ಕಪ್ಪು ಸುಂದರಿ...

ಕಪ್ಪು ಸುಂದರಿ...

ಬರಹ



ಕಪ್ಪು ಸುಂದರಿ. ಮಂಗಳೂರಿನ ಬೆಡಗಿ. ಮುಂಬೈಯಲ್ಲಿ ಬೆಳೆದ ಹುಡುಗಿ.. ಸ್ಲಂ ಡಾಗ್ ಚಿತ್ರದಿಂದ ಹಾಲಿವುಡ್ ನಲ್ಲಿ ಹೆಸರು. ಈಗ ಇದೇ ಫ್ರಿಡಾ ಪಿಂಟೋ ಮತ್ತೊಂದು ಚಿತ್ರಕ್ಕೆ ನಾಯಕಿ. ಮುಸ್ಲಿ ರಾಷ್ಟ್ರದ ಮಹಿಳೆಯರ ಕಥೆ-ವ್ಯಥೆ ಬಿಂಬಿಸುವ ಚಿತ್ರದಲ್ಲಿ ಫ್ರಿಡಾನೇ ಮೇನ್. ಪ್ರೀಡಾನೇ ಎಲ್ಲ. ಕಥೆ ಕೂಡ ಫ್ರೀಡಾ ನಿಭಾಯಿಸಿದ ಪಾತ್ರದ ಸುತ್ತವೇ ಸಾಗುತ್ತದೆ. ಅದೇ ಪಾತ್ರದ ಹೆಸರನ್ನೇ ಚಿತ್ರಕ್ಕೆ ಇಡಲಾಗಿದೆ. ಅಂದ್ರೆ, "ಮಿರಾಲ್" ಅನ್ನೋದ ಪಿಂಟೋ ಕಾಣಿಸಿಕೊಳ್ತಾಯಿರೋ ಮತ್ತೊಂದು ಇಂಗ್ಲೀಷ್ ಚಿತ್ರ..ಪ್ಯಾಲೆಸ್ಟೆನ್ ಭಾಷೆಯಲ್ಲೂ ಇದು ಸಿದ್ಧವಾಗಿದೆ...


ಫ್ರಿಡಾ ಇಲ್ಲಿ ಒಬ್ಬ ಸ್ಕೂಲ್ ಗರ್ಲ್. ಅಪ್ಪನ ಸುಪರ್ದಿಯಲ್ಲಿ ಬೆಳೆದ ಪುಟ್ಟಿ. ಪ್ಯಾಲೆಸ್ಟೆನ್ ನಂತಹ ಸ್ಥಳದಲ್ಲಿ ಬೆಳೆಯವ ಹುಡುಗಿ. ಓದುವಾಗಲೇ ಭಾರೀ ಮಾತುಗಾರ್ತಿ. ತಡವಾಗಿ ಬಂದು ಪ್ರೇಯರ್ ನಲ್ಲಿ ನಿಲ್ಲೋ ಆಕೆ. ೧೭ ವರ್ಷಕ್ಕೇನೆ ಪ್ರೀತಿ-ಪ್ರೇಮ ಅಂತ ಸುತ್ತುವ ಹುಡುಗಿ. ಆದ್ರೂ ಎನೋ ಸಾಧಿಸುವ ಛಲ. ಮುನ್ನುಗ್ಗುವ ಧೈರ್ಯ. ಇದೇ ಹುಡುಗಿಯನ್ನ ಕಷ್ಟಕ್ಕೆ ಸಿಲುಕಿಸುತ್ತದೆ...ಪ್ರೀತಿಸಿದ ಹುಡುಗ ಟೆರರ್ ಆಗಿರೋದ್ರಿಂದ ಪೋಲಿಸ್ರ ಏಟು ಬೀಳುತ್ತವೆ. ಹೀಗೆ ಸಾಗುತ್ತದೆ ಮಿರಾಲ್ ಕಥೆ...


ಆದ್ರೆ, ಇಂತಹ ಕಥೆಗಳು ಪ್ಯಾಲೆಸ್ಟ್ ನಲ್ಲಿ ಸಾಕಷ್ಟಿವೆ. ಇಂತಹವುಗಳನ್ನ ಹತ್ತಿರದಿಂದ ನೋಡಿದ ಪತ್ರಕೆರ್ತೆ ರೂಲಾ ಗೆಬ್ರೆಯಲ್ "ಮಿರಾಲ್" ಅಂತ ಕಾದಂಬರಿಯನ್ನೆ ಬರೆದಿದ್ದಾರೆ. ಇದನ್ನ ಓದಿದ ನಿರ್ದೇಶಕ ಜುಲಿಯನ್ ಸ್ಕಾನ್ ಬೆಲ್ ಫ್ರೀಡಾಳನ್ನ ಹಾಕಿಕೊಂಡು "ಮಿರಾಲ್" ಅಂತಲೆ ಚಿತ್ರ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದ್ರೆ, ಮಿರಾಲ್ ಬರೆದ ಇದೇ ರೂಲಾ ಗೆಬ್ರೆಯಲ್ ಚಿತ್ರಕ್ಕೆ ಸ್ಕ್ರೀನ್ ಪ್ಲೇ ಮಾಡಿದ್ದಾರೆ...


ಚಿತ್ರ ಕೇವಲ ಮಿರಾಲ್ ಕಥೆ ಹೇಳ್ತಿಲ್ಲ. ಪ್ಯಾಲೆಸ್ಟೆನ್ ಪ್ರತಿ ಮಹಿಳೆಯ ಕಥೆಯನ್ನ ಇದು ಹೇಳ ಹೊರಟ್ಟಿದೆ. ಕಳೆದ ಸೆಪ್ಟಂಬರ್ ರಂದು ಇದು ವೆನಿಸ್ ಫಿಲ್ಮ ಫೆಸ್ಟಿವಲ್ ನಲ್ಲೂ ಪ್ರರ್ದಶನ ಕಂಡಿದೆ. ಫ್ರಾನ್ಸ್ ಫಿಲ್ಮ ಫೆಸ್ಟ್ ನಲ್ಲೂ "ಮಿರಾಲ್" ಗಮನ ಸೆಳೆದಿದ್ದಾಳೆ. ಅಷ್ಟೇ ಪ್ರಶಂಸೆನೂ ಪಡೆದಿದ್ದಾಳೆ..ಅಮೆರಿಕದಲ್ಲೂ ಮಿರಾಲ್ ತೆರೆ ಕಾಣಲಿದೆ. ಆದ್ರೆ, ಅದಕ್ಕೆ ೨೦೧೧ ಮಾರ್ಚ್ ೨೫ ರವರೆಗೂ ಕಾಯಬೇಕು...


-ರೇವನ್ ಪಿ.ಜೇವೂರ್