ಕಪ್ಪು ಹಣ

ಕಪ್ಪು ಹಣ

ನಮ್ಮ FM (ರೇಡಿಯೋ ಅಲ್ಲ) , ಅದೇ ನಮ್ಮ ವಿತ್ತ ಮಂತ್ರಿಗಳು ಕಪ್ಪು ಹಣ ಇಟ್ಟಿರುವವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ  ಎಂದು ಹೇಳಿದ್ದಾರೆ.
ಬಹುಶಃ ತಮ್ಮ ಬಳಗದಿಂದಲೇ ಪಟ್ಟಿ ಪ್ರಾರಂಭವಾಗುತ್ತದೆ ಅಂತ ಭಯವಿರಬಹುದು.

ಅದನ್ನು ಜನ ಸಾಮಾನ್ಯರಾದ ನಾವು ಪ್ರಶ್ನಿಸುವಂತಿಲ್ಲ. ಇದು ನಮ್ಮ democracy !!
ನನ್ನನ್ನು ಕಾಡುವುದೆನೆಂದರೆ ಎಲ್ಲದಕ್ಕೂ ಬಂದ್ , ಚಳುವಳಿ ಇತ್ಯಾದಿಗಳನ್ನು ಮಾಡುವ ನಾವು ಈಗ ಯಾಕೆ ಸುಮ್ಮನಿದ್ದೇವೆ?  ಹಾಗಾದರೆ ಬಂದ್ ಮುಂತಾದವು ಸ್ವಯಂ ಪ್ರೇರಿತವಲ್ಲ ಎಂದಾಗುವುದಿಲ್ಲವೆ ?
ಇಲ್ಲಿ ಬಂದ್ ಎಂದರೆ tyre , ಬಸ್ ಮುಂತಾದವುಗಳನ್ನು ಸುಟ್ಟು ಅನಾವಶ್ಯಕವಾಗಿ ಪರಿಸರ ಹಾನಿ ಮಾಡುವುದಲ್ಲ.

ಆ ಹಣ ಎಲ್ಲಿಂದ ಬಂತು, ಯಾರು ಎಷ್ಟು ಇಟ್ಟಿದ್ದಾರೆ ಎಲ್ಲವನ್ನು ಪ್ರಜೆಗಳ ಮುಂದೆ ಇಡಬೇಕು ಎಂದು ಆಗ್ರಹಿಸುವುದು.
ನ್ಯಾಯಾಂಗಕ್ಕೆ ಪರಮ ಅಧಿಕಾರ ಸಿಕ್ಕಬೇಕು. ಇದರ ಸಂಪೂರ್ಣ ತನಿಖೆ ಮುಕ್ತವಾಗಿ ನಡೆಯಬೇಕು (ಇದು ಎಷ್ಟರ ಮಟ್ಟಿಗೆ ಸಾಧ್ಯವೋ ನನಗೆ ತಿಳಿದಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಪಾರದರ್ಶಕವಾಗಿರಬೇಕು ಎಂಬುದಷ್ಟೇ ಉದ್ದೇಶ).
ಇದು ೧೦೦% ನಮ್ಮ ದೇಶದ ಹಣವೇ ಆಗಿರುತ್ತದೆ. ಅಂದರೆ ಪ್ರಜೆಗಳ ಹಣ. ಇದನ್ನು ಪ್ರಜೆಗಳಿಗೆ ಹಂಚಬೇಕು. (ನಾನು ಈ  ನಡುವೆ TV ನೋಡಿಲ್ಲ. ಇದರ ಬಗ್ಗೆ ಖಂಡಿತವಾಗಿಯೂ ಸಾಕಷ್ಟು ಚರ್ಚೆ ನಡೆದೇ ಇರುತ್ತದೆ.
ಇಲ್ಲಿ ತಿಳಿಸುತ್ತಿರುವುದು ನನ್ನ ವಯುಕ್ತಿಕ ಅಭಿಪ್ರಾಯ ಮಾತ್ರ.)

ಮೊದಲು ಬೆಲೆ ಏರಿಕೆ ಸಮಸ್ಯೆ ಗೆ ಪರಿಹಾರ ಕಂಡು ಹಿಡಿಯಲಿ. ನಂತರ ತೆರಿಗೆ ವಿನಾಯ್ತಿ ಜಾರಿಗೊಳಿಸಲಿ.
ಹೀಗೆ ನಿಜವಾಗಲೂ ಪ್ರಜೆಗಳ ಹಿತಕ್ಕೆ ವಿನಿಯೋಗಿಸಿದರೆ ನಮ್ಮ ಎಷ್ಟೋ ಸಮಸ್ಯೆಗಳು  ಬಗೆ ಹರಿಯುತ್ತವೆ.

ಆದರೆ ಇದೆಲ್ಲ ದೂರದ ಮಾತಾಯ್ತು. ಮೊದಲನೆಯದಾಗಿ ಜನ ಸರ್ಕಾರವನ್ನು ಯಾಕೆ ಪ್ರಶ್ನಿಸುತ್ತಿಲ್ಲ? ಮಾಧ್ಯಮಗಳು ಅವಿರತವಾಗಿ ಸುದ್ದಿ ಸಮಾಚಾರಗಳನ್ನು ಬಿತ್ತರಿಸುತ್ತಿವೆ. ಆದರೆ ಜನ ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಪ್ರಾರಂಭಿಸುವವರೆಗೂ
ಯಾರಿಗೂ ಬಹುಶ ಇದರ ಬಿಸಿ ತಟ್ಟಲಾರದು.

ಹಗಲೂ ರಾತ್ರಿ ದುಡಿದು ಬೆರೆಳೆಣಿಕೆಯಷ್ಟು ಸಂಬಳ ಪಡೆಯುವ ಸಾಮಾನ್ಯನೊಬ್ಬ ತೆರಿಗೆ ಕಟ್ಟದೆ ಇದ್ದರೆ ಅದು ತಪ್ಪು.
ವಿದ್ಯುತ್, ದೂರವಾಣಿ ಮೊದಲಾದವುಗಳ ಬಿಲ್ ಪಾವತಿಸದಿದ್ದರೆ ಸಂಪರ್ಕವನ್ನೇ ಕಡಿದು ಹಾಕುತ್ತಾರೆ (ರೂಲ್ಸ್ ಪ್ರಕಾರ!!)
ಆದರೆ ಇವರಿಗೆ ಯಾವುದಕ್ಕೂ ಹೇಳೋರು ಕೇಳೋರು ಇಲ್ಲವೇ? ಇವರಿಗೆ ಯಾವ ರೂಲ್ಸೂ ಇಲ್ಲವೇ?  ಇಷ್ಟೆಲ್ಲಾ ಆದಮೇಲೂ ನಮ್ಮದು ಪ್ರಜಪ್ರಭುತ್ವೆ ಅನ್ನಿಸುತ್ತದೆಯೇ?

ಇದರ ಬಗ್ಗೆ ನಿಮಗೆಲ್ಲ ಏನನ್ನಿಸುತ್ತದೆ? ನಾನು ಮೇಲೆ ಹೇಳಿದ ಅಂಶಗಳಲ್ಲಿ ಯಾವುದೂ ಸಾಧ್ಯವಿಲ್ಲವೇ?
ಹಾಗಿದ್ದಲ್ಲಿ "Go with the flow " ಅಂತ ಮೊದಲಿಂದಲೂ ಅನುಸರಿಸಿದ "ನಾವೇನ್ ಮಾಡಕ್ಕಗುತ್ತೆ? " , "ನಮ್ಮ ಹಣೆಬರಹವೇ ಇಷ್ಟು"  ಮೊದಲಾದ ಸ್ಲೋಗನ್ ಗಳೊಂದಿಗೆ ಮುಂದುವರಿಯಬೇಕೆ?

Comments