ಕನ್ನವಿಕ್ಕುವವರು...

ಕನ್ನವಿಕ್ಕುವವರು...

ಕವನ

ನಾನೊಂದು ಖಾತೆ ತೆರೆದೆನು

ಅದರಲ್ಲಿ ಒಂದಷ್ಟು ಬರಹಗಳನಿಟ್ಟೆನು

ಆಗಾಗ ಓದಿನೋಡಿ ಸಂತೋಷಪಟ್ಟೆನು

ನನಗೆ ನಾನೇ ಹಿರಿಹಿರಿ ಹಿಗ್ಗಿದೆನು||

 

ಆಕಸ್ಮಿಕವಾಗಿ ಕಣ್ಣಿಗೆ ಬಿತ್ತೊಂದು ದಿನ

ನನ್ನ ಖಾತೆಗೆ ಯಾರೋ ಕನ್ನವಿಕ್ಕಿಹರು

ಮನಕೆ ಬೇಸರ ತಾಳಲಾರದ ವೇದನೆ

ಮೆಚ್ಚುಗೆಯ ಸುರಿಮಳೆ ಕದ್ದವಗೆ||

 

ಸೊತ್ತು ನನ್ನದು ಗತ್ತು ಅವರದು

ಕಷ್ಟ ನನ್ನದು ಅಹಂ ಅವರದು

ಹುಡುಕಾಟ ನನ್ನದು ವೇದಿಕೆ ಅವರದು

ಭಾವಾರ್ಥ ನನ್ನದು, ಪ್ರಶಂಸೆಗೆ  ಉಬ್ಬಿದ ಒಡಲವರದು||

 

ಪರರ ಖಾತೆಗೆ ಕನ್ನವಿಕ್ಕುವರಿವರು

ಯಾವುದೇ ಮರ್ಯಾದೆ ಇಲ್ಲದವರು

ಗುಣವನ್ನು ಹರಾಜಿಗೆ ಹಾಕುವರಿವರು

ಮಾನವಂತರ ಮನಕೆ ಮುಳ್ಳಲ್ಲಿ ಗೀರುವರಿವರು||

 

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್