ಕಪ್ಪು ಮೋಡ......!
ಕವನ
ಕಪ್ಪು ಮೋಡ ಗದರಿದಾಗ
ಮುತ್ತಿನ ಹನಿ ಚದುರಿತು
ಒಪ್ಪುವ ಹೃದಯ ಮಿಡಿದಾಗ
ಸುಪ್ತ ಪ್ರೀತಿ ಚಿಗುರಿತು
ಮನದಲಿದ್ದ ಹಕ್ಕಿಯು ಬಯಕೆಯಾದಾಗ
ಆಸೆ ಗರಿ ಕೆದರಿ ಹಾರಿತು
ತಂಪು ಸಿಹಿ ಗಾಳಿ ಬೀಸಿದಾಗ
ನೀಳ ಕೇಶದಿ ಸೀಗೆ ಸೂಸಿತು
ಜಲಲ ಜಲಧಾರೆ ನಿನಾದಿಸುವಾಗ
ಗೆಜ್ಜೆಯು ಘಲಘಲಿಸಿತು
ದುಂಬಿಯು ಮಕರಂದ ಹೀರುವಾಗ
ನುವಿಗಳ ಝೇಂಕಾರ ಕೇಳಿಸಿತು
ಹುಡುಗಿ,
ಇವೆಲ್ಲ ಯಾವುದೇ ವರ್ಣನೆಯಲ್ಲ
ಮನದ ಒಡಳಾಲದಲ್ಲಿ ಚಿಗುರಿದ
ಪ್ರೀತಿಯ ಸವಿ ಸೊಲ್ಲ.....