ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!!
ಕಳೆದ ಸಂಚಿಕೆಯಲ್ಲಿ ನಿಮಗೆ ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ ಕಾಡಿನ ಕಥಾನಕ ನಾನು ಹೇಗೆ ಶುರುಮಾಡಿದೆನೋ ಕಾಣೆ ಇಲ್ಲಿಯವರೆಗೆ ಏಳು ಕಂತುಗಳಾಗಿ ಇಂದಿನದು ಎಂಟನೆಯ ಕಂತಾಗಿ ನಿಮ್ಮ ಮುಂದೆ ಬರುತ್ತಿದೆ.ನನಗೆ ಗೊತ್ತು ಯಾವುದೇ ವಿಚಾರವನ್ನು ಎಳೆದು ಎಳೆದೂ ಬರೆದರೆ ಅದಕ್ಕೆ ಸ್ವಾರಸ್ಯ ವಿರುವುದಿಲ್ಲಾ ಎಂದು .ಅದಕಾಗಿ ನಿಮಗೆ ಅತಿಯಾಗಿ ಎಳೆಯದೆ ವಿಷಯವನ್ನು ನೇರವಾಗಿ ಹೇಳಲು ಪ್ರಯತ್ನಿಸುತ್ತಿದ್ದೇನೆ.ಕೆಲವರು ಬ್ಲಾಗ್ ಕಾಮೆಂಟ್ ಮೂಲಕ , ದೂರವಾಣಿ/ಮೊಬೈಲ್ ಮೂಲಕ , ಕಾಡಿನ ಲೇಖನಗಳ ಬಗ್ಗೆ ಮೆಚ್ಚಿನ ಮಾತಾಡಿ ಸಲಹೆ ಸೂಚನೆಗಳನು ನೀಡಿದ್ದಾರೆ.ಎಲ್ಲರಿಗೂ ನನ್ನ ಶುಭ ಕಾಮನೆಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ನಮಗೆಲ್ಲರಿಗೂ ತಿಳಿದಂತೆ ಕಾಡು ಎಂದೊಡನೆ ನೆನಪಿಗೆ ಬರೋದು ಆನೆ ಹುಲಿ, ಸಿಂಹ ಇತ್ಯಾದಿಗಳು ,ಹಲವರು ಕೇಳಿದರು ಅಲ್ಲಾಪ್ಪಾ ನಿಮಗೆ ಆನೆ ಸಿಕ್ಕಲಿಲ್ವಾ ಅವುಗಳ ಜೊತೆ ನಿಮ್ಮ ಅನುಭವ ಏನೂ ಇಲ್ವಾ ಅಂತಾ ಪ್ರಶ್ನೆಗಳ ಮೆಮೆ ಪ್ರಶ್ನೆ ಎಸೆಯುತ್ತಿದ್ದರು. ನಾನು ತಾಳಿ ಸಾರ್ ಸ್ವಲ್ಪ ಅದೂ ಬರುತ್ತೆ ಆತ್ರಾ ಮಾಡ್ಬೇಡಿ ಅಂತಾ ಹೇಳಿಕೊಂಡು.ಬರುತ್ತಿದ್ದೆ!!
ಬಿದಿರಿನ ಚಿಗುರು ತಿನ್ನಲು ಬಂದಿರುವ ಆನೆ !! |
ಆನೆ ಮೈಮರೆತು ಹಸಿರ ತಿನ್ನುವ ಈ ಪರಿ !! |
ಹತ್ತಿರ ಬಂದರೆ ಹುಷಾರ್ |
ಬನ್ನಿ ಎರಡನೇ ಸನ್ನಿವೇಶಕ್ಕೆ ಮೇಲಿನ ಚಿತ್ರದಲ್ಲಿದೆಯಲ್ಲಾ ಈ ಆನೆ ನಮ್ಮನ್ನು ಹೆದರಿಸಲು ಬಂದಿದ್ದ ದಿನ ನೆನೆದರೆ ಇಂದಿಗೂ ಮೈ ರೋಮಾಂಚನವಾಗುತ್ತದೆ . ಹಾಗೆ ಕಾಡು ನೋಡುತ್ತಾ ತೇಲುತ್ತಾ ಸಾಗಿದ್ದ ನಮಗೆ ದೂರದಲ್ಲಿ ಈ ಆನೆ ಕಾಣಿಸಿತು ದೋಣಿಯವರು ನಮ್ಮ ಕೋರಿಕೆಯಂತೆ ಆನೆಯ ಸಮೀಪಕ್ಕೆ ಕೊಂಡೊಯ್ದಿದ್ದರು ಹತ್ತಿರ ಹೋಗಿ ನೋಡಿದರೆ ಒಂಟಿ ಸಲಗ ಮೈಮರೆತು ಹಸಿರು ಮೆಳೆಯಲ್ಲಿ ಭೋಜನ ನಡೆಸಿತ್ತು. ನಿಶ್ಯಬ್ದ ವಾದ ಕಾಡಿನಲ್ಲಿ ಕೇವಲ ಅಲೆಯ ಸಪ್ಪಳದಿಂದ ನಮ್ಮ ಇರುವಿಕೆಯನ್ನು ಗ್ರಹಿಸಿದ ಈ ಆನೆ ಹತ್ತಿರ ಬಂದರೆ ಹುಷಾರ್ ಅನ್ನೋತರ ನಮ್ಮ ಮೇಲೆ ಎರಗಲು ಮುಖಮಾಡಿ ಸಿದ್ದವಾಗ ತೊಡಗಿತು.ಆದರೆ ನಮ್ಮ ಕಡೆಯಿಂದ ಗದ್ದಲವೇ ಇರಲಿಲ್ಲ ಹಾಗು ಅದನ್ನು ಕೆರಳಿಸುವ ಯಾವುದೇ ಚಟುವಟಿಕೆ ಇಲ್ಲದೆ ನಾವು ಕಲ್ಲು ಬಂಡೆಗಳಂತೆ ದೋಣಿಯಲ್ಲೇ ಕುಳಿತು ಇದರ ಆಟ ವನ್ನು ನೋಡುತ್ತಾ ನಿಶ್ಯಬ್ದವಾಗಿ ಅರ್ಧ ಘಂಟೆ ಕಾಲ ಕಳೆದೆವು ಕೊನೆಗೆ ಅದೇ ನಮ್ಮಿಂದ ಯಾವುದೇ ತೊಂದರೆ ಇಲ್ಲವೆಂದು ತಿಳಿದು ನಿಧಾನವಾಗಿ ಕಾಡನ್ನು ಹೊಕ್ಕಿ ಮರೆಯಾಯ್ತು.ಕಾಡಿನಲ್ಲಿ ಇಂತಹ ಸನ್ನಿವೇಶಗಳಲ್ಲಿ ಭಯಪಟ್ಟು ಕಿರುಚಿ ದಾಗ ಅಲ್ಲಿನ ಪ್ರಾಣಿಗಳು ಕೋಪಗೊಂಡು ಎರಗಿ ಬರುವ ಸಾಧ್ಯತೆ ಜಾಸ್ತಿ.ಮುಂದಿನ ಸನ್ನಿವೇಶ ಮತ್ತಷ್ಟು ಕೌತುಕವಾಗಿದೆ. ಒಂದು ಭಾರಿ ಹಾಗೆ ತೇಲುತ್ತಾ ಕಾಡಿನ ಸೌಂದರ್ಯ ಸವಿಯುತ್ತಾ ಸಾಗಿದ್ದೆವು , ಸಾ ಅಲ್ನೋಡಿ ಆನೆ ಅದೇ ಬನ್ನಿ ಅಂತಾ ಹೇಳಿ ಹತ್ತಿರ ಕರೆದು ಕೊಂದು ಹೋದರು ನಿಶ್ಯಬ್ದ ವಾದ ಕಾನನದಲ್ಲಿ ಬಿದಿರ ಮೆಳೆಯಲ್ಲಿ ಆನೆಯೊಂದು ಮೇಯುತ್ತಿತ್ತು ,ನಿಧಾನವಾಗಿ ಸದ್ದಿಲ್ಲದೇ ಅದರ ಚಲನವಲನ ನೋಡುತ್ತಾ ಇದ್ದ ನಮಗೆಅದು ಕೋಪಗೊಂಡು ಹಸಿರು ಬಿದಿರು ಬೋಂಬನ್ನು ಜೋರಾಗಿ ಎಳೆದು ಅದರ ಸಿಟ್ಟನ್ನು ತೋರಿಸುತ್ತಿತ್ತು. ಜೊತೆಗೆ ಅದರ ಶಬ್ದಕ್ಕೆ ನಿಷ್ಯಬ್ದವಾಗಿದ್ದ ಕಾಡಿನಲ್ಲಿ ಹಸಿ ಬಿದಿರನ್ನು "ಫಟಾರ್" ಅಂತಾ ಮುರಿದುಹಾಕಿದ ಶಬ್ದ ಮಾರ್ಧನಿಸಿತ್ತು.ನಮ್ಮ ಸುತ್ತಲೂಹಲವು ಆನೆಗಳು ಬಿದಿರನ್ನು ಮುರಿದು ಹಾಕಿದರೆ ಯಾವ ಶಬ್ಧ ಬರುತ್ತಿತ್ತೋ ಹಾಗೆ ಭಯಾನಕ ವಾತಾವರಣ ನಿರ್ಮಾಣ ವಾಗಿತ್ತು. ನಾವು ಕಲ್ಲು ಗಳಂತೆ ಸುಮ್ಮನೆ ದೋಣಿಯಲ್ಲಿ ಸೈಲೆಂಟಾಗಿ ಕುಳಿತು ಈ ಕೌತುಕಮಯ ಸನ್ನಿವೇಶ ನೋಡುತ್ತಾ ಇದ್ದೆವು.ಪಕ್ಕದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ "ಸಾ ಅದು ಈಟ್ ಗೆಬಂದದೆ ಹೆಣ್ಣಾನೆ ಜೊತೆಗೆ ಸಿಕ್ಕಿಲ್ಲ ಅದ್ಕೆಯಾ ಇಂಗೆ ಆಡ್ತದೆ " ಅಂತಾ ಪಿಸುಗುಟ್ಟಿದರು. ನಂತರ ನಮ್ಮನ್ನು ನೋಡಿದ ಆ ಆನೆ ಕೋಪದಿಂದ ಸೊಂಡಿಲು ಬಡಿದು ಸರ ಸರನೆ ಮಾಯವಾಯಿತು. ಅಷ್ಟು ರಭಸದಿಂದ ಹೆಜ್ಜೆ ಹಾಕಿದರೂ ಆನೆಯ ಹೆಜ್ಜೆಯ ಸಪ್ಪಳ ನಮಗೆ ಕೇಳಿಸಲಿಲ್ಲ.ಆನೆಯ ವಿಶಿಷ್ಟತೆ ಇದು ಕಾಡಿನಲ್ಲಿ ಆಷ್ಟು ಮೌನತೆ ಇದ್ದರೂ ಶಬ್ದಮಾಡದೆ ಚಲಿಸುವ ಗುಣ ಆನೆಗಿದೆ. ಬನ್ನಿ ಚಿತ್ರ ನೋಡೋಣ .
ಕೋಪದಿಂದ ನಿಂತಿದ್ದ ಒಂಟಿ ಸಲಗ |
ಮರೆಯಾಗಿ ಮತ್ತೆ ಬಿದಿರಿನ ಬಳಿಗೆ ತೆರಳಿದಾಗ
|
ಆನೆ ಹಸಿ ಬಿದಿರ ಬೋಂಬನ್ನು ಮುರಿದ ಆ ಕ್ಷಣ!! |
ನಮ್ಮನ್ನು ನೋಡಿ ಎಸ್ಕೇಪ್ ಆದ ಆನೆ. |
ಇಲ್ಲಿಯವರೆಗೂ ಒಂಟಿ ಸಲಗಗಳ ಬಗ್ಗೆ ಆಯ್ತು ಬನ್ನಿ ಆನೆಗಳ ಗುಂಪಿನ ಲೋಕಕ್ಕೆ ಬೇಸಿಗೆಯಲ್ಲಿ ಕಬಿನಿ ಒಣಗಿ ಹೋಗಿ ಕಾಡಿನ ಎಲ್ಲಾ ಪ್ರಾಣಿಗಳು ನದಿಯ ಎರಡೂ ಬದಿಯಲ್ಲಿ ಗುಂಪಾಗಿ ಕಾಣಿಸಿಕೊಳ್ಳುತ್ತವೆ ,ಆದ್ರೆ ಹಸಿವಿಲ್ಲದೆ ಯಾವ ಪ್ರಾಣಿಯೂ ಮತ್ತೊಂದು ಪ್ರಾಣಿಯನ್ನು ಬೇಟೆ ಆಡುವುದಿಲ್ಲ.ಆದಾಗ್ಯೂ ಗುಂಪಾಗಿ ಬಹಳ ಎಚ್ಚರಿಕೆಯಿಂದ ಜೀವಿಸುತ್ತವೆ.ನಯು ಬೇಸಿಗೆಯಲ್ಲಿ ಹೋದಾಗ ನಡಿಪಾತ್ರ ಒಣಗಿ ಹಿಂದೆ ದೋಣಿಯಲ್ಲಿ ಕುಳಿತು ತೇಲಿದ ಪ್ರದೇಶದಲ್ಲಿ ವಾಹನದಲ್ಲಿ ಹೋಗಬಹುದಾಗಿತ್ತು ಹಾಗಾಗಿ ಈ ಬಾರಿ ಬಹಳಷ್ಟು ಓಡಾಡ್ತಾ ನಡೆಸಿದೆವು ಗುಂಪು ಗುಂಪಾಗಿ ಕಂಡ ಆನೆಗಳ ಮೇಳ ಕಾನನದಲ್ಲಿ ನಡೆದಿತ್ತು. ಬಹುಶಃ ಜೀವನದಲ್ಲಿ ಒಮ್ಮೆಗೆ ಅಷ್ಟೊಂದು ಆನೆಗಳನ್ನು ನೋಡಿರಲಿಲ್ಲ. ಆನೆಗಳ ಗುಂಪನ್ನು ಬೆಳಗಿಂದ ಸಂಜೆವರೆಗೆ ನೋಡಿದರೂ ಬೇಸರ ವಾಗಲಿಲ್ಲ ಬನ್ನಿ ನೀವೂ ಅದನ್ನು ನೋಡಿ.
ಹಸಿರ ಕಾನನದಿ ಮೆರೆದಿದ್ದ ಗಜ ಸಮೂಹ !! |
ಬಾ ಮಗು ಜೊತೆಯಾಗಿ ಸಾಗೋಣ!!! |
ಯಾರೋ ಬಂದ್ರೂ ನಡೀರಿ ಹೋಗೋಣ!! |
ನಮ್ಮ ಸಂಸಾರ ಆನಂದ ಸಾಗರ !!! |
ಕಾಡಿನ ಮಕ್ಕಳು ನಾವೆಲ್ಲಾ!! |
ನಮ್ಮ ಇರುವಿಕೆಯನ್ನು ತಿಳಿದು ಮರಿಯಾನೆ ಸುತ್ತ ಕೋಟೆ ಕಟ್ಟಿ ಕಾವಲು ನಿಂತಗಜ ಪಡೆ !! |
ಆನೆಗಳ ಸಾಮ್ರಾಜ್ಯದಿಂದ ಹೊರಗೆ ಬರುವಾಗ ಕೊನೆಯ ಚಿತ್ರದಲ್ಲಿನ ದೃಶ್ಯ ನನ್ನ ಮನ ಕಲಕಿತು. ಹೌದು ಈ ಆನೆಗಳು ಒಂದು ಮರಿಯನ್ನು ರಕ್ಷಿಸಲು ನಿಂತ ಪರಿ ನನ್ನ ಮಾನವ ಸಂಕುಚಿತ ಬುದ್ದಿಗೆ ದಿಕ್ಕಾರ ಕೂಗಿದಂತಿತ್ತು. ನಾವೇನು ಕಡಿಮೆಯೇ ಪ್ರಾಣಿಗಳು ಹಸಿದಾಗ ಬೇಟೆಯಾಡಿದರೆ ನಾವು ಹೊಟ್ಟೆ ತುಂಬಿದ್ದರೂ ಬರಗೆಟ್ಟವರಂತೆ ಬಕಾಸುರರಾಗಿ ಸಿಕ್ಕಿದ್ದೆಲ್ಲವನ್ನೂ ಕಬಳಿಸಿ ಬೇರೆ ಜೀವಿಗಳ ನೆಮ್ಮದಿ ಹಾಳು ಮಾಡಿ ಮೆರೆದಿರುವ ಬಗ್ಗೆ ನಾಚಿಕೆಯಾಯಿತು.[ಬ್ಲಾಗಿಗೆ ಪ್ರಕಟಿಸಲು ಆನೆಗಳ ಗುಂಪು ಬಗ್ಗೆ ಕೆಲವು ಫೋಟೋಗಳನ್ನು ನೀಡಿದ ಶ್ರೀಧರ್ ಗೆ ಧನ್ಯವಾದಗಳು.]
Comments
ಉ: ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!!
In reply to ಉ: ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! by kamalap09
ಉ: ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!!
ಉ: ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!!
In reply to ಉ: ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! by manju787
ಉ: ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!!