ಕಪಟ ದ್ರೋಹಿ ಚೀನಾ

ಕಪಟ ದ್ರೋಹಿ ಚೀನಾ

ಭಾರತದ ಭೂಮಿಯನ್ನು ಶತ್ರು ರಾಷ್ಟ್ರ  ಎರಡು - ಮೂರು ಕಡೆಯಿಂದ ಆಕ್ರಮಿಸುತ್ತ ಇಡೀ ಈಶಾನ್ಯ ಪ್ರದೇಶವು ವಶಪಡಿಸಿಕೊಳ್ಳಬೇಕೆಂಬ ಹುನ್ನಾರದಲ್ಲಿದ್ದೆ. ಹೀಗಾಗಿ ಪದೇ ಪದೇ ತಂಟೆ ತೆಗೆಯುತ್ತಿದ್ದಾರೆ. ಹೀಗೆ, ಮುಂದೊಂದು ದಿನ ಒಂದೊಂದಾಗಿ ಭೌಗೋಳಿಕವಾಗಿ ಮತ್ತು ಆರ್ಥಿಕವಾಗಿ ಹಿಡಿತ ಸಾಧಿಸಿ ಆಕ್ರಮಿಸುವ ಹುನ್ನಾರ ನಡೆಸುತ್ತಿರುವ ಕಪಟ ದ್ರೋಹಿ ಚೀನಾ.ಚೀನಾಗೆ ಸರಿಯಾದ ಪಾಠ ಕಲಿಸದೇ ಹೋದರೆ ಮುಂದೆ ಬರುವ ಗಂಡಾಂತರಗಳಿಗೆ ನಾವೆಲ್ಲರೂ ಕಾರಣೀಭೂತರಾಗುತ್ತೇವೆ ಜೊತೆಗೆ ಬರುವ ದಿನಗಳು ಕಷ್ಟಕರವಾಗಬಹುದು ಎನ್ನುವುದಂತು ಅಲ್ಲಗಳೆಯುವಂತಿಲ್ಲ. ಹಾಗಾಗಿ ಸದ್ಯ ನಮ್ಮ ಜಾಗದಲ್ಲಿ, ನಮ್ಮ ರಸ್ತೆಗಳನ್ನು ಅಭಿವೃದ್ಧಿಮಾಡಿ ಲಡಾಖ್ ಪ್ರಾಂತ್ಯವನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಮುಂದಾದಾಗ ಅಭಿವೃದ್ಧಿ ವಿರೋಧಿ ಸ್ವಾರ್ಥ ಕುತಂತ್ರಿ ಕಪಟಿ ಚೀನಾ ದೇಶ ತನ್ನ ಅಂದರೆ ಅಲ್ಲಿನ ಸೈನಿಕರಿಗೆ ಕುಮ್ಮಕ್ಕು ಕೊಟ್ಟು ಆ ಭಾಗದಲ್ಲಿ ನಡೆಯುತ್ತಿರುವ ರಸ್ತೆ ಜೊತೆಗೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡಬಾರದೆಂದು ಧಮಕಿ, ಒತ್ತಡ ಹಾಕಿ, ಹಾಕಿಸಿದ ಪರಿಣಾಮ ಅದನ್ನು ವಿರೋಧಿಸಿದ ಭಾರತ ನಮ್ಮ ಜಾಗದಲ್ಲಿ ನಾವು ರಸ್ತೆ ಮಾಡುವುದಕ್ಕೆ ಬೇರಯವರ ಅನುಮತಿ ಏಕೇ ಬೇಕು ಎಂದು ಖಡಕ್ಕಾಗಿ ಕೇಳಿದ ಕಾರಣ ಮತ್ತು ನಮ್ಮ ಜಾಗದಲ್ಲಿ ನಾವು ಅಭಿವೃದ್ಧಿ ಮಾಡಬೇಕಾದರೆ ಬೇರೆ ದೇಶಗಳ ಅನುಮತಿ ಖಂಡಿತಾ ನಮಗೆ ಅವಶ್ಯಕತೆ ಇಲ್ಲ ಹಾಗೂ ಬೇಕಾಗಿಲ್ಲ ಎಂದು ನೇರವಾಗಿ ಹೇಳಿದ ಕಾರಣ ಚೀನಾ ಕಂಗಾಲಾಗಿ, ಕಾಲು ಕೆರೆದುಕೊಂಡು ಕಿತಾಪತಿ ಮಾಡುತ್ತಿದೆ 

ಇದಲ್ಲದೆ ಮಾತುಕತೆಯ ನೆಪದಲ್ಲಿ ಭಾರತದ ಬೆನ್ನಿಗೆ ಸದಾ ಚೂರಿ ಹಾಕುತ್ತೀರುವ ದ್ರೋಹಿ ಚೀನಾ ಮತ್ತೇ ತನ್ನ ಉದ್ದಟತನದ ಹೀನ ಕಾರ್ಯ ಪ್ರಾರಂಭಿಸಿದೆ. ಇಡೀ ಜಗತ್ತಿಗೆ ಕೊರೊನಾ ಹರಡಿ ಅದರಂತೆ ನಮ್ಮ ದೇಶಕ್ಕೂ ಹರಡಿಸಿ ಸಾವಿರಾರು ಜನರ ಜೀವ ಹಾನಿ, ಆರ್ಥಿಕತೆ ನಷ್ಟ ಮಾಡಿರುವ ಚೀನಾ ಈಗ ನಮ್ಮ ದೇಶದ ಸೈನಿಕ ಜೊತೆಗೆ ಕಾಲು ಕೆದರಿ ಜಗಳಕ್ಕೆ ಬಂದು ಅನ್ಯಾಯ  ಮಾಡುತ್ತಿದೆ.ಹಾಗಾಗಿ ಈಗ ನಮ್ಮ ದೇಶದ ಸೈನಿಕರ ಸಾವು ನೋಡಿದರೆ ಚೀನಾ ದೇಶದ ಮೇಲೆ ನಮಗೆಲ್ಲರಿಗೂ ಕೋಪಾ ಏರಿ ಬರುತ್ತದೆ ಎನ್ನವದಂತು ಸುಳ್ಳಲ್ಲ. ನಮ್ಮಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಹೋಗುತ್ತವೆ. ಆದರೆ, ಶಾಶ್ವತವಾಗಿ ಇರುವುದು ದೇಶ ಮತ್ತು ಸೈನ್ಯ,ಭೂಮಿ ಎನ್ನುವುದು ನಾವೆಲ್ಲರೂ ಮರೆಯುವಂತಿಲ್ಲ.ಇಂದಿನ ನಮ್ಮ‌ ಸೈನಿಕರ ಸಾವಿಗೆ ನಾವೆಲ್ಲಾ ಪರೋಕ್ಷವಾಗಿ ಕಾರಣವಾಗಿಬಿಟ್ಟೆವಾ ಎಂಬ ನೋವು ಕಾಡುತ್ತಿದೆ.ಅತಿಯಾದ ಚೈನಾದ ವಸ್ತುಗಳ ಮೇಲಿನ ನಮ್ಮ ಅವಲಂಬನೆ ಚೈನಾವನ್ನು ದೈತ್ಯ ರಾಷ್ಟ್ರವನ್ನಾಗಿಸಿದೆ. ನಮ್ಮ ಹಣವನ್ನು ಚೈನಾಗೆ ನೀಡಿ  ಅವರಿಂದಲೇ ನಮ್ಮ ಸೈನಿಕರನ್ನು ಹತ್ಯೆ ಮಾಡಿಸುತ್ತಿದ್ದೆವೆಂಬ ಭಾವನೆ ನಮ್ಮಲ್ಲಿ ಮೂಡುತ್ತಿದೆ ಅಲ್ಲವೇ ? 

ಆದ್ದರಿಂದ ಸದ್ಯ ಚಿಂತನೆ ಮಾಡಬೇಕಾದ ಸಂಬಂಧ, ಸನ್ನಿವೇಶ ಎದುರಾಗಿದೆ ಜೊತೆಗೆ ಅನಿವಾರ್ಯತೆ ಸಹ ಇದೆ ? ಹಾಗಾಗಿ ನಾವೆಲ್ಲರೂ ಯಾವುದೇ ರಾಜಕೀಯ ಪಕ್ಷದ ಬೆಂಬಲಿಗರಾಗಿದ್ದರೂ, ದೇಶ ಮತ್ತು ಸೈನ್ಯದ ವಿಷಯದಲ್ಲಿ ಒಂದಾಗಿದ್ದರೆ ಯಾವ ಶತ್ರುವೂ ನಮ್ಮನ್ನು ಏನೂ ಮಾಡಲಾಗದು ಎನ್ನುವುದು ನಾವೆಲ್ಲರೂ ಮನಗಂಡು ದೇಶದ ಹಿತವನ್ನು ಬಯಸುವ ಮತ್ತು ಕಾಪಾಡುವ ದಿಸೆಯಲ್ಲಿ ಯೋಚನೆ ಮಾಡಬೇಕಾಗಿದೆ. ಸ್ವಾರ್ಥಹೀನ ರಾಜಕೀಯ ಹೇಳಿಕೆಗಳನ್ನು ನೀಡುವುದು ಬಿಟ್ಟು, ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಮಾತುಗಳು ದೇಶದ ಎಲ್ಲಾ ಪಕ್ಷಗಳ ನಾಯಕರುಗಳಿಂದ ಹಿಡಿದು ಸರ್ವ ಬುದ್ಧಿ ಜೀವಿಗಳಿಂದಲೂ ಬರಲೆಂದು ಆಶಿಸುತ್ತೇವೆ.ಏಕೆಂದರೆ ಸೈನಿಕರಿಗೆ ಧೈರ್ಯ ತುಂಬುವ ಹೇಳಿಕೆ ಹಾಗೂ ನಮ್ಮ ಒಗ್ಗಟ್ಟು ವೀರ ಯೋಧರಿಗೆಲ್ಲಾ ಸಂಜೀವಿನಿಯಂತೆ ಕೆಲಸ ಮಾಡುತ್ತದೆ ಜೊತೆಗೆ ಶತ್ರು ದೇಶಗಳಿಗೆ ನಡುಕು ಹುಟ್ಟಿಸುತ್ತದೆ.

ಹೀಗಾಗಿ ವೀರ ಯೋಧರ ಬಲಿದಾನವನ್ನು ನಾವೆಲ್ಲರೂ ವ್ಯರ್ಥವಾಗಲು ಬಿಡುವುದಿಲ್ಲ, ಎಂಬ ಪ್ರತಿಜ್ಞೆಯನ್ನು  ಮಾಡುವ ಮೂಲಕ ನಮ್ಮ ಕೈಯಲ್ಲಿ ಆಗುವ ಚೀನಾ ವಸ್ತುಗಳ ಬಹಿಷ್ಕಾರ ಕೆಲಸವನ್ನು ಖಂಡಿತಾವಾಗಿಯೂ ಮಾಡುವುದಂತು ಅವಶ್ಯಕತೆ ಇದ್ದೆ ಇದೆ.ಚೀನಾ ದೇಶದ ಸೈನಿಕರಿಗೆ ಆರ್ಥಿಕ ಶಕ್ತಿ ಮಾತ್ರ ನಮ್ಮ ದೇಶದಿಂದ ಮಾತ್ರ ಹರಿದು ಹೋಗುತ್ತದೆ ಎನ್ನುವುದು ನಾವ್ಯಾರು ಮರೆಯಬಾರದು. ನಾವು ಬಳಕೆ ಮಾಡುವ ಚೀನಾ ದೇಶದ ಹಾರ್ಡವೇರ್, ಸಾಫ್ಟವೇರಗಳ (ಆ್ಯಪ್‌ಗಳ) ಮೂಲಕ ಅವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ಅದನ್ನೇ ಮರಳಿ ಅವರು ನಮ್ಮ ದೇಶದ ಸೈನಿಕರ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ಕೇವಲ ಟಿಕ್‌ಟಾಕ್ ಒಂದರಿಂದಲೇ ನಮ್ಮ ದೇಶದಿಂದ ಚೀನಾ ದೇಶಕ್ಕೆ ಪ್ರತಿದಿನ  ಸಾವಿರ ಕೋಟಿ ಆದಾಯ ಹೋಗುತ್ತದೆ ಎಂದರೆ ಉಳಿದಂತೆ ಎಲ್ಲಾ ಆ್ಯಪ್‌ಗಳ ಹಾಗೂ ವಸ್ತುಗಳ ಬಗ್ಗೆ ವಿಚಾರ ಮಾಡಿ. ಚೀನಾ ದೇಶಕ್ಕೆ ದುಡಿದು ಹಾಕುತ್ತಿರುವುದು ನಾವೇ ಅಂತ ನಮಗೆ ನಾಚೀಕೆ ಆಗಬೇಕು. ನಾವು ಚೀನಾ ದೇಶದ ಆ್ಯಪ್‌ಗಳನ್ನು ಬಳಕೆ ಮಾಡಿ ನರ್ತಿಸುವ, ಮಜಾ ಮಾಡುವ ಪ್ರತಿಯೊಂದು ಪೈಸೆಯು ನಮ್ಮ ದೇಶದ ಸೈನಿಕರ ಎದೆಯೊಳಗೆ ಹೋಗುವ ಬುಲ್ಲೆಟ್‌ ಆಗಿದೆ. ಚೀನಾ ದೇಶದ ಸೈನಿಕರು ನಮ್ಮ ದೇಶದ ಸೈನಿಕರ ಮೇಲೆ ಮಾಡುವ ಒಂದೊಂದು ಆಕ್ರಮಣ, ಘರ್ಷಣೆಯ ಬಲವಾಗಿದೆ. ದಯವಿಟ್ಟು ಇನ್ನಾದರು ಎಚ್ಚೆತ್ತುಕೊಳ್ಳಿ,ಎಚ್ಚೆತ್ತು ಕೊಳ್ಳದಿದ್ದರೆ ಖಂಡಿತಾ ಉಳಿಗಾಲವಿಲ್ಲ ಎನ್ನುವುದು ಮರಿಯಬೇಡಿ.ಸದ್ಯ ಹಾರ್ಡವೇರ್ ಬದಲಾವಣೆ ಆಗದಿದ್ದರು ಪರವಾಗಿಲ್ಲ ಸಾಪ್ಟವೇರ್ (ಆ್ಯಪ್‌ಗಳನ್ನಾದರು) ಅನ್ನಾದರು ಬಹಿಷ್ಕರಿಸಿ. ಚೀನಾ ದೇಶಕ್ಕೆ ಆರ್ಥಿಕ ಹಿನ್ನಡೆ ಮಾಡೋಣ. ಅದಕ್ಕಾಗಿ ಚೀನಾ ದೇಶದ ಆ್ಯಪ್‌ಗಳನ್ನು ತೆಗೆದು ಹಾಕುವ ಆಂದೋಲನಕ್ಕೆ ಪ್ರೇರಣೆಯಾಗೋಣ. ಗಡಿಯಲ್ಲಿ ಸೈನಿಕರು ದೈಹಿಕವಾಗಿ ಹೋರಾಡಿದರೆ. ನಾವು ಇಲ್ಲಿಂದಲೇ ಆರ್ಥಿಕ ಹಿನ್ನಡೆ ಮಾಡುವ ಮೂಲಕ ಹೋರಾಡೋಣ. 

ಕೊನೆಯ ಮಾತು : ನೆನಪಿಡಿ ದೇಶ ಮೊದಲು ಎಂದು ಹುಲಿಯಂತೆ ಹೋರಾಡಿದ ಆ ಇಪ್ಪತ್ತು ಸೈನಿಕರು ನಮ್ಮೊಳಗಿನ ಅಣ್ಣ ತಮ್ಮಂದಿರು. ಅವರ ಪ್ರಾಣಕ್ಕೆ ನಾವು ಬೆಂಬಲವಾಗಿ ನಿಲ್ಲಲೇ ಬೇಕು. ಚೀನಾವನ್ನು ಎಲ್ಲ ರೀತಿಯಿಂದ  ಬಹಿಷ್ಕರಿಸುವ ಕಾರ್ಯ ಶೀಘ್ರವಾಗಿ ಆಗಬೇಕಾಗಿದೆ. ಚೀನಾದ ಹೆಡೆಮುರಿ ಕಟ್ಟಲು ನಾವು ಸೈನಿಕರಾಗಿಯೇ ಇರಬೇಕೆಂದಲ್ಲ. ಚೈನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕವೂ ನಾವೂ ಚೀನಾಗೆ ತಕ್ಕ ಪಾಠ ಕಲಿಸಬಹುದು‌‌.ಇದು ಬರೀ ಕೊಳ್ಳುವವರಿಗೆ ಮಾತ್ರ ಅನ್ವಯಿಸುವಿದಿಲ್ಲ, ಲಾಭದಾಸೆಗೆ ಚೀನಾದ ವಸ್ತುಗಳನ್ನು ಮಾರುವ ವ್ಯಾಪಾರಿಗಳಿಗೂ ಕೂಡ ಇದು ಅನ್ವಯಿಸುತ್ತದೆ. ದಯವಿಟ್ಟು ಈಗಲಾದಲೂ ನಾವು ಬದಲಾಗುವ ಮೂಲಕ ದೇಶದ ಸೌರ್ವಭೌಮತ್ವವನ್ನು ಸಂರಕ್ಷಣೆ ಮಾಡೋಣ. ನಮ್ಮ ಸೈನಿಕರ ವೀರ ಮರಣಕ್ಕೆ ನ್ಯಾಯ ಸಿಗಲಿ.

-ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ.

ಚಿತ್ರ ಕೃಪೆ: ಇಂಟರ್ನೆಟ್ ತಾಣ