ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ಇದೆ ಇರ್ಬೇಕು ಅಂದಿತ್ತು ಮನಸು!!!
ಯಾವ ಕಲಾವಿದನ ಕಲ್ಪನೆಯೂ ಕಾಣೆ !!! |
ಕಳೆದ ಎಂಟು ಸಂಚಿಕೆಯಿಂದ ನನ್ನೊಡನೆ ಕಬಿನಿಯ ಕಾಡಲ್ಲಿ ಅಲೆಯುತ್ತಿದ್ದೀರಿ , ಕಳೆದ ಸಂಚಿಕೆಯಲ್ಲಿ ಆನೆಗಳ ಸಾಮ್ರಾಜ್ಯದೊಳಗೆ ಹೊಕ್ಕಿಬಂದ ನಾವು ಈ ಸಂಚಿಕೆಯಲ್ಲಿ ಕಬಿನಿಯ ಮಡಿಲಲ್ಲಿ ನಡೆಯುವ ಪ್ರಕೃತಿಯ ನರ್ತನ ನೋಡೋಣ ಬನ್ನಿ .ಹೌದು ಸ್ವಾಮೀ ಇದೊಂದು ಮನರಂಜಿಸುವ ನೃತ್ಯವೇ ಸರಿ,ಕಬಿನಿಯ ಹಿನ್ನೀರಿನಲ್ಲಿ ಒಮ್ಮೆ ತೇಲುತ್ತಾ ಹೊರಟ ನಮಗೆ ಯಾವುದೇ ಪ್ರಾಣಿಯ ದರ್ಶನ ಆಗಲಿಲ್ಲ , ನಮಗೆ ನಾವೇ ಸಮಾಧಾನ ಮಾಡಿಕೊಂಡ ನಾವು ಯಾವುದನ್ನು ನೋಡಿ ಆನಂದ ಪಡೋಣ ಎಂದುಕೊಳ್ಳುವಷ್ಟರಲ್ಲಿ ಕಬಿನಿಯ ಹಿನ್ನೀರಿನಲ್ಲಿ ಮರಗಳ ಮೋಹಕ ನರ್ತನ ಕಣ್ಣಿಗೆ ಬಿತ್ತು.
ಬೇಲೂರ ಬಾಲೆಯರಿಗೆ ನೃತ್ಯ ಕಲಿಸಿದವರು ನಾವೇ !!! |
ಮುಗಿಲ ಚುಂಬಿಸುವ ಆಸೆ ನಮಗೆ !!! |
ಒಂಟೀ ಒಂಟಿಯಾಗಿರುವುದು ಬೋರೋ ಬೋರು !! |
ಬಲು ಅಪರೂಪ ನಮ್ಜೋಡಿ ,ಎಂತ ಕಚೇರಿಗೂ ನಾವ್ ರೆಡಿ !! |
ನೀರಿನಲ್ಲಿ ಅರಳಿದ ಕಲೆಯ ಮೋಹಕ ಬಲೆ !! |
ಜೋಕೆ ನಾನು ಬಳ್ಳಿಯ ಮಿಂಚು !!! |
ಬನ್ನಿ ಕುಣಿಯೋಣ !!ನಲಿದು ನರ್ತಿಸೋಣ!!! |
ತೇಲುತ್ತಾ ಸಾಗಿದ ನಾವು ನೀರಿನ ಸಭಾಂಗಣದಲ್ಲಿ ಮೆರೆದಿಹ ಅದ್ಭುತ ನೃತ್ಯ ಗಳನ್ನೂ ಸೆರೆಹಿಡಿಯಲು ಆರಂಭಿಸಿದೆವು. ಹಾಗೆ ಸಾಗಿದ ನಮಗೆ ಮೋಹಕ ಜಾಲದಲ್ಲಿ ಮರಗಳ ಸುಂದರ ಹಾವ ಭಾವ ದೊಳಗೆ ಮೆರುಗು ನೀಡಿದ ಹಕ್ಕಿಗಳ ದರ್ಶನ ಭಾಗ್ಯ ದೊರೆಯಿತು.
ಸ್ವರ್ಗದಲ್ಲಿ ನಮ್ಮ ಮನೆ !!! |
ನಾನು ನೀನು ಜೋಡಿ !!! |
ನಮ್ಮ ಪುಟ್ಟ ಸಂಸಾರ,ಲೋಕದಿಂದ ಬಹುದೂರ !! |
ದೂರ ಬಹುದೂರ ಹೋಗುವ ಬಾರಾ !! |
ಯಾವ ತಾಳ ಯಾವ ಮರಕೋ !!! |
ನಮ್ಮ ಲೋಕ ಯಾವ ಸ್ವರ್ಗಕ್ಕೆ ಕಡಿಮೆ !! |
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ !!! |
ಯಾವ ಮೋಹಕ ಕಲಾವಿದನ kaichalaka idu !! |
ಸ್ವರ್ಗ ಸುಂದರಿಯರ ಸನಿಹದಿಂದ ಬಿಡಿಸಿಕೊಂಡು ದಡದ ಸನಿಹ ಹೊರಟ ನಮಗೆ ಮೊಸಳೆಯೊಂದು ನೀರಿಗೆ ಜಾರುತ್ತಿರುವ ನೋಟ ಕಂಡಿತು.
ನಾನವನಲ್ಲಾ!!! ನಿಮ್ ಸಹವಾಸ ಬೇಡ ನಂಗೆ!!!! |
ಹರಿಣಗಳ ಲೋಕ !!! |
ಹಾಗೆ ತೇಲುತ್ತಾ ದಡಕ್ಕೆ ಹೊರಟ ನಮಗೆ ದೂರದಲ್ಲಿ ಜಿಂಕೆಗಳ ಹಿಂಡು ಮೇಯುತ್ತಿರುವುದು ಕಾಣಿಸಿತು. ಕಬಿನಿಯ ಸ್ವರ್ಗ ಲೋಕದಿಂದ ನೆನಪುಗಳ ಮೂಟೆ ಹೊತ್ತು ಮರಳಿ ಗೂಡಿಗೆ ಬಂದೆವು.ಇಷ್ಟರವರೆಗೂ ನನ್ನ ಜೊತೆಯಲ್ಲಿ ಕಾನನದ ಪ್ರವಾಸ ಮಾಡಿದ ನಿಮಗೆ ನನ್ನ ಕೋರಿಕೆ ಇಷ್ಟೇ ನೀವು ಯಾವ ಕಾಡಿಗೆ ಹೋದರು ದಯವಿಟ್ಟು ಕೆಳಕಂಡ ವಿಚಾರಗಳನ್ನು ಗಮನಿಸಿರಿ . 1 ] ಕಾಡಿನಲ್ಲಿ ವಿಹಾರಕ್ಕೆಂದು ತೆರಳಿ ಕೂಗಾಟ ಕಿರುಚಾಟ ಮಾಡುವುದನ್ನು ಮಾಡಬೇಡಿ,ಇದರಿಂದ ನಿಮ್ಮ ಗದ್ದಲಕ್ಕೆ ಹೆದರಿದ ಪ್ರಾಣಿಗಳು ದೂರ ಹೋಗಿ ನಿಮಗೆ ಪ್ರಾಣಿಗಳ ದರ್ಶನ ಆಗುವ ಸಂಭವ ಕಡಿಮೆ .[ಈ ವಿಚಾರದಲ್ಲಿ ನಾವು ವಿದೇಶಿಯರನ್ನು ಗಮನಿಸುವುದು ಒಳ್ಳೆಯದು.] 2 ] ಕಾನನದಲ್ಲಿ ಪ್ರಾಣಿಗಳನ್ನು ಅಣಕಿಸುವುದು, ಕಾರಿನ ಹಾರನ್ ಜೋರಾಗಿ ಮಾಡಿ ಅವುಗಳನ್ನು ರೇಗಿಸುವುದು ಮಾಡಬೇಡಿ ಕೆರಳಿದ ಪ್ರಾಣಿಗಳು ಮನುಷ್ಯರನ್ನು ಅಟ್ಟ್ಯಾಕ್ ಮಾಡಿದ್ರೆ ಮನುಷ್ಯನ ಯಾವ ಆಟಗಳು ಅಲ್ಲಿ ನಡೆಯದು .ಕಾಡಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ತಕ್ಷಣ ಇಳಿಯಬೇಡಿ ಇದು ಅತ್ಯಂತ ಅಪಾಯಕಾರಿ ಹೀಗೆ ಮಾಡಿದ ಹಲವರು ತಮ್ಮ ಪ್ರಾಣ ತೆತ್ತಿದ್ದಾರೆ. 3 ]ನೀವು ತೆಗೆದು ಕೊಂಡು ಹೋದ ಆಹಾರದ ಪ್ಯಾಕೆಟುಗಳು, ಪ್ಲಾಸ್ಟಿಕ್ ಬಾಟಲುಗಳು,ಅರ್ದ ತಿಂದು ಮಿಕ್ಕಿದ ಆಹಾರ ಪದಾರ್ಥಗಳು, ಉಪಯೋಗಿಸಿದ ಸೋಪುಗಳು, ಟೂತ್ ಪೇಸ್ಟು , ಕಾಗದ ,ಇವುಗಳನ್ನು ಕಾಡಿನಲ್ಲಿ ಬಿಸಾಕಿ ಬರಬೇಡಿ ಇದರಿಂದ ಪ್ರಾಣಿಗಳ ಜೀವ ಹೋಗುವ ಸಾಧ್ಯತೆ ಹೆಚ್ಚು, ಕಾಡು ಕಸದ ತೊಟ್ಟಿಯಲ್ಲ!!! 4 ] ಕಾಡಿನಲ್ಲಿ ಮಜಾ ಮಾಡಲು ಹೋಗಬೇಡಿ ಕಂಠ ಪೂರ್ತಿ ಕುಡಿದು,ಬಾಟಲುಗಳನ್ನು ಎಲ್ಲೆಂದರಲ್ಲಿ ಒಡೆದುಹಾಕಿ, ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಪ್ರತಿಬಾ ಪ್ರದರ್ಶನ ಮಾಡುವವರಿಗೆ ಕಾಡು ಸೂಕ್ತ ಸ್ತಳವಲ್ಲಾ . 5 ] ಟ್ರೆಕ್ಕಿಂಗ್ ಗೆ ಹೋದರೆ ನೀವು ಹೋಗುವ ಜಾಗದ ಬಗ್ಗೆ ಸಾಕಷ್ಟು ವಿವರಗಳನ್ನು ಸಂಗ್ರಹಿಸಿ ,ಹವಾಮಾನದ ಬಗ್ಗೆ ತಿಳಿದು ಕೊಂಡು ಹೊರಡಿ. 6 ] ಕಾಡು ಪ್ರಾಣಿಗಳ ಫೋಟೋ ತೆಗೆಯುವಾಗ ಎಚ್ಚರ ವಹಿಸಿ, ನಿಮ್ಮ ಗಮನ ಫೋಟೋ/ವೀಡಿಯೊ ತೆಗೆಯುವ ಕಡೆ ಇದ್ದಾಗ ಪ್ರಾಣಿಗಳು ಎರಗಿಬಂದರೆ ಕಷ್ಟವಾಗಬಹುದು.ಈ ಬಗ್ಗೆ ಎಚ್ಚರವಿರಲಿ. 7 ] ನಿಮ್ಮ ಗೆಳೆಯರಿಗೆ ,ನಿಮ್ಮ ಮನೆಯ ಕಿರಿಯರಿಗೆ ಕಾಡಿನಲ್ಲಿ ನಮ್ಮ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ಕೊಡಿ. 8 ] ಕಾಡಿಗೆ ನೀವು ಹೋದ ತಕ್ಷಣ ಕಾಡಿನಲ್ಲಿನ ಪ್ರಾಣಿಗಳು ನಿಮ್ಮನ್ನು ದಾರಿಯಲ್ಲಿ ನಿಂತು ಸ್ವಾಗತಿಸುತ್ತವೆ ಎಂಬ ಬ್ರಮೆ ಬೇಡ. ಪ್ರಾಣಿಗಳು ಸಿಗಲು ಅದೃಷ್ಟವೂ ಬೇಕೂ , ಯಾವುದೇ ಪ್ರಾಣಿ ಸಿಕ್ಕದಿದ್ದರೆ ಬೇಸರ ಬೇಡ ಬೇರೆ ವಿಚಾರಗಳ ಕಡೆ ಗಮನ ಹರಿಸಿ ಅಲ್ಲಿನ ಹೂ , ಹಣ್ಣು, ಮರ ,ಗಿಡ, ಪ್ರಕೃತಿ ಇವುಗಳ ಬಗ್ಗೆ ಕಲಿಯಲು ಪ್ರಯತ್ನಿಸಿ. ನನಗೆ ಅನ್ನಿಸಿದ ಕೆಲವು ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ.ಮೇಲಿನ ಅಂಶಗಳನ್ನು ಕಾಡಿನಲ್ಲಿ ಪಾಲಿಸಿದರೆ ಕಾಡನ್ನು ಅಲ್ಲಿನ ಪ್ರಾಣಿಗಳನ್ನು ಉಳಿಸಿದ ಕೀರ್ತಿ ನಮಗೆ ಬರುತ್ತದೆ. ಮುಂದೆ ನೀವು ಕಾಡಿಗೆ ಹೋದಾಗ ಅಥವಾ ನಿಮ್ಮ ಸ್ನೇಹಿತರು ಹೋದಾಗ ಅವರಿಗೆ ಮೇಲಿನಂತೆ ಅರಿವು ಮೂಡಿಸಿದರೆ ನನ್ನ ಬರಹ ಸಾರ್ಥಕವಾದಂತೆ . ಕಬಿನಿಯ ಯಾತ್ರೆಯಲ್ಲಿ ಜೊತೆಗಿದ್ದು ಒಳ್ಳೆಯ ಮಾತುಗಳನ್ನು ಹೇಳಿ ಮೆಚ್ಚುಗೆ ನೀಡಿದ ಎಲ್ಲಾ ಬ್ಲಾಗ್ ಗೆಳೆಯರಿಗೂ ನನ್ನ ಕೃತಜ್ಞತೆಗಳು.ಇಲ್ಲಿಗೆ ಕಬಿನಿ ಕಾಡಿನ ಅನುಭವಗಳ ನೆನಪಿನ ಮೂಟೆ ಖಾಲಿಯಾಗಿದೆ. ನಮಸ್ಕಾರ ಮತ್ತೆ ಹೊಸ ವಿಷಯದೊಂದಿಗೆ ಭೇಟಿಯಾಗೋಣ.
Comments
ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ...
In reply to ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ... by rajukbhat
ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ...
ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ...
In reply to ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ... by Iynanda Prabhukumar
ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ...
ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ...