ಕಪ್ಪು ಆಫ್ರಿಕನ್ ಅಮೇರಿಕನ್, ಮತ್ತೊಮ್ಮೆ ಶ್ವೇತಭವನಕ್ಕೆ !

ಕಪ್ಪು ಆಫ್ರಿಕನ್ ಅಮೇರಿಕನ್, ಮತ್ತೊಮ್ಮೆ ಶ್ವೇತಭವನಕ್ಕೆ !

 

ಅಮೆರಿಕ ಅಧ್ಯಕ್ಷರಾಗಿ ಪುನಾರಾಯ್ಕೆಗೊಂಡಿರುವ ಬರಾಕ್ ಒಬಾಮಾ ರವರಿಗೆ  ಭಾರತೀಯರೆಲ್ಲರ  ಮತ್ತು 'ಸಂಪದ ತಂಡ'ದ ಗೆಳೆಯರ ಪರವಾಗಿ ಶುಭಹಾರೈಕೆಗಳು.
ಅವರು  ರಿಪಬ್ಲಿಕ್ ಅಭ್ಯರ್ಥಿ ಮಿಟ್ ರೋಮ್ನಿ ವಿರುದ್ಧ ೩೦೩ ಮತ ಗಳಿಸುವ ಮೂಲಕ,  ಐತಿಹಾಸಿಕ ಜಯ ದಾಖಲಿಸಿದರು. ೨ ನೆಯ ವಿಶ್ವಯುದ್ಧದ ನಂತರ, ಪುನಃ ಅಮೇರಿಕನ್ ಅಧ್ಯಕ್ಷರಾಗಿ ೪ ವರ್ಷಗಳ ಕಾಲಕ್ಕೆ ಆರಿಸಲ್ಪಟ್ಟವರಲ್ಲಿ ಒಬಾಮ ಎರಡನೆಯವರು. ಈಗ  ಬರಾಕ್ ಒಬಾಮಾ ಜಗತ್ತಿನ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಅವರ ಪ್ರಭಾವ ಅಮೇರಿಕಾದ ಕೊಲೆರೆಡೋ, ಇಒವ, ಒಹೈ, ನ್ಯೂ ಹ್ಯಾಮ್ಫಶೈರ್, ವಿರ್ಜಿನಿಯ, ಹಾಗು ಫ್ಲಾರಿಡಾ ರಾಜ್ಯಗಳಲ್ಲೂ ಪಸರಿಸಿತ್ತು. ಇಲ್ಲಿ ಅವರು ಸದಾ ಮುಂದಿದ್ದರು.   ಟ್ವಿಟ್ಟರ್ ಸೈಟ್ ನಲ್ಲಿ ಅವರು ಗೆಲ್ಲುವ ವಿಚಾರ ಗೊತ್ತಾದ ಕೂಡಲೇ ೬ ಲಕ್ಷ ಹಿತಚಿಂತಕರು, ಮತ್ತು ಅವರ ಪ್ರಿಯರು ತಮ್ಮ ಅಭಿನಂದನೆಗಳನ್ನು  ಸಲ್ಲಿಸಿದರು.
 
ಆಫ್ರಿಕನ್ ಅಮೇರಿಕನ್ ಕಪ್ಪು ಜನಾಂಗಕ್ಕೆ ಸೇರಿದ ಬರಾಕ್ ಒಬಾಮರವರು ಶ್ವೇತಭವನಕ್ಕೆ ಎರಡನೇ ಬಾರಿಗೆ ಪ್ರವೇಶಿಸುತ್ತಿರುವುದು ಅಭೂತಪೂರ್ವ ಸಾಧನೆಯಾಗಿದೆ. 44ನೇ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ, ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳ ವಿವರಗಳು ಹೀಗಿವೆ :
 
1. ಬರಾಕ್ ಒಬಾಮಾ ಆಗಸ್ಟ್ 4, 1961ರಂದು ಹಾವಾಯಿ ದ್ವೀಪ  ಹೊನಲುಲುನಲ್ಲಿ ಜನಿಸಿದರು.
 
2. ರಾಜಕೀಯ ರಂಗ ಪ್ರವೇಶಕ್ಕೂ ಮುನ್ನ ಒಬಾಮಾ ಪ್ರಾಧ್ಯಾಪಕ,  ಹಾಗೂ ನಾಗರೀಕ ಹಕ್ಕುಗಳ ಪರ ವಕೀಲರಾಗಿದ್ದರು.
 
3. ಏಷ್ಯಾದ ಜೊತೆ ಒಬಾಮಾ ಗಟ್ಟಿ ಸಂಬಂಧ ಹೊಂದಿದ್ದಾರೆ.
 
ಚಿಕ್ಕಂದಿನಲ್ಲಿ ಒಬಾಮಾ ಕೆಲ ವರ್ಷಗಳ ಕಾಲ ಅಮ್ಮ ಆನ್ ಡಂಹ್ಯಾಮ್ ಹಾಗೂ ಮಲತಂದೆ ಲೊಲೊ ಸೊಟೊರೊ ಜೊತೆ ಇಂಡೋನೇಶಿಯಾದಲ್ಲಿದ್ದರು.
 
4. ಸತತ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ,  ಆಯ್ಕೆಯಾದ ಮೊದಲ ಕಪ್ಪು ಆಫ್ರಿಕನ್ ವರ್ಗದ  ಮುಖಂಡ, ಎಂಬ ಕೀರ್ತಿ ಒಬಾಮಾಗೆ ಸಲ್ಲುತ್ತದೆ.
 
5. ಜಾರ್ಜ್ ಡಬ್ಲ್ಯೂ ಬುಶ್ ಜೂನಿಯರ್ (2001-2009) ಹಾಗೂ ಬಿಲ್ ಕ್ಲಿಂಟನ್ (1993-2001) ನಂತರ ಒಬಾಮಾ ಅವರು ಪುನಾರಾಯ್ಕೆಯಾದ ಸಾಧನೆ ಮಾಡಿದ್ದಾರೆ.
 
6. ಚಿಕ್ಕಂದಿನಲ್ಲಿ ಅವರು  'ಬಾರಿ'(barry) ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಿದ್ದರು.
 
7. ಒಬಾಮಾ ಅವರು ಇಂಗ್ಲೀಷ್ ಅಲ್ಲದೆ  ಇಂಡೋನೇಶಿಷನ್ ಕೂಡಾ ಸುಲಭವಾಗಿ ಮಾತನಾಡಬಲ್ಲರು.
 
8. 1989 ಮಿಚೆಲ್ ಜೊತೆ ಡೇಟಿಂಗ್ ಮಾಡಲಾರಂಭಿಸಿದ ಒಬಾಮಾ, 1991ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅಕ್ಟೋಬರ್ 3, 1992 ರಂದು ಇಬ್ಬರ ವಿವಾಹವಾಯಿತು.  ದಂಪತಿಗೆ ಮೊದಲ ಪುತ್ರಿ ಮಲಿಯಾ ಆನ್ 1988 ರಲ್ಲಿ, ಹಾಗೂ ಎರಡನೇ ಪುತ್ರಿ ನಟಾಶಾ 2001ರಲ್ಲಿ ಜನಸಿದರು.
 
9. ಬರಾಕ್ ಒಬಾಮಾ ತಮ್ಮ ಯುವಾವಸ್ಥೆಯಲ್ಲಿ   'ಚೇನ್ ಸ್ಮೋಕರ್' ಆಗಿದ್ದರು. ಹತ್ತು ಹಲವು ಬಾರಿ ಸಿಗರೇಟ್ ಸೇವನೆ ತ್ಯಜಿಸಲು ಪ್ರಯತ್ನಪಟ್ಟು ವಿಫಲರಾಗಿದ್ದರು. ನಿಕೋಟಿನ್ ಬದಲಿ ಚಿಕಿತ್ಸೆ ಕೂಡಾ ಪಡೆದಿದ್ದರು. 2010ರಲ್ಲಿ ಒಬಾಮಾ ಧೂಮಪಾನ ಸೇವನೆ ಚಟದಿಂದ ಮುಕ್ತರಾಗಿದ್ದಾರೆ ಎಂದು ಅವರ ಪತ್ನಿ  ಮಿಚೆಲ್ ಘೋಷಿಸಿದರು.
 
10. ಕೆಲವು ವ್ಯಸನಗಳಿಗೆ ಬಲಿಯಾಗಿದ್ದ ಬರಾಕ್,  ಸಿಗರೇಟ್ ಸೇದುವುದರ ಜೊತೆಗೆ ಮಾದಕವ್ಯಸನಿಯೂ ಆಗಿದ್ದರು.  ಒಬಾಮಾ 'choom gang' ಎಂಬ ತಂಡ ಕಟ್ಟಿಕೊಂಡು ಗೆಳೆಯರೊಡನೆ ಆಗಾಗ ಮಾರಿಜುನಾ ಸೇವಿಸುತ್ತಿದ್ದರು. ತಮ್ಮ  ಹೈಸ್ಕೂಲ್ ದಿನಗಳಲ್ಲಿ ಡ್ರಗ್ಸ್ ಸೇವನೆ ಕೂಡ ಮಾಡಿದ್ದರು. ಇವುಗಳ ಬಗ್ಗೆ ಈಗಲೂ ಅವರು ಖೇದ ವ್ಯಕ್ತಪಡಿಸುವುದುಂಟು.
 
ಸುಮಾರು ೬ ವರ್ಷಗಳಿಂದಲೂ ಅಮೇರಿಕಾದ ಅಧ್ಯಕ್ಷ ಪದವಿಗೆ ಸೆಣೆಸಲು ತಯಾರಿನಡೆಸುತ್ತಿದ್ದ ಉದ್ಯಮಿ ಹಾಗು ಒಬ್ಬ ಸಮರ್ಥ ಆಡಳಿತಗಾರ  ಮಿಟ್ ರಾಮ್ನಿಯವರು ಬಹಳ ಬೇಸರಪಟ್ಟುಕೊಂಡರು. ಅವರ ತಂದೆಯವರು ಸಹಾ  ಇದೇ  ತರಹ ೧೯೬೨ ನಲ್ಲಿ ಅಧ್ಯಕ್ಷಪದವಿಗೆ ಬಹಳವಾಗಿ ಸೆಣೆಸಿ ವಿಫಲರಾಗಿದ್ದರು.
 
೨೦೧೨ ರ ಚುನಾವಣಾ ಬಹಳ ರೋಚಕವಾಗಿತ್ತು. ಮುಂದಿನ ದಶಕಗಳಲ್ಲಿ ಅಮೇರಿಕಾದ ಅಧ್ಯಕ್ಷರ ಚುನಾವಣೆಗೆ ಹೇಗೆ ಸಿದ್ಧರಾ ಗಬೇಕೆನ್ನುವುದರ ಅರಿವು ಗಳಿಸಲು ಇಂದಿನ ಫಲಿತಾಂಶ ಪಾಠ ಕಲಿಸಿದೆ. ಕರಿಯರು, ಭಾರತೀಯರು, ಅಲ್ಪಸಂಖ್ಯಾತರು,, ಹಾಗೂ ಯುವಕರು, ಮಹಿಳೆಯರು ಎಷ್ಟು ಪ್ರಮುಖರು ಎನ್ನುವುದರ ಬಗ್ಗೆ ಗಮನ ಹರಿಸಬೇಕಾಗಿದೆ. ಬಿಳಿಯರು ಈಗ ಮೊದಲಿನಂತೆ ವರ್ತಿಸುವುದನ್ನು ನಿಲ್ಲಿಸಬೇಕು. 
 
ಹಾಲಿವುಡ್ ನ ಪ್ರಖ್ಯಾತ ನಟ, 'ಕ್ಲಿಂಟ್ ಈಸ್ಟ್ ವುಡ್' ರಿಪಬ್ಲಿಕನ್ ಅಭ್ಯರ್ಥಿಗೆ ನೆರವುನೀಡಿ ಮುಖಕ್ಕೆ ಕಪ್ಪು ಮಸಿಬಳಿದುಕೊಂಡ  ! ಅದಲ್ಲದೆ ಒಬಾಮ ಸರ್ಕಾರದ ನಿತಿಗಳನ್ನು ತೀವ್ರವಾಗಿ ಖಂಡಿಸಿದ್ದ ! ಈ ತರಹದ ವಿರೋದಾಭಾಸಕ್ಕೆ ಎಡೆಮಾಡಿ ಕೊಡುವುದು ಜಾಣತನದ ಲಕ್ಷಣವಲ್ಲ !
 
 

Comments

Submitted by venkatesh Thu, 11/08/2012 - 19:08

ಯಾವುದೇ ಪಕ್ಷಕ್ಕೆ ನೆರವು ನೀಡುವುದು ತಪ್ಪೇನಿಲ್ಲ. ಆದರೆ ಒಬಾಮರವರ ಆಡಳಿತದಲ್ಲಿ ಕಮ್ಮಿ ಏನಿದೆ ? ಯುದ್ಧ, ಹಣದುಬ್ಬರಗಳಿಂದ ನರಳುತ್ತಿದ್ದ ದೇಶವನ್ನು ತಕ್ಷಣ ಸರಿಪಡಿಸುವುದು ಸುಲಭಸಾಧ್ಯವೇ ? ಬುಷ್ ಆಡಳಿತದಲ್ಲಿ ಆದ ತಪ್ಪುಗಳು ಬಹಳ ಇದ್ದವು. ಇರಾಕ್ ಯುದ್ಧ ಒಂದು ಕಡೆ, ಸದ್ಧಾಂ ಹುಸೇನ್ ಮತ್ತೊಂದು ಕಡೆ. ಅಫ್ಘಾನಿಸ್ಥಾನ ಮಗದೊಂದು ಕಡೆ. ವಿಶ್ವದಾದ್ಯಂತ ಇದ್ದ ಹಣದುಬ್ಬರ ಎಲ್ಲರಿಗು ತಿಳಿದ ಸಂಗತಿ. ಹೀಗಾಗಿ ಅಮೆರಿಕಕ್ಕೆ ಯಾರು ಅಧ್ಯಕ್ಷರಾಗಿ ಬಂದರೂ ೪ ವರ್ಷಗಳಲ್ಲಿ ಸರಿಪಡಿಸುವುದು ಬಹಳ ಕಷ್ಟ. ಮುಂದಿನ ೪ ವರ್ಷಗಳು ಒಬಾಮರವರಿಗೆ ಅಗ್ನಿಪರೀಕ್ಷೆಯ ಸಮಯ ! ನಿಜವಾಗಿಯೂ ತಮ್ಮ ದೇಶವನ್ನು ಪ್ರೀತಿಸುವ ಅವರು ಖಂಡಿತ ಶತಾಯ ಗತಾಯ ಕಷ್ಟ ಪಟ್ಟು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸುವರು. ಇದು ಖಂಡಿತ. ಕಾದು ನೋಡಬೇಕಾಗಿದೆ.
Submitted by venkatesh Sat, 11/10/2012 - 07:17

In reply to by venkatesh

ಅಮೇರಿಕಾದ ಫ್ಲಾರಿಡಾ ರಾಜ್ಯದಲ್ಲಿ ಮತಗಣನೆ ಇನ್ನು ಪುರ್ತಿಯಾಗಿರಲಿಲ್ಲ. ಆದರೆ ಅದು ಮುಗಿದಮೇಲೆ ಅಲ್ಲಿಯೂ ಬರಾಕ್ ಒಬಾಮರವರು ೨೯ ಮತಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇದರಿಂದ ಅವರು ಗಳಿಸಿದ ಒಟ್ಟು ಮತ, ೩೩೨. ಪಾಪ, ರಾಮ್ನಿಯವರು ಅಲ್ಲಿಯೂ ಸೋತಿದ್ದಾರೆ. ಹೀಗಾಗಿ ಅಮೇರಿಕಾದ ಅತಿ ಜನಪ್ರಿಯ ಮತ್ತು ಭರವಸೆಯ ಅಧ್ಯಕ್ಷರಾಗಿ ಬರಾಕ್ ಒಬಾಮಾರವರು ಜಯಭೇರಿ ಬಾರಿಸಿ ವಿಜೃಂಭಿಸಿದ್ದಾರೆ ! http://prajavani.ne…