ಕಬಡ್ಡಿಗೆ ಹೊಸ ರೂಪ ಕೊಟ್ಟ ಪ್ರೋಕಬಡ್ಡಿ
ತಿಂಗಳ ಕಾಲ ಭರಪೂರ ಮನರಂಜನೆ ಒದಗಿಸಿದ 'ಪ್ರೋಕಬಡ್ಡಿ-2014' ತನ್ನ ಆಟವನ್ನು ಮುಗಿಸಿದೆ.ಜೈಪುರ ಪಿಂಕ್ ಪ್ಯಾಂಥರ್ಸ್ ಯು ಮುಂಬಾವನ್ನು ಸೋಲಿಸುವ ಮೂಲಕ ವಿನ್ನರ್ಸ್ ಎನಿಸಿಕೊಂಡಿತು.ಇದರ ಹುಟ್ಟಿಗೆ ಕಾರಣರಾದ ಚಾರುಶರ್ಮರಿಗೆ ಮೊದಲ ಬಿತ್ತನೆಯಲ್ಲೇ ಒಳ್ಳೆಯ ಬೆಳೆ ಬೆಳೆದ ಸಮಾಧಾನ.ಚಿಯರ್ ಗರ್ಲ್ಸ್ಗಳು ಇಲ್ಲದಿದ್ದರೂ ಟಿವಿಯಲ್ಲಿ ಜನ ಆಟಗಳನ್ನು ನೋಡುತ್ತಾರೆ ಅನ್ನೋದನ್ನು ಈ ಲೀಗ್ ಸಾಬೀತು ಮಾಡಿದೆ.ಟಿವಿ ಸೀರಿಯಲ್, ರಿಯಾಲಿಟಿ ಶೋ,ಕ್ರಿಕೆಟ್ನ ಅನೇಕ ವೀಕ್ಷಕರನ್ನು ತನ್ನಡೆಗೆ ತಿಂಗಳ ಕಾಲ ಆಕರ್ಷಿಸಿದ ಹೆಗ್ಗಳಿಕೆ ಇದರದ್ದು. ಫಿಕ್ಸಿಂಗ್,ಡ್ರಕ್ಸ್,ಡ್ರಿಂಕ್ಸ್ ಮೊದಲಾದ ಗದ್ದಲವಿಲ್ಲದೆ ನಡೆದ ಸ್ವಚ್ಛ ಆಟವೆನಿಸಿಕೊಂಡಿತು.ಭಾರತದಲ್ಲಿ ಕಬಡ್ಡಿ ಮೊದಲಿನಿಂದ ಇದ್ದರೂ ಇಷ್ಟು ಜನಪ್ರಿಯವಾಗಿರಲಿಲ್ಲ.ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗೊಂದು ಹೀಗೊಂದು ಪಂದ್ಯಾಟಗಳು ನಡೆಯುತ್ತಿದ್ದರೂ ಅದನ್ನು ಪ್ರಸಾರ ಮಾಡಲು ಯಾವುದೇ ಕ್ರೀಡಾ ಚಾನೆಲ್ಗಳು ಧೈರ್ಯ ಮಾಡುತ್ತಿರಲಿಲ್ಲ.ನಮ್ಮಲ್ಲಿ ಲಕ್ಷಾಂತರ ಜನ ಕಬಡ್ಡಿ ಪ್ರೇಮಿಗಳಿದ್ದರು ಅವರ ಭಾವನೆಗಳನ್ನು ಇದುವರೆಗೂ ಯಾರು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ.ನಮ್ಮ ದೇಶದಲ್ಲೇ ಹುಟ್ಟಿ ಬೆಳೆದ ಈ ಕ್ರೀಡೆಯನ್ನು ಜನಪ್ರಿಯಗೊಳಿಸಲು ನಮಗೆ ಇಷ್ಟು ವರ್ಷಗಳು ಬೇಕಾಯಿತು ಎನ್ನುವುದು ಮಾತ್ರ ವಿಷಾದನೀಯ.ವಾಣಿಜ್ಯ ಮತ್ತು ಮನರಂಜನೆ ದೃಷ್ಟಿಯಿಂದ ಮಾತ್ರ ಇದರ ಯಶಸ್ಸನ್ನು ಅಳೆಯಬಾರದು.ಯಾಕೆಂದರೆ ಇದು ಕಬಡ್ಡಿ ಆಡುತ್ತಿರುವ ಅನೇಕ ಪ್ರತಿಭೆಗಳಿಗೆ ಭರವಸೆಯ ಬೆಳಕನ್ನು ಮೂಡಿಸಿದೆ.ಕಬಡ್ಡಿ ಆಟ ಎಂದರೆ ತಾತ್ಸರ ಪಡುತ್ತಿದ್ದವರು ಅಭಿಮಾನ ಪಡುವ ಹಾಗೆ ಮಾಡಿದೆ.ಲಕ್ಷಾಂತರ ಕಬಡ್ಡಿ ಪ್ರೇಮಿಗಳ ಮನಸ್ಸನ್ನು ಗೆದ್ದಿದೆ. ಫೆಸ್ಬುಕ್,ಟ್ವಿಟ್ಟರ್ ನಲ್ಲು ಸಾಕಷ್ಟು ಅಭಿನಂದನೆಗಳು ಹರಿದು ಬಂದಿದೆ.ಕ್ರೀಡೆಯೊಂದಕ್ಕೆ ಸರಿಯಾದ ಪ್ರೋತ್ಸಾಹ ಸಿಕ್ಕಿದರೆ ಅದು ಯಾವ ಎತ್ತರಕ್ಕೆ ಏರಬಹುದೆಂಬುದನ್ನು ಈ ಲೀಗ್ ಸಾಧಿಸಿ ತೋರಿಸಿದೆ.ಇದರ ಜನ್ಮದಾತರಾದ ಚಾರುಶರ್ಮರಿಗು,ಪ್ರಸಾರ ಮಾಡಿದ ಸ್ಟಾರ್ ಸ್ಪೋರ್ಟ್ಸ್ ನವರಿಗೂ ಕೃತಜ್ಞತೆ ಸಲ್ಲಿಸೋಣ.
ಪ್ರೋಕಬಡ್ಡಿ ಸೀಸನ್2 ನಿರೀಕ್ಷೆಯಲ್ಲಿ........