ಕಫ, ಕೆಮ್ಮು ಶೀಘ್ರವಾಗಿ ಗುಣವಾಗಬೇಕೇ..?
* ಆಹಾರದಲ್ಲಿ ಹೆಚ್ಚು ಶುಂಠಿ ಹಾಗೂ ಮೆಣಸು ಬಳಸಿ. ನಿತ್ಯ ಕುಡಿಯುವ ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಒಂದು ಚಿಟಿಕಿ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ನೈಸರ್ಗಿಕವಾಗಿ ದೇಹದ ಉಷ್ಣತೆ ಪ್ರಮಾಣ ಹೆಚ್ಚಿಸುವ ಕಷಾಯ, ಸೂಪ್ ಕುಡಿಯಿರಿ. ಸ್ನಾನ ಮಾಡುವಾಗ ಕೂಡ ಒಂದೆರಡು ಹನಿ ನೀಲಗಿರಿ ತೈಲವನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ.
* ಒಂದು ಬಟ್ಟಲು ನೀರಿಗೆ ಅರ್ಧ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು ೧ ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ ೧ ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ಇಲ್ಲವಾಗುತ್ತದೆ.
* ಬಿಸಿಯಾದ ಹಸುವಿನ ಹಾಲಿಗೆ ಕಾಳುಮೆಣಸಿನಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
* ತುಪ್ಪದಲ್ಲಿ ಹುರಿದ ಮೆಣಸನ್ನು ಸಮಭಾಗ ಸಕ್ಕರೆಯೊಂದಿಗೆ ಸೇರಿಸಿ ಚೆನ್ನಾಗಿ ಪುಡಿಮಾಡಿ ದಿನಕ್ಕೆ ೩ ಸಲ ಅರ್ಧ ಟೀ ಚಮಚ ತಿಂದರೆ ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತದೆ.
* ಚೆನ್ನಾಗಿ ಮಾಗಿದ ರಸಬಾಳೆ ಹಣ್ಣಿನೊಂದಿಗೆ ಅರ್ಧ ಟೀ ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಸೆದು ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
* ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನಪುಡಿ ಮತ್ತು ಎರಡು ಚಿಟಿಕೆ ಕಾಳು ಮೆಣಸಿನಪುಡಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕದಡಿ ಕುಡಿದರೆ ನೆಗಡಿ, ಕೆಮ್ಮು, ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ.
* ಒಂದು ಚಿಟಕೆ ಅರಿಶಿನಪುಡಿ ಮತ್ತು ಎರಡು ಚಿಟಕೆ ಕಾಳು ಮೆಣಸಿನಪುಡಿಯನ್ನು ಒಂದು ಬಟ್ಟಲು ಹಾಲಿಗೆ ಹಾಕಿ ಚೆನ್ನಾಗಿ ಕುದಿಸಿ ಊಟವಾದ ನಂತರ ರಾತ್ರಿ ಮೂರು ದಿನ ಸೇವಿಸಿದರೆ ಜಾಡ್ಯ ಪರಿಹಾರವಾಗುವುದರ ಜೊತೆಗೆ ನೆಗಡಿ, ಕೆಮ್ಮು ದೂರವಾಗುತ್ತದೆ.
* ಮೆಣಸನ್ನು ಹುರಿದು ನುಣ್ಣಗೆ ಪುಡಿಮಾಡಿ ಕಾಲು ಚಮಚ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ದಿನಕ್ಕೆ ೨ ಸಲ ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ಗುಣವಾಗುತ್ತದೆ.
* ಒಡೆದ ಮೆಣಸು ಸ್ವಲ್ಪ ಓಮ ಮತ್ತು ಒಂದೆರಡು ಉಪ್ಪಿನ ಹರಳುಗಳನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸಿ ನುಂಗುತ್ತಿದ್ದರೆ ಕೆಮ್ಮು ದೂರವಾಗುತ್ತದೆ.
* ಒಂದು ಬಟ್ಟಲು ನೀರಿಗೆ ಅರ್ಧ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು ಒಂದು ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಕುದಿಸಿ ಈ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಸಾರಿ ಕುಡಿದರೆ ಗಂಟಲು ಕೆರೆತ ಕಡಿಮೆಯಾಗುತ್ತದೆ.
* ಒಂದು ವೀಳ್ಯದೆಲೆಯೊಂದಿಗೆ ನಾಲ್ಕೈದು ಕಾಳು ಮೆಣಸು ಮತ್ತು ಒಂದೆರಡು ಹರಳು ಉಪ್ಪು ಹಾಕಿಕೊಂಡು ಜಗಿದು ತಿನ್ನುವುದರಿಂದ ಕಫಾ ಹೋಗುತ್ತದೆ.
* ಓಮ ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರು ಸಾರಿ ಕುಡಿದರೆ ಕಫ ನಿವಾರಣೆಯಗುತದೆ.
* ಒಂದು ಬಟ್ಟಲು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿಶುಂಟಿ ಕಷಾಯ ಬೆರೆಸಿ ಜೇನುತುಪ್ಪದೊಂದಿಗೆ ಕುಡಿದರೆ ಕಫದಿಂದ ಬಿಡುಗಡೆಯಾಗುತ್ತದೆ. ಕೆಮ್ಮು, ಕ್ಷಯ ರೋಗಗಳಿಗೆಲ್ಲ ಈ ಉಪಚಾರದಿಂದ ಉತ್ತಮ ಪರಿಹಾರ ದೊರೆಯುವುದು.
* ಹಸಿ ಶುಂಠಿಯ ಕಷಾಯಕ್ಕೆ ಮೆಂತ್ಯದ ಸೊಪ್ಪಿನ ಕಷಾಯವನ್ನು ಬೆರೆಸಿ ಜೇನುತುಪ್ಪದೊಂದಿಗೆ ಕುಡಿಯುವದರಿಂದ ಕಫ ನಿವಾರಣೆಯಾಗುವುದು.
* ಹಸಿ ಶುಂಟಿಯ ಕಷಾಯ ತಯಾರಿಸಿ ದಿನಕ್ಕೆ ಎರಡುಬಾರಿ ಕುಡಿಯುವುದರಿಂದ ನೆಗಡಿ ಮತ್ತು ದೇಹಾಲಸ್ಯ ದೂರವಾಗುತ್ತದೆ.
* ಹಸಿ ಶುಂಠಿ, ಲವಂಗ ಮತ್ತು ಉಪ್ಪನ್ನು ಬಾಯಿಗೆ ಹಾಕಿಕೊಂಡು ಅಗಿದು ಬರುವ ನೀರನ್ನು ಕುಡಿಯುವದರಿಂದ ಗಂಟಲು ಕೆರೆತ ಹಾಗು ನೆಗಡಿ ನಿವಾರಣೆಯಾಗುವುದು. ಹಾಗೆ ಬಾಯಿಯ ದುರ್ಗಂಧ ದೂರವಾಗುತ್ತದೆ.
* ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿಣದ ಅಪ್ಪಟ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಕದಡಿ ಕುಡಿದರೆ ಕೆಮ್ಮು, ನೆಗಡಿ ಮತ್ತು ಗಂಟಲು ನೋವು ನಿವಾರಣೆಯಾಗುವುದು.
* ಅಪ್ಪಟ ಅರಿಶಿಣದ ಪುಡಿ ಮತ್ತು ಬೆಲ್ಲವನ್ನು ಹಾಲಿನೊಂದಿಗೆ ಕಲಸಿ ಗಂಟಲಿನ ಮೇಲ್ಭಾಗಕ್ಕೆ ಹಚ್ಚುವುದರಿಂದ ಶೀತದ ಗಂಟಲು ನೋವು ನಿವಾರಣೆಯಾಗುವುದು.
* ಕತ್ತೆಯ ಹಾಲನ್ನು ದಿನಕ್ಕೆ ಒಂದು ಬಾರಿ ಎಳೆ ಮಕ್ಕಳಿಗೆ ಕುಡಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.
* ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ಕುಡಿಯುವದರಿಂದ ನೆಗಡಿ ವಾಸಿಯಾಗುತ್ತದೆ.
* ಬೆಣ್ಣೆಯನ್ನು ತಿಂದರೆ ಆಯಾಸ ಪರಿಹಾರವಾಗಿ ಕೆಮ್ಮು ಬಾಯಾರಿಕೆ ಹೋಗುವುದು.
* ೪೪ ದಿನಗಳವರೆಗೆ ತಪ್ಪದೆ ಒಂದು ಸೇಬನ್ನು ತಿನ್ನಿರಿ, ಕಫ ನಿವಾರಣೆಯಾಗುವುದು.
* ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಬಾಳೆ ಹಣ್ಣನ್ನು ಸೇವಿಸಿದರೆ ಎದೆನೋವು ಮತ್ತು ಕೆಮ್ಮು ಕಡಿಮೆಯಾಗುವದು.
* ತೆಂಗಿನ ಹಾಲು ಮತ್ತು ಗಸಗಸೆ ಹಾಲನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಪ್ರತಿರಾತ್ರಿ ಊಟವಾದ ನಂತರ ಸೇವಿಸಿದರೆ ಧೂಮಪಾನದಿಂದ ಆಗುವ ಗೂರಲು ಕೆಮ್ಮು ಮತ್ತು ಎದೆನೋವಿನಲ್ಲಿ ಸುಧಾರಣೆಯಾಗುವುದು.
* ಜೇನುತುಪ್ಪವನ್ನು ನಿಯಮಿತವಾಗಿ ಪ್ರತಿ ನಿತ್ಯವೂ ಬಳಸುವುದರಿಂದ ಕಫ ನಿವಾರಣೆಯಾಗುತ್ತದೆ.
* ತುಳಸಿ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಮೂರು ದಿನಗಳ ಕಾಲ ಮಕ್ಕಳಿಗೆ ಕುಡಿಸುವುದರಿಂದ ಕೆಮ್ಮು ಮತ್ತು ಜ್ವರ ನಿವಾರಣೆಯಾಗುತ್ತದೆ.
* ನಿರಂತರವಾಗಿ ಬೆಳ್ಳುಳ್ಳಿಯನ್ನು ಅರೆದ ರಸ ಸೇವನೆಯಿಂದ ದೀರ್ಘಕಾಲದಿಂದ ವಾಸಿಯಾಗದ ಕೆಮ್ಮು, ನೆಗಡಿ ಗುಣವಾಗುತ್ತದೆ.
* ನುಗ್ಗೆಯ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ಆರಿಸಿ ರಸ ತೆಗೆದು, ಆ ರಸಕ್ಕೆ ಕಾಳು ಮೆಣಸಿನ ಪುಡಿ, ನಿಂಬೆರಸ ಮತ್ತು ಅಡಿಗೆ ಉಪ್ಪನ್ನು ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಉಬ್ಬಸ, ನೆಗಡಿ ನಿವಾರಣೆಯಾಗುತ್ತದೆ.
* ೫೦ ಗ್ರಾಂ ಶುಂಠಿ , ೪ ಚಮಚ ಸಕ್ಕರೆಯನ್ನು ೨ ಲೋಟ ನೀರಿನಲ್ಲಿ ಹಾಕಿ ೩೦ ನಿಮಿಷ ಕುದಿಸಿ. ದಿನಕ್ಕೆ ೨ ಬಾರಿ ಬಿಸಿ ಇರುವಾಗಲೇ ಕುಡಿಯಿರಿ ಕಫ ಕಡಿಮೆಯಾಗುತ್ತದೆ .
* ದೊಡ್ಡ ಪತ್ರೆ ಎಲೆ, ತುಳಸಿ ಎಲೆ & ವಿಳ್ಯದೆಲೆಯನ್ನು ಜಜ್ಜಿ ಹಿಂಡಿ ರಸತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಮಗುವಿಗೆ ಕುಡಿಸಿದರೆ ಕೆಮ್ಮು & ನೆಗಡಿ ಗುಣವಾಗುವುದು.
* ಹಸಿ ಶುಂಟಿಯ ರಸ ಮತ್ತು ವೀಳ್ಯದೆಲೆಯ ರಸದ ಜೊತೆ ಜೇನುತುಪ್ಪವನ್ನು ಬೆರೆಸಿ ತಿಂದರೆ ಕಫ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
* ಕಫ ಬಹಳವಾಗಿದ್ದರೆ ಬಿಸಿನೀರಿನೊಂದಿಗೆ ಸ್ವಲ್ಪ ಉಪ್ಪನ್ನು ಬೆರಸಿ ಕುಡಿಯುತ್ತಿದ್ದರೆ ಕಫ ಬರುವುದು ನಿಲ್ಲುತ್ತದೆ.
* ಅರಿಷಿಣ ಕೊಂಬನ್ನು ಹುರಿದು ಪುಡಿ ಮಾಡಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ದಿನದಲ್ಲಿ ಮೂರು ಬಾರಿ ಸೇವಿಸಿ. ಕುದಿಯುವ ನೀರಿಗೆ ಅರಿಷಿಣ ಹಾಕಿ ಆವಿ ತೆಗೆದುಕೊಳ್ಳುವುದರಿಂದ ಕೆಮ್ಮ ಹಾಗೂ ಶೀತ ನಿವಾರಣೆ ಆಗುತ್ತದೆ.
* ೫ ಎಂಎಲ್ ಈರುಳ್ಳಿ ರಸಕ್ಕೆ ೧೦ ಎಂಎಲ್ ಜೇನುತುಪ್ಪ ಸೇರಿಸಿ ಸೇವಿಸಿ. ಕೆಮ್ಮು ಮಾಯ.
* ಕೆಲವು ಬೆಳ್ಳುಳ್ಳಿ ಎಸಳುಗಳನ್ನು ನೀರಿನಲ್ಲಿ ಕುದಿಸಿ. ಅದಕ್ಕೆ ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು ನಿವಾರಣೆ ಆಗುತ್ತದೆ.
* ಒಣದ್ರಾಕ್ಷಿಯನ್ನು ತೊಳೆದು ರುಬ್ಬಿ ಅದಕ್ಕೆ ನೀರು ಹಾಗೂ ಸಕ್ಕರೆ ಸೇರಿಸಿ ಬಿಸಿ ಮಾಡಿ ಕುಡಿಯಿರಿ. ಕೆಮ್ಮು ಕಡಿಮೆಯಾಗುತ್ತದೆ.
* ೧/೪ ಕಪ್ ನೀರಿಗೆ ಎರಡು ಚಮಚ ಜೇನು, ಲಿಂಬೆ ರಸ, ದಾಲ್ಚಿನಿ ಚಕ್ಕೆ ಹಾಗೂ ಒಂದು ನೀಲಗಿರಿ ಎಲೆ ಸೇರಿಸಿ ಸೇವಿಸಿ ಕೆಮ್ಮು ನಿವಾರಣೆ ಆಗುತ್ತದೆ.
* ಮಕ್ಕಳಲ್ಲಿ ಕಾಣಿಸುವ ಕೆಮ್ಮಿಗೆ ಸಾಸಿವೆ ಎಣ್ಣೆ ಹೆಚ್ಚು ಪರಿಣಾಮಕಾರಿ. ಎಣ್ಣೆಯನ್ನು ಮಕ್ಕಳ ಎದೆಗೆ ಹಚ್ಚಿ ತಿಕ್ಕಿ.
* ಕಷ್ಣತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ತೊಟ್ಟು ಜೇನುತುಪ್ಪು ಬೆರೆಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ. ಒಂದಿಷ್ಟು ದಾಲ್ಚಿನ್ನಿ ಚಕ್ಕೆ ಪುಡಿ ಮಾಡಿ, ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಕಾಳುಮೆಣಸಿನ ಪುಡಿ ಬೆರೆಸಿ ಬಿಸಿಯಿರುವಾಗಲೇ ಕುಡಿಯಬೇಕು ನೆಗಡಿ ಮಾಯ.
(ಸಂಗ್ರಹ) ಮನು ಶಕ್ತಿನಗರ
ಚಿತ್ರ ಕೃಪೆ: ಇಂಟರ್ನೆಟ್ ತಾಣ