ಕನ್ನಡ ಸಿರಿ
ಕವನ
1. ಮತ್ತೂರ ಭಾರತ, ಕಣ್ಣನಾ ನುಡಿಯಗ್ಗ
ಬನ್ನಂಜೆ ರಾಮಾಯಣ, ಭಟ್ಟರಾ ಕಗ್ಗ
ಕನ್ನಡ ಸಾರಸ್ವತಲೋಕದಾ ಜನಕೆ ಸಗ್ಗÎ
ಈ ನಾಕದಲಿ ನಲಿದುಬೆಳೆ ನೀ -ನನ ಕಂದ||
ಇಗೋ ಕನ್ನಡದ ಧೀಮಂತ ನಡೋಜ ಜಿ.ವಿ
ಕರುನಾಳು ಬಾ ಬೆಳಕೆಂದ ಗುರುರಾಜ ಕರ್ಜಗಿ
ಮೈಸೂರು ಮಲ್ಲಗೆಯ ಕಂಪಿನ ನರಸಿಂಹ ಸ್ವಾಮಿ
ಕನ್ನಡನುಡಿಯ ಶ್ರೀಮಂತಗೊಳಿಸಿಹರು-ನನ ಕಂದ||
ಹರಿಕಥೆ, ಶಿವಕಥೆಯ ಕೇಳಿ ಗಮಕವನಾಲಿಸಿ
ದೊಡ್ಡಾಟ, ಸಣ್ಣಾಟ, ಬಯಲಾಟಗಳ ನೋಡಿ
ಸಂತೆ, ಜಾತ್ರೆ, ರಥೋತ್ಸವಗಳಲಿ ಭಾಗಿಯಾಗಿ
ಸುಸಂಸ್ಕೃತರಾದರು ನಮ್ಮವರು - ನನಕಂದ||
1.