ಕನ್ನಡ ಸಾಹಿತ್ಯದ ಆಲದ ಮರ 'ಆವರಣ'

ಕನ್ನಡ ಸಾಹಿತ್ಯದ ಆಲದ ಮರ 'ಆವರಣ'

ಕನ್ನಡ ಸಾಹಿತ್ಯವೆಂಬುದು ಒಂದು ಸಾಗರವಿದ್ದಾಗೆ. ಪುಸ್ತಕ, ಚಿಂತಕ, ವಿಮರ್ಷಕ, ಲೇಖಕರ ರಾಶಿಯೆ ಇಲ್ಲಿ ಅಡಗಿದೆ. ಈ ಸಾಗರದಲ್ಲಿ ಈಗಾಗಲೇ 8 ರತ್ನಗಳು ದೊರಕಿವೆ, ಇನ್ನೂ ಸಾವಿರಾರು ರತ್ನಗಳು ಅವಿತುಕೊಂಡಿದೆ. ಆದರೆ ಇನ್ನೊಂದು ಮಾತ್ರ ರತ್ನಕ್ಕೂ ಮೀರಿ ಮಿಣುಗುತ್ತಿದೆ. ಅವರೇ ಡಾ.ಎಸ್,ಎಲ್, ಭೈರಪ್ಪರವರು.
ತನ್ನದೇ ಆದ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿರುವ ಇವರು ದೊಡ್ಡ ಸಂಖ್ಯೆಯ ಓದುಗರನ್ನು ಕನ್ನಡಕ್ಕೆ ಕರೆತಂದ ಖ್ಯಾತಿಗೆ ಪಾತ್ರರು.

ಅದಾಗಲೇ ಪರ್ವ, ಭಿತ್ತಿ, ಮಂದ್ರ, ಕವಲು, ವಂಶವೃಕ್ಷ, ಇನ್ನೂ ಮುಂತಾದ ಪುಸ್ತಕಗಳಿಂದ ಎಲ್ಲರ ಮನ ಸೇರಿದ್ದ ಭೈರಪ್ಪನವರ ಪುಸ್ತಕಗಳಿಗಿಂತಲು ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸಿದ್ದು 'ಆವರಣ' ಪುಸ್ತಕ.

ರಿಲೀಸ್ ಆಗುವ ಮುಂಚೆಯೆ 3 ಸಾವಿರ ಪ್ರತಿಗಳು ಬುಕ್ ಆಗಿತ್ತು. 2007 ರಲ್ಲಿ ಲೋಕಾರ್ಪಣೆ ಮಾಡಿದ ಈ ಪುಸ್ತಕ, ಫೆಬ್ರವರಿನಲ್ಲಿ ಕನ್ನಡಿಗರಿಗೆ ಮತ್ತೊಂದು ಸಂಕ್ರಾಂತಿ ಹಬ್ಬವನುಂಟುಮಾಡಿದರು.

ಮೊದಲನೆ ದಿನ ಮುದ್ರಣಗೊಂಡ ಎಲ್ಲಾ ಪ್ರತಿಗಳು ಮಾರಾಟವಾಗಿ, ಎರಡನೇ ದಿನವೇ ಎರಡನೇ ಮುದ್ರಣವೂ ಸೇಲ್ ಆಗಿ ಹೊಸ ಇತಿಹಾಸವನ್ನೆ ಸೃಷ್ಟಿಸಿತು.
ಇದುವರೆಗೂ 30ಕ್ಕೂ ಹೆಚ್ಚು ಮರುಮುದ್ರಣಗೊಂಡು ಭಾರತದ ಸಾಹಿತ್ಯ ಲೋಕದಲ್ಲಿ ಮೈಲುಗಲ್ಲಾಗಿದೆ.

ಇಷ್ಟಕ್ಕೆ ನಿಲ್ಲದೆ, ಗುಜರಾತಿ ಭಾಷೆಗೆ ಅನುವಾದಗೊಂಡ ಈ ಪುಸ್ತಕ ಅಲ್ಲೂ ಅಂತದೇ ಅಲೆ ಸೃಷ್ಟಿಸಿತು.
ನಂತರ ಹಿಂದಿ, ಮರಾಠಿ, ತಮಿಳು, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯಲ್ಲೂ ಆವರಣ ಅನುವಾದಗೊಂಡಿದೆ. ಅಷ್ಟಕ್ಕೂ ಈ ಪುಸ್ತಕದಲ್ಲೆನಿದೆ ಪ್ರಶ್ನೆಗೆ ಉತ್ತರ ಸತ್ಯವಿದೆ. ಇದಕ್ಕಿಂತ ಜಾಸ್ತಿ ತಿಳಿಯಬೇಕೆಂದರೆ ನೀವೂ ಕೂಡ ಈ ಪುಸ್ತಕ ಓದಲೇ ಬೇಕು. ತೇಜಸ್ವಿರವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತ ಖುಷಿಪಡುತ್ತಿದ್ದ ನನಗೆ, ಎಸ್, ಎಲ್, ಭೈರಪ್ಪರವರ ಪುಸ್ತಕಗಳು ಮನಸ್ಸಿಗೆ ತುಂಬ ಅತ್ತಿರವಾದವು.
ಮತ್ತೇಕೆ ತಡ ಓದಲು ಶುರು ಮಾಡೋಣವೆ?

- ಮುರಳಿ

Comments