಳುವ ವಂಶದ ಇಮ್ಮಡಿ ನರಸಿಂಹನ (ಕ್ರಿ.ಶ. ೧೪೯೧-೧೫೦೫) ನೆನಪಿಗಾಗಿ ತಿರುಪತಿ ಸಮೀಪದ ಚಂದ್ರಗಿರಿಯ ಸಾಸಿವೆ ಮಾರುತ್ತಿದ್ದ ಒಬ್ಬ ವ್ಯಾಪಾರಿ ಇದನ್ನು ನಿರ್ಮಿಸಿದ್ದಾಗಿ ಅಲ್ಲಿರುವ ಶಿಲಾಶಾಸನದಲ್ಲಿ ದಾಖಲಾಗಿವೆ.  ಹೇಮಕೂಟ ಬೆಟ್ಟದ ಕೆಳಗೆ  ತೆರೆದ ಮಂಟಪದಲ್ಲಿದಲ್ಲಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾಗಿರುವ ಏಕಶಿಲೆಯ ೧೨ ಅಡಿ ಎತ್ತರದ ಚತುರ್ಭುಜ ಗಣೇಶ ಮೂರ್ತಿಯನ್ನು ಕಾಣಬಹುದು.  ಈ ಗಣೇಶ ಮೂರ್ತಿಯ ಹಿಂಭಾಗವನ್ನು ತಪ್ಪದೆ ಗಮನಿಸಿ   ಗಣಪನ ಬೆನ್ನಿನ ಭಾಗದಲ್ಲಿ ತಾಯಿ ಪಾರ್ವತಿದೇವಿಯನ್ನು  ಕೆತ್ತಲಾಗಿದೆ.  ಇಲ್ಲಿ ಗುಡಿಯ ಒಳಗೆ ಪ್ರವೇಶವಿಲ್ಲ ಹೊರಗಡೆಯಿಂದಲೇ ನೋಡಬೇಕು  ಈ ವಿಗ್ರಹದ ಬಲಗೈಯಲ್ಲಿ ಮುರಿದ ಆನೆಯ ದಂತ ಮತ್ತು ಅಂಕುಶವನ್ನುನೋಡಬಹುದು.. ಇಲ್ಲೊಂದುಛಾಯಾಚಿತ್ರತೆಗೆಸಿಕೊಂಡು  ಮುಂದೆ  ಉಗ್ರನರಸಿಂಹ ಮತ್ತು ಬಡವಿ ಲಿಂಗದ ಕಡೆ ಸಾಗಿದೆವು 

 

 


 
 
Want to add a caption to this image? Click the Settings icon.

 

 

 
ಉಗ್ರನರಸಿಂಹ

ಅಲ್ಲಿಂದ ಅನತಿ ದೂರದಲ್ಲೇ ತೆರೆದ ಮಂಟಪದಲ್ಲಿದಲ್ಲಿರುವ ಭಗ್ನ ಗೊಂಡ  ೨೨ ಅಡಿ ಎತ್ತರದ ಬೃಹತ್ ಕೈ ಮುರಿದ ಯೋಗಲಕ್ಷ್ಮೀನರಸಿಂಹನನ್ನು  ಕಾಣಬಹುದು.  ೧೫೨೮ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಶಿಲ್ಪಿ ಆರ್ಯಕೃಷ್ಣಭಟ್ಟ ಇದನ್ನು ಕೆತ್ತಿದನಂತೆ . ತಲೆಯ ಮೇಲೆ  ಹೆಡೆಬಿಚ್ಚಿದ ಸರ್ಪ, ತೊಡೆಯಮೇಲೆ ಲಕ್ಷ್ಮೀ ವಿಗ್ರಹವಿದೆ. ಗರ್ಭಗುಡಿ ಇಲ್ಲದೆ ಬಯಲಿನಲ್ಲಿರುವ . ಈ  ಯೋಗಲಕ್ಷ್ಮೀನರಸಿಂಹನನ್ನು  ಕಂಡಾಗ ಸುಲ್ತಾನರು ೧೫೬೫ರಲ್ಲಿ ಹಂಪಿಯ ಮೇಲೆಸಗಿದ ಅತ್ಯಾಚಾರದ ಕಥೆ  ಮನದ ಪಟಲದಲ್ಲಿ ಹಾಯ್ದು ಹೋಗಿ ಕಣ್ಣಾಲಿಗಳು ಒದ್ದೆಯಾದವು. 

 


 
 
Want to add a caption to this image? Click the Settings icon.

 

ಬಡವಿ ಲಿಂಗ

ನರಸಿಂಹನ ಪಕ್ಕದಲ್ಲೇ ೩.೩ಮೀಟರು ಎತ್ತರದ ಶಿವಲಿಂಗವಿದ್ದು ಇದು  ಎರಡನೆಯ ದೊಡ್ಡ ಶಿವಲಿಂಗವಂತೆ (ಮೊದಲನೆಯದು ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿದೆಯಂತೆ) ಇದು 9 ಅಡಿಯ ಎತ್ತರದ ದೇವಸ್ಥಾನದಲ್ಲಿದ್ದು   ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಆವೃತವಾಗಿರುವುದರಿಂದ  ಶಿವಲಿಂಗವು ಯಾವಾಗಲೂ ಮೂರು ಅಡಿ ನೀರಿನಲ್ಲಿ ಮುಳುಗಿರುತ್ತದೆ. . ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಶಿವನ ತ್ರಿನೇತ್ರಗಳನ್ನು ಪ್ರತಿನಿಧಿಸುತ್ತದೆ  . ಸ್ಥಳೀಯರ ನಂಬಿಕೆ ಪ್ರಕಾರ, ಹಂಪಿ ಎಂಬ ಬಡ ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಕಟ್ಟುತ್ತೆನೆಂದು  ಆಸೆ ಈಡೇರಿದ ನಂತರ  ಬಡವಲಿಂಗವನ್ನು ನಿರ್ಮಿಸಿ ಈಶ್ವರನಿಗೆ ಅರ್ಪಿಸಿದ ಎಂದೂ  ಮತ್ತು ಬಡವಿ ಎಂಬ ಬಡಹೆಂಗಸು ಇದನ್ನು ಪ್ರತಿಷ್ಠಾಪಿಸಿದ್ದರಿಂದ . ಅದಕ್ಕೆ ಬಡವಿಲಿಂಗ ಎಂದು ಹೆಸರು ಬಂದಿರಬಹುದು ಎಂಬ ಕಥೆಗಳು ಕೇಳಿಬರುತ್ತವೆ. ಯಾವ ಕಥೆ ನಂಬಬೇಕು ಎನ್ನುವುದು ನಿಮಗೆ ಬಿಟ್ಟದ್ದು ..... ಮುಂದೆ ಭೂಗತ ದೇವಾಲಯದ ಕಡೆಗೆ ಪಯಣ 

 
 
 
 
 
 

 


 
 
Want to add a caption to this image? Click the Settings icon.

 

ಅಕ್ಕತಂಗಿ ಕಲ್ಲು

ಭೂಗತ ದೇವಾಲಯದ  ಕಡೆ ಹೋಗುವಾಗ ಹಾಗೆ ದಾರಿಯಲ್ಲಿ ಸಿಕ್ಕ ಈ ಕಲ್ಲನ್ನು  ತೋರಿಸಿ ಹಂಪೆಯನ್ನು ನೋಡಲು ಬಂದ ಅಕ್ಕ ತಂಗಿಯರು ಸುತ್ತಿ ಸುತ್ತಿ ಸುಸ್ತಾಗಿ ಹಾಳಾದ ಹಂಪೆ ಎಂದರಂತೆ ಆದ್ದರಿಂದ ಅವರಿಬ್ಬರು ಅಲ್ಲೇ ಕಲ್ಲಾಗಿ ಹೋದರಂತೆ ಇದು ಅಲ್ಲಿನ ಸ್ಥಳೀಯರು  ಹೇಳುವ ಕಥೆ ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. 
 

 

 
ಭೂಗತ ದೇವಾಲಯ 

ಇದನ್ನು  ಸಹ ವಿರೂಪಾಕ್ಷ ದೇವಾಲಯ ಎಂದು ಕರೆಯುತ್ತಾರೆ  ಈ ವಿಶಾಲ ದೇಗುಲವನ್ನು  ೨೦೧೦ರಲ್ಲಿ ಉತ್ಖನನ ನಡೆಸಿ ಹೊರ ತೆಗೆಯಲಾಗಿದೆ, ಮಣ್ಣಿನ ಗೋಡೆಗಳಿಂದ ಸುತ್ತುವರಿದ ಇಲ್ಲಿ ಶಿವಲಿಂಗವನ್ನು ಕಾಣಬಹುದು .ಶಿವಲಿಂಗದ ಮುಂದೆ ಭಗ್ನಗೊಂಡಿರುವ ಇರುವ ನಂದಿ ಇದೆ.  

 


 
 
Want to add a caption to this image? Click the Settings icon.

 

 

 

ರಾಯಲ್ ಎನ್ಕ್ಲೋಸರ್ (ರಾಜಪ್ರಾಂಗಣ):

ಹಲವಾರು ರಚನೆಗಳಿಂದ ಕೂಡಿದ ವಿಸ್ತಾರವಾದ  ರಾಜಪ್ರಾಂಗಣವಿದು. ಇಲ್ಲಿ  ಭೂಗತ ದೇವಾಲಯಗಳು, ಪ್ರಸಿದ್ಧವಾದ  ಕಲ್ಯಾಣಿ ಮಹಾನವಮಿ ದಿಬ್ಬ, ಕೊಳಗಳು, ದ್ವಂಸವಾದ ವಿಗ್ರಹ ಕೆತ್ತನೆಗಳು ಕಟ್ಟೆಗಳು  ಸುಲ್ತಾನರು ೧೫೬೫ರಲ್ಲಿ ತಾಳಿಕೋಟೆ ಯುದ್ಧದಲ್ಲಿ ಹಂಪಿಯ ಮೇಲೆಸಗಿದ ಅತ್ಯಾಚಾರವನ್ನು ಕಣ್ಮುಂದೆ ತರುತ್ತಿದ್ದವು. ಶಿಲ್ಪಿಗಳ ಶ್ರಮದ  ಬೆವರಿನ ಪ್ರತೀಕವಾದ  ವಿಗ್ರಹಗಳನ್ನು ದ್ವಂಸ ಮಾಡಿರುವ   ಅವರ ಹೃದಯಗಳು ಅಷ್ಟೊಂದು ಕಠೋರವಾಗಿದ್ದವೇ? ಎಂಬ ನೂರಾರು ಉತ್ತರವಿಲ್ಲದ ಪ್ರಶ್ನೆಗಳು ಮನದಲ್ಲಿ ಎದ್ದು ನಿಂತು ಮನಸ್ಸು ಭಾರವಾಗಿ ಬಾಯಿ ಮೌನವಾಗಿ ಕಣ್ಣೀರಿನ ಹನಿ  ಗಲ್ಲವನ್ನು ಬಳಸಿ ಹಂಪೆಯ ಭುವಿಯನ್ನು ಸೇರಿತು. 
 
ಸುಲ್ತಾನರು ಯುದ್ಧದಲ್ಲಿ ಭಾಗಶಹ ನಾಶ ಮಾಡಿದ ಹಂಪೆಯನ್ನು ನಮ್ಮ ನಿರ್ಲಕ್ಷ ಸಂಪೂರ್ಣವಾಗಿ ನಾಶ ಮಾಡುತ್ತದೇನೋ ?

 


 
 
Want to add a caption to this image? Click the Settings icon.

 

 

ಕರೆಕಲ್ಲಿನ ಕಲ್ಯಾಣಿ   ಸ್ವಲ್ಪ ದೂರದಲ್ಲೇ  ಕಲ್ಲಿನಿಂದಲೇ ಮನೋಹರವಾಗಿ  ವಿನ್ಯಾಸಗೊಳಿಸಿರುವ ಕಲ್ಯಾಣಿಯನ್ನು ಕಾಣಬಹುದು ಅದರ ಒಳಗೆ ಇಳಿದು  ಛಾಯಾಚಿತ್ರ ತೆಗೆದುಕೊಳ್ಳಬೇಕು ಎಂಬ ಆಸೆ ಇತ್ತು ಆದರೆ ಅದಕೆ ಅವಕಾಶವಿರಲಿಲ್ಲ.  ಮೇಲೆ ನಿಂತು ಛಾಯಾಚಿತ್ರ ತೆಗೆದು ಕೊಂಡು ವಾಪಾಸಾದೆವು . ಹಿಂದೆ ದಸರಾ ಸಮಯದಲ್ಲಿ ಭಾಗವಹಿಸಲು ಬರುತ್ತಿದ್ದ ಸಾಮಂತರುಗಳ ಆನೆ ಕುದುರೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಇದನ್ನು ನಿರ್ಮಿಸಲಾಗಿತ್ತಂತೆ. ಉದ್ದವಾದ ಕಲ್ಲುಗಳಿಂದಲೇ ಕಾಲುವೆ ನಿರ್ಮಿಸಿ ನೀರನ್ನು ಕಲ್ಯಾಣಿಗಳಿಗೆ ಬೀಳುವಂತೆ ಮಾಡಿರುವ ವ್ಯವಸ್ಥೆ ಅಂದಿನ ಜನರ ಬುದ್ಧಿಚಾತುರ್ಯಕ್ಕೆ ಸಾಕ್ಷಿ... ಮಹಾನವಮಿ ದಿಬ್ಬದ ಕಡೆಗೆ .... 
 

 


 
 
Want to add a caption to this image? Click the Settings icon.

 

 

ಮಹಾನವಮಿ ದಿಬ್ಬ ಶ್ರೀಕೃಷ್ಣದೇವರಾಯ ಒರಿಸ್ಸ ರಾಜ್ಯ ಗೆದ್ದ ಸವಿನೆನಪಿಗಾಗಿ ಇದನ್ನು ಕಟ್ಟಿಸಿದನಂತೆ.  ರಾಜ ಪ್ರಾಂಗಣದಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಿಸಿರುವ  ಮೂರು ಸ್ತರದ ಈ  ದಿಬ್ಬ  ೮ ಮೀಟರು ಎತ್ತರ, ೮೦ ಅಡಿ ಉದ್ದ, ೮೦ ಅಡಿ ಅಗಲವಿದೆ. ಕಲ್ಲಿನಲ್ಲಿ ಕಟ್ಟಿರುವ  ವಿಶಾಲವಾದ ವೇದಿಕೆಯಾಗಿದ್ದು ಪೂರ್ವ, ಪಶ್ಚಿಮ ಹಾಗೂ ದಕ್ಷಿಣದಿಕ್ಕಿನಲ್ಲಿ ಪ್ರವೇಶಿಸಲು ಮೆಟ್ಟಲುಗಳ ವ್ಯವಸ್ಥೆ ಇದ್ದು . ಪ್ರತಿಯೊಂದು  ಹಂತದಲ್ಲೂ ಸುಂದರವಾಗಿ ಕೆತ್ತಿರುವ ಪೌರಾಣಿಕ ಮೂರ್ತಿಗಳನ್ನು ಕಾಣಬಹುದು  ಮಹಾನವಮಿ (ವಿಜಯದಶಮಿ) ಹಬ್ಬದ ದಿನಗಳಲ್ಲಿ ಇಲ್ಲಿಂದಲೇ  ವಿಜಯನಗರದ ಅರಸರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೆಂದು ಹೇಳಲಾಗಿದೆ . ಕೆರೆಕಲ್ಯಾಣಿ ಒಳಗೆ ಇಳಿದು ಛಾಯಾಚಿತ್ರ ತೆಗೆಯಲು ಅವಕಾಶ ಇಲ್ಲದಿರುವ ಬೇಜಾರನ್ನು ದಿಬ್ಬದ ಮೇಲೆ ಹತ್ತಿ ಕುಣಿದು ಛಾಯಾಚಿತ್ರಗಳನ್ನು ತೆಗೆದು ಕೊಂಡು ಪೊರೈಸಿಕೊಂಡೆವು  .... ಮುಂದಿನ ಪಯಣ ಕಮಲಮಹಲ್ .... 

 


 
 
Want to add a caption to this image? Click the Settings icon.

 

 

ಕಮಲಮಹಲ್

ಪ್ರವೇಶ ದರ ೪೦ರೂಗಳನ್ನು ಕೊಟ್ಟು ಪ್ರವೇಶ ಚೀಟಿಯನ್ನು ಪಡೆದು ಕೊಂಡೆವು ಇದನ್ನೇ ನಾವು ವಿಜಯವಿಠಲ ದೇವಸ್ಥಾನದಲ್ಲೂ ಬಳಸಬಹುದು    ಎತ್ತರವಾದ ಕೋಟೆಯ ಒಳಗೆ ಹೋದರೆ  ವಿಶಾಲ ಮೈದಾನವಿದೆ. ನಾಲ್ಕು ಕಡೆಯು  ಕಾವಲು ಗೋಪುರವಿದೆ.  ಅದರ ಬಲಭಾಗದಲ್ಲಿ ಸುಂದರವಾಗಿ ವಿನ್ಯಾಸಗೊಂಡಿರುವ ಹಿಂದೂ ಮುಸಲ್ಮಾನ ಎರಡೂ ಶೈಲಿಯನ್ನು ಹೋಲುವ ಕಮಲ ಮಹಲ್  ಮಂಟಪವಿದ್ದು ಕಮಲದ ಹೂವನ್ನು ಹೋಲುವ ಆಕಾರವನ್ನು ಹೊಂದಿದೆ. ಲೋಟಸ್ ಮಹಲ್ ಎಂದೂ ಕರೆಯುತ್ತಾರೆ.  ಸುಣ್ಣಗಾರೆಯಿಂದ ನಿರ್ಮಿಸಿರುವ  ಎರಡು ಅಂತಸ್ತಿನ ಈ ಮಂಟಪ ಈಗಲೂ ತನ್ನ ಸೌಂದರ್ಯವನ್ನು ಕಳೆದುಕೊಂಡಿಲ್ಲ. ಮೇಲಿನ ಅಂತಸ್ತಿಗೆ ಹೋಗಲು ಮೆಟ್ಟಲುಗಳಿದ್ದರೂ. ರಕ್ಷಣೆಯ ದ್ರಷ್ಟಿಯಿಂದ  ಪ್ರವಾಸಿಗರಿಗೆ ಮೇಲೆ ಹತ್ತಲು ಪ್ರವೇಶಾವಕಾಶವಿಲ್ಲ.      ಎಡಭಾಗದಲ್ಲಿ ಕಟ್ಟಿಗೆಯಿಂದ ನಿರ್ಮಿತವಾದ ಅರಮನೆ ಇತ್ತಂತೆ. ಅದನ್ನು ಯವನರು ಬೆಂಕಿ ಹಚ್ಚಿ ನಾಶ ಮಾಡಿದರಿಂದ  ಅದೆಲ್ಲ ಸುಟ್ಟು ಈಗ ಬರೀ ಕಲ್ಲಿನ ತಳಪಾಯ ಮಾತ್ರ ಇದೆ.  ಅರಸನ  ೧೬ ಮಂದಿ ಹೆಂಡತಿಯರ   ವಾಸಕ್ಕಾಗಿ ಈ ಅರಮನೆ ನಿರ್ಮಿಸಿದ್ದಂತೆ. ಅಲ್ಲಿನ  ಕಾವಲುಗಾರರಾಗಿ ೩೦೦ ಶಿಖಂಡಿಗಳು ನೇಮಕವಾಗಿದ್ದರಂತೆ . ಆ  ಕಾಲದ  ವಿಜಯನಗರದ ವೈಭವ ಹೇಗಿತ್ತೆಂಬುದನ್ನು ಕಲ್ಪನೆ ಮಾಡಿಕೊಂಡರೆ .... 

 


 
 
Want to add a caption to this image? Click the Settings icon.

 

 

ಅಶ್ವಶಾಲೆ ಗಜಶಾಲೆಯ ಎಡಭಾಗದಲ್ಲಿ ಅಶ್ವಗಳನ್ನು ಕಟ್ಟುತ್ತಿದ್ದ ಕಟ್ಟಡವಿದ್ದು ಅಲ್ಲಿ  ಕೆಲಸಗಾರರು ವಾಸಿಸುತಿದ್ದರಂತೆ ಆದರೆ  ಅದನ್ನೂ ಯಾರಿಗಾಗಿ ನಿರ್ಮಿಸಲಾಗಿತ್ತು ಎಂದು  ಅ ಸರಿಯಾಗಿ ಹೇಳುವವರು ಇಲ್ಲ .  

 

 


 
 
Want to add a caption to this image? Click the Settings icon.

 

 

ಗಜಶಾಲೆ  ವಿಜಯನಗರದ ಅರಸರು ತಮ್ಮ ಪಟ್ಟದಾನೆಗಳಿಗಾಗಿ ಕಲ್ಲುಗಳಿಂದ ನಿರ್ಮಿಸಿರುವ  ಸುಂದರವಾದ ಗಜಶಾಲೆ  ಈ ಕಟ್ಟಡದ ಮೇಲ್ಭಾಗ ಗೋಳಾಕಾರವಾಗಿದ್ದು, ಕಮಾನುಗಳುಳ್ಳ ಹನ್ನೊಂದು ಕೊಠಡಿಗಳಿಂದ ಕೂಡಿದ್ದು  ಮನಮೋಹಕವಾಗಿದೆ. ಕಟ್ಟಡ ಮಾತ್ರ ಇಂದಿಗೂ ಭದ್ರವಾಗಿದೆ...  ಈಗ ಅಲ್ಲಿ ಭಗ್ನಗೊಂಡ ಶಿಲ್ಪಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಇಟ್ಟಿದ್ದಾರೆ... ಶಿಲ್ಪಗಳ ಸಂಗ್ರಹಾಲಯ ಎನ್ನಬಹುದು ....

ಮುಂದಿನ ಪಯಣ... ರಾಣಿಯರ ಸ್ನಾನಗೃಹ

 

 

 


 
 
Want to add a caption to this image? Click the Settings icon.

 

ರಾಣಿಯರ ಸ್ನಾನಗೃಹ   ಇದು ಕೂಡ ಹಿಂದೂ ಹಾಗೂ ಮುಸಲ್ಮಾನ ಶೈಲಿಯಲ್ಲಿ ಕಟ್ಟಲಾಗಿದ್ದು  ಕಮಲ ಮಹಲ್ ಕಟ್ಟಡದ ಶೈಲಿಯಲ್ಲಿಯೇ ಇದೆ. ಮೇಲೆ ಉಪ್ಪರಿಗೆಯಿದ್ದು, ಕಟ್ಟಡದ ಮಧ್ಯಭಾಗದಲ್ಲಿ ೮ ಅಡಿ ಆಳದ ಈಜುಕೊಳವಿದೆ. ಈ ತೊಟ್ಟಿಗೆ ನೀರು ಬರುವಂತೆ   ಕಲ್ಲಿನಿಂದ ನಿರ್ಮಿಸಿಲಾದ  ಕಾಲುವೆಯಿದೆ. ಹಾಗೆಯೇ ಉಪಯೋಗಿಸಿದ ನೀರು ಹೊರಗೆ ಹೋಗಲು ನಾಲ್ಕು ತೂಬುಗಳನ್ನು ಮಾಡಲಾಗಿದ್ದು ಅಂದಿನ ಕಾಲದ ಸ್ವಚ್ಛತೆಗೆ ಹಿಡಿದ ಕನ್ನಡಿಯಾಗಿದೆ.     ಅದನ್ನೆಲ್ಲ ಚಕಿತತೆಯಿಂದ ನೋಡಿ   ರಾಣಿಯರು ಇಲ್ಲಿ ಮನಸೋ ನೀರಿನಲ್ಲಿ ಆಟವಾಡಿ  ಖುಷಿಪಟ್ಟಿರಬಹುದು ಎಂದು ಮನದಲ್ಲೇ ಕಲ್ಪನೆ ಮಾಡಿಕೊಳ್ಳುತ್ತಾ  ಒಂದಷ್ಟು ಶೈಲಿಯಲ್ಲಿ ನಿಂತು ಛಾಯಾಚಿತ್ರಗಳನ್ನು ತೆಗೆಸಿಕೊಂಡು ರಾಣಿಯರ ಅದೃಷ್ಟಕೆ ಹೊಟೆಕಿಚ್ಚು ಪಡುತ್ತಾ ಹೊರಬಂದರೆ ಊಟದ ಸಮಯವಾದ್ದರಿಂದ ಹೊಟ್ಟೆ ಚುರ್ ಎನ್ನುತ್ತಿತ್ತು. ಆದರೆ ಅಲ್ಲಿ ಯಾವುದೇ ಹೋಟೆಲುಗಳು ಇರಲಿಲ್ಲ...ಕೇವಲ  ಪೆಟ್ಟಿಗೆ ಅಂಗಡಿಗಳನ್ನು ಮಾತ್ರ ಕಾಣಬಹುದಾಗಿತ್ತು .. ವಿಜಯವಿಠಲನ ಕಡೆ ಹೊರೆಟೆವು 

 


 
 
Want to add a caption to this image? Click the Settings icon.

 

 

ವಿಜಯವಿಠ್ಠಲ    ವಿಜಯವಿಠ್ಠಲ ದೇವಾಲಯದ ಮುಂದೆ ಇರುವ ಸಣ್ಣ ಜೋಪಡಿಯ ಹೋಟೆಲಲ್ಲಿ ಊಟ ಮುಗಿಸಿ ವಿಠಲನ ದೇವಾಲದ ಕಡೆಗೆ ಹೊರೆಟೆವು  ಇಲ್ಲಿ  ಒಂದು ಕಿಮೀ ನಡೆಯಬೇಕು. ಇಲ್ಲವೇ ೨೦ ರೂಗಳ ಪ್ರವೇಶ ಚೀಟಿಯನ್ನು ಕೊಂಡು ಬ್ಯಾಟರಿಚಾಲಿತ ವಾಹನದಲ್ಲಿ ಹೋಗಬಹುದು.  ನಾವು   ಬ್ಯಾಟರಿ ವಾಹನದಲ್ಲಿ ಕುಳಿತು ಸಾಗಿದೆವು ಮಣ್ಣಿನ ದಾರಿಯಾದ್ದರಿಂದ  ಹೋಗುವಾಗ ಬಹಳ ಧೂಳು ಏಳುತ್ತಿತ್ತು. ಅದು ಕೂಡ ಒಂದು ರೀತಿ ಮಜವಾಗಿತ್ತು ಬಾಲ್ಯದ ನೆನಪು ತರಿಸಿತು. ಇಲ್ಲಿ  ವಾಹನವನ್ನು ಹುಡುಗಿಯರೇ ಚಲಾಯಿಸುತ್ತಿದ್ದದ್ದು ವಿಶೇಷ. ಆಶ್ಚರ್ಯದವೆಂದರೆ  ವಿಶ್ವ ಪಾರಂಪರಿಕ ತಾಣವಾದ ಈ ಸ್ಥಳಕ್ಕೆ ದೇಶ ವಿದೇಶಗಳಿಂದಲೂ ಅನೇಕ ಜನರು ಬರುತ್ತಾರೆ ಆದರೂ  ರಸ್ತೆಗೆ ಡಾಂಬರು  ಹಾಕದಿದ್ದುದು ಏಕೆ? ದುರಸ್ತಿ ಮಾಡುವುದು ನಿಷಿದ್ಧವೆ?  ತಿಳಿಯದು..?

ಕಲ್ಲಿನ ಮಂಟಪಗಳ ನಡುವೆ ಗಾಡಿ ಸಾಗಿತು ಹೋಗುವಾಗ ಸಿಗುವ ಕುದುರೆ ಮಂಟಪ ಮತ್ತು ಗೆಜ್ಜಲ ಮಂಟಪ ನೋಡಲು ತುಂಬಾ ಸೊಗಸಾಗಿದೆ.  ವಿಜಯವಿಠಲನ ದೇವಾಲಯದ ಮುರಿದ ಗೋಪುರ ಪ್ರತಿಯೊಬ್ಬ ಪ್ರವಾಸಿಗನ ಮನಸ್ಸನ್ನು ಕಲಕದೆ ಇರಲಾರದು ಆದರೂ ಅದು ಎಲ್ಲ ನೋವನ್ನು  ಮೆಟ್ಟಿ ನಮಗಾಗಿ ನಗುತ್ತಾ ನಿಂತು ಸ್ವಾಗತಿಸುತ್ತಿದೆಯೇನೋ ಎನಿಸಿತು .... ನಾವು ಕೂಡ ರಕ್ಕಸ  ದಾಳಿಕೋರರಿಗೆ ಮನದಲ್ಲೇ ನಿಂದಿಸುತ್ತಾ ಒಳ ಹೋದೆವು ....  

 

 


 
 
Want to add a caption to this image? Click the Settings icon.

 

 

ದೇವಾಲಯದೊಳಗೆ ಕಾಲ್ಲಿಟ್ಟೊಡನೆ ....     ವಿಠಲ ದೇವಾಲಯ ಪ್ರವೇಶಿಸುತ್ತಿದ್ದಂತೆ ಕಲಾ ದೇವಿಯ ಸ್ವರ್ಗಕೆ ಬಂದೆವೇನೋ ಎನಿಸಿ ಅಲ್ಲಿ ಕಂಡ ಅಮೋಘ ಕೆತ್ತನೆಗಳಿಂದ ಕೂಡಿದ ಮಂಟಪಗಳನ್ನು ಕಂಡು ಕಾಲುಗಳು ಕುಣಿದಾಡಿದವು ಮನಸ್ಸು ಅಲ್ಲಿನ ಕಲೆಯನ್ನು ಕಂಡು ಕಲಾ ಲೋಕದಲ್ಲಿ ತೇಲಾಡಿತು...    

ಇಮ್ಮಡಿ ದೇವರಾಯನ ಕಾಲದಲ್ಲಿ (ಕಿ.ಶ.೧೪೨೨-೪೬) ಕಟ್ಟಲಾದ  ದೇವಾಲಯಕ್ಕೆ ಕೃಷ್ಣದೇವರಾಯನ ಕಾಲದಲ್ಲಿ (ಕಿ.ಶ.೧೫೦೯-೧೫೨೯) ಅನೇಕ ಭಾಗಗಳನ್ನು ಸೇರಿಸಲಾಯಿತಂತೆ. ಮುಖ್ಯದೇಗುಲದ ನೈರುತ್ಯ ದಿಕ್ಕಿನ ನೂರು ಸ್ತಂಭಗಳ ಮಂಟಪ ಕಂಡೊಡನೆ ಅದರಲ್ಲಿ ಕುಣಿದು ಕುಪ್ಪಳಿಸಿದೆವು ವಿಡೀಯೊ ಮಾಡಿಕೊಂಡು ನಲಿದಾಡಿದೆವು  (ಕಿ.ಶ.೧೫೧೬) ಪೂರ್ವ ಹಾಗೂ ದಕ್ಷಿಣದ್ವಾರ ಗೋಪುರಗಳನ್ನು ಕೃಷ್ಣದೇವರಾಯ ಮತ್ತು ಅವರ ಅರಸಿಯರು ಕ್ರಿ.ಶ. ೧೫೧೩ರಲ್ಲಿ ಕಟ್ಟಿಸಿರುವುದಾಗಿ ಅಲ್ಲಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ....  

 


 
 
Want to add a caption to this image? Click the Settings icon.

 

 

ಸಪ್ತಸ್ವರ ಸಂಗೀತ ಹೊಮ್ಮಿಸುವ ಕಂಬಗಳು

ಕಲ್ಲಿನ ವೀಣೆಯ ಮೀಟಿದರೇನು ನಾದವು ಹೋಮುವುದೇ? ಹಾಡು ನೆನಪಾಗುತ್ತದೆ ... ಖಂಡಿತ ಇಲ್ಲಿ ಹೊಮುತ್ತದೆ ಎಂಬ ಉತ್ತರವೂ ಸಿಗುತ್ತದೆ. ವಿಜಯನಗರ ಕಾಲದ ಅವಿಸ್ಮರಣೀಯ ಆಕರ್ಷಣೀಯ ಕಂಬಗಳೇ ಸಪ್ತಸ್ವರ ಸಂಗೀತ ಹೊಮ್ಮಿಸುವ ಕಂಬಗಳು...... ದೇವಾಲಯದ ಬಲಭಾಗದಲ್ಲಿ ಬಹಳ ಸುಂದರವಾದ ಕಟ್ಟಡವಿದೆ. ಆ ಕಟ್ಟಡದ ಕಂಬಗಳನ್ನು ತಟ್ಟಿದರೆ ಸಪ್ತಸ್ವರ ಕೇಳುತ್ತದಂತೆ.  ಪುಸ್ತಕಗಳಲ್ಲಿ, ಚಲನ ಚಿತ್ರಗಳಲ್ಲಿ ನೋಡಿದಾಗ ನನಗೆ ಇದನ್ನು ಕಣ್ಣಾರೆ ನೋಡಬೇಕು ಕೈಯಾರೆ ನುಡಿಸಬೇಕೆಂಬ ಬಹಳ ಆಸೆಯಿತ್ತು  ಆದರೆ  ಈಗ ಪ್ರವಾಸಿಗರಿಗೆ ಆ ಕಟ್ಟಡದ ಒಳಗೆ ಪ್ರವೇಶವಿಲ್ಲ. ಪ್ರವಾಸಿಗರು ಸಂಗೀತ ಹೊರಡಿಸಲು ಕಂಬಗಳನ್ನು  ತಟ್ಟಿ  ಕೆಲವು ಕಂಬಗಳು ಶಿಥಿಲವಾಗಿ  ಬಿದ್ದುಹೋಗಿವೆ. ಆತುರ, ಕಾಳಜಿ ಇಲ್ಲದ ಸ್ವಭಾವಗಳಿಂದ ನಾವು ಎಷ್ಟೋ ಇಂಥ ಪಾರಂಪರಿಕ ತಾಣಗಳನ್ನು ಹಾಳುಗೆಡವಿ ನಾಶಮಾಡಲು ಕಾರಣಕರ್ತರಾಗಿದ್ದೇವೆ ಎಂದು ನೆನೆದು ನಮ್ಮ ಮೇಲೆ ನಮಗೆ ಬೇಜಾರಾಯಿತ್ತು. ಇದು ನಿಜಕ್ಕೂ ಬೇಸರದ ಸಂಗತಿ.  ನಾವು ಕಟ್ಟಡಕ್ಕೆ ಒಂದು ಸುತ್ತು ಬಂದು ಕೇವಲ ಕಣ್ಣಿಂದ ನೋಡಿ ತೃಪ್ತಿಪಡಬೇಕಾಯಿತು.ಇಂತಹ ಅಮೋಘ ಸಂಪತ್ತನ್ನು ಉಳ್ಳಿಸಿ ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡುವ ಜವಾಬ್ದಾರಿ ನಮ್ಮೆಲ್ಲರ  ಮೇಲಿದೆ. 

ಇಂತಹ ಕಲೆಯನ್ನು ನಮ್ಮಿಂದ  ಸೃಷ್ಟಿಸಲು ಸಾಧ್ಯವಿಲ್ಲ ಆದರೆ ಅದನ್ನು ಕಾಪಾಡೋಣ  ನಮ್ಮ ರಾಜಮಹಾರಾಜರ ನಿಸ್ವಾರ್ಥ ಸೇವೆಯನ್ನು ಗೌರವಿಸೋಣ.     

 


 
 
Want to add a caption to this image? Click the Settings icon.

 

 

 

ಕಲ್ಲಿನ ರಥ ಮರದ ರಥಗಳನ್ನು ನೋಡಿದ ನನಗೆ, ಹಂಪೆಯ ಕಲ್ಲಿನ ರಥ ಪುಸ್ತಕಗಳಲ್ಲಿ, ಚಿತ್ರಗಳಲ್ಲಿ ನೋಡಿದಾಗ ನನಗೆ ಇದನ್ನು ಕಣ್ಣಾರೆ ನೋಡಬೇಕೆಂಬ ಆಸೆಯಿತ್ತು  ಅದನ್ನು ಮನದಣಿಯೆ ನೋಡಿ ಚಿತ್ರ ಕ್ಲಿಕ್ಕಿಸಿಕೊಂಡು ಖುಷಿಪಟ್ಟೆ.  ವಿಜಯನಗರ ವಾಸ್ತುಶಿಲ್ಪದ ಅದ್ಭುತ ಕೆತ್ತನೆ ಇದು. ಸಪ್ತಸ್ವರ ಸಂಗೀತ ಹೊಮ್ಮಿಸುವ ಕಂಬಗಳ ಮಂಟಪದ ಎದುರು ಈ  ರಥವನ್ನು ನಿಲ್ಲಿಸಿದ್ದಾರೆ.  

 ದೇವಾಲಯದ ಮುಂಭಾಗದಲ್ಲಿ  ವಿಶಾಲ ಮಾರುಕಟ್ಟೆ ಇದ್ದುದ್ದಕ್ಕೆ  ಕಲ್ಲುಕಂಬಗಳ ಕುರುಹುಗಳಿವೆ.  ಮತ್ತು ಸ್ವಲ್ಪ  ದೂರದಲ್ಲಿ ದೊಡ್ಡದಾದ ಕೊಳವಿದ್ದು ನೀರಿಲ್ಲದೆ ತನ್ನ ಅವನತಿಯ ಕಥೆಯನ್ನು ಸಾರುತ್ತಾ ನಿಂತಿದೆಯೇನೋ ? ಎನಿಸುತ್ತದೆ.  ದೇವಾಲಯದ ತುಂಬೆಲ್ಲಾ ಓಡಾಡಿ  ಎಲ್ಲ ಗತವೈಭವವನ್ನು ಕಣ್ತುಂಬಿಕೊಂಡು ಅಲ್ಲಿಂದ ಹೊರಟೆವು.  ಹಂಪೆಯ ಕಾಲುಭಾಗವನ್ನಷ್ಟೆ ನೋಡಿದ ನಾವು ಹಂಪೆಯನ್ನು  ಪೂರ್ತಿ ನೋಡಲಾಗದ ಅತೃಪ್ತಿಯಿಂದಲೇ ಹಂಪೆಗೆ ವಿದಾಯ ಹೇಳಿ ಅಂತೂ ಸಂಜೆ ಆರು ಗಂಟೆಗೆ  ಹೊಸಪೇಟೆಗೆ ಬಂದೆವು. 

 

ನೀವು ನಂಬಿವಿರೂ ಇಲ್ಲವೋ  ತಿಳಿಯದು  ಅಲ್ಲಿ ಬಂದಿದ್ದ ಪ್ರತಿಯೊಬ್ಬರಿಗೂ   ಹಂಪಿಯ ಭಗ್ನಾವಶೇಷಗಳು ಗೋಚರಿಸುತ್ತಿದ್ದರೆ ನನಗೆ ಮಾತ್ರ ನನ್ನ ಶಿಕ್ಷಕರು ಪಾಠಮಾಡುವಾಗ ಶಾಲೆಯಲ್ಲಿ ಹೇಳಿದ ಮತ್ತು  ಪುಸ್ತಕಗಳಲ್ಲಿ ಓದಿದ   ಹಳೆಯ ವೈಭವದಿಂದ ಕೂಡಿದ  ಮುತ್ತುರತ್ನಗಳನ್ನು ರಾಶಿ ಹಾಕಿ ಮಾರುತ್ತಿದ್ದ ಚಿತ್ರಗಳು ಕಣ್ಣಿನ ಮುಂದೆ  ಸಾಲು ಸಾಲಾಗಿ ಹಾದುಹೋಗುತ್ತಿತ್ತು .ಎಲ್ಲಿಯೂ  ನನಗೆ ಪಾಳು ಬಿದ್ದ ಕಟ್ಟಡಗಳಾಗಲಿ ಭಗ್ನಗೊಂಡ ಮೂರ್ತಿಗಳಾಗಲಿ ಗೋಚರಿಸದೆ ಇದನ್ನು ಕಟಿಸಿರುವ ಕಟ್ಟಿರುವ ಮಹಾನುಭಾವರ ತ್ಯಾಗವೇ ಮನದಲ್ಲಿ ಮನೆ ಮಾಡಿತ್ತು. 

 

ಹಂಪೆಗೆ ದೇಶಿಯರ ಭೇಟಿಗಿಂತ ವಿದೇಶಿಯರ ಭೇಟಿಯೇ ಹೆಚ್ಚು... ನಮ್ಮ ನಾಡಿನ ವೈಭವದ ಬಗ್ಗೆ ಅವರಿಗಿರುವಷ್ಟು ಅರಿವು ನಮಗಿಲ್ಲವೇನೂ ? ನಮ್ಮ ನಾಡಿನ ಕಲೆಯನ್ನು  ಸವಿಯುವ ಜ್ಞಾನ ಅವರಿಗಿರುವಷ್ಷ್ಟು ನಮ್ಮಗಿಲ್ಲವೇನೋ ? ಪ್ರವಾಸೋದ್ಯಮದ ಬಗ್ಗೆ ಅವರನ್ನು ನೋಡಿ ಕಲಿಯಬೇಕಾಗಿದೆ ಅವರಲ್ಲಿ ಒಂದು ಸಣ್ಣ ಕಲ್ಲು ಸಿಕ್ಕರೂ ಅದನ್ನು ಸಂರಕ್ಷಿಸಿ ಅದಕ್ಕೆ ಸಾವಿರಾರು ಕಥೆ ಕಟ್ಟಿ ಜನರನ್ನು ನಂಬಿಸಿ ಉತ್ತಮ ಪ್ರವಾಸಿ ತಾಣವಾಗಿ ಮಾಡುತ್ತಾರೆ. ಆದರೆ ನಾವು ?